ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಈ ಆರ್ಥಿಕ ವರ್ಷದಲ್ಲಿ ದಿನಕ್ಕೆ 349 ರೂ. ಕೂಲಿ ದೊರೆಯಲಿದೆ.
ವೈಯಕ್ತಿಕವಾಗಿ ತೋಟಗಾರಿಕೆ ಕಾಮಗಾರಿಗಳಾದ ಅಡಿಕೆ ಗಿಡ ನಾಟಿ, ಅಡಿಕೆ ಎಡೆ ಗಿಡ ನಾಟಿ, ತೆಂಗು, ಕೊಕ್ಕೋ, ಕಾಳುಮೆಣಸು, ವೀಳ್ಯದೆಲೆ, ಉಜಿರ್ ಕಣಿ (ಬಸಿ ಕಾಲುವೆ), ಇತ್ಯಾದಿ ಅಥವಾ ಯೋಜನೆಯಡಿ ಅವಕಾಶಗಳಿರುವ ಬಾವಿ, ದನದ ಹಟ್ಟಿ, ಕೋಳಿ, ಆಡು, ಹಂದಿ ಶೆಡ್, ಬಚ್ಚಲು ಗುಂಡಿ, ಇಂಗು ಗುಂಡಿ, ಬೋರ್ ವೆಲ್ ರಿಚಾರ್ಜ್, ಬಯೋಗ್ಯಾಸ್, ಗೊಬ್ಬರದ ಗುಂಡಿ, ಎರೆಹುಳು ಗೊಬ್ಬರ ಘಟಕ ಹೀಗೆ ಇನ್ನಿತರ ಕಾಮಗಾರಿಗಳನ್ನು ಮಾಡಲಿಚ್ಚಿಸುವ
ಅರ್ಹ (ಬಿಪಿಎಲ್, ಎಸ್.ಸಿ, ಎಸ್.ಟಿ., ವಸತಿ ಯೋಜನೆ ಫಲಾನುಭವಿಗಳು ಸಣ್ಣ, ಅತಿ ಸಣ್ಣ ರೈತರು) ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ನಮ್ಮ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ನಮ್ಮ ಗ್ರಾಮ ಪಂಚಾಯತ್ ಅನ್ನು ಸಂಪರ್ಕಿಸಿ ಅಥವಾ ತಾಲೂಕು ಮಾಹಿತಿ, ಶಿಕ್ಷಣ ಸಂವಹನ ಸಂಯೋಜಕರನ್ನು ಸಂಪರ್ಕಿಸಬಹುದು.