ಮಾತೆರೆಗ್ಲ ಸೊಲ್ಮೆಲು ಕೇಸರಿ ಶಲ್ಯದೊಂದಿಗೆ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಯಾ.ಬ್ರಿಜೇಶ್ ಚೌಟ
ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸದರಾಗಿ ಅಯ್ಕೆಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇಂದು ಪ್ರಮಾಣ ವಚನ ಸ್ವೀಕರಿಸಿದರು.
“ಕೇಸರಿ ಶಲ್ಯ”ದೊಂದಿಗೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಯಾಪ್ಟನ್ ತುಳುನಾಡಿನ ದೈವ ದೇವರ ಹೆಸರಿನಲ್ಲಿ ವಚನ ನೀಡಿದರು.
ಕೊನೆಯದಾಗಿ “ಮಾತೆರೆಗ್ಲ ಸೊಲ್ಮೆಲು” ಎಂಬ ಪದದೊಂದಿಗೆ ತುಳು ಭಾಷೆಯ ಕಂಪನ್ನು ದೆಹಲಿಯಲ್ಲಿ ರಾರಾಜಿಸಿದೆ. ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿಸುವಲ್ಲಿ ಪ್ರಯತ್ನಗಳು ನಡೆಯಿತ್ತಿದ್ದು ಈ ವಿಚಾರಕ್ಕೆ ಪ್ರಸ್ತುತ ಕರಾವಳಿ ಶಾಸಕರ ಸಹಕಾರ ಅಗತ್ಯವಿದ್ದು ಸಂವಿಧಾನದ ಪರಿಚ್ಛೇದ ಸೇರಿಸುವಲ್ಲಿ ಕೇಂದ್ರ ಸರಕಾರ ಬಹುಪಾಲು ಅಗತ್ಯವಿದೆ. ಭಾಷೆಗೆ ಮಾನ್ಯತೆ ಸಿಗುವಂತಾಗಲಿ ಎನ್ನುವುದು ಸಮಸ್ತ ತುಳುವರ ಅಭಿಪ್ರಾಯ ಮತ್ತು ಆಸೆಯಾಗಿದೆ ತುಳು ಭಾಷೆಗೆ ಮಾನ್ಯತೆ ನೀಡುವಲ್ಲಿ ಶ್ರಮವಹಿಸುವರೆಂಬ ನಂಬಿಕೆ ತುಳುವರದ್ದಾಗಿದೆ