ಹೊಸದಿಲ್ಲಿ: ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಯೊಂದಿಗೆ ನಿಕಟ ಸಂಪರ್ಕ ಮೂಲಭೂತವಾದ ಬೋಧಕ ಖ್ವಾರಿ ಇದ್ರಿಸ್ ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಖ್ವಾರಿ ಇದ್ರಿಸ್ ಅಲಿಯಾಸ್ ಘಾಜಿ ಇದ್ರಿಸ್ ಎಂದೂ ಕರೆಯಲ್ಪಡುವ ಇದ್ರಿಸ್, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಕೋಟ್ಲಿ-ಮಿರ್‌ಪುರ್ ವಿಭಾಗದಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಅನಾಮಧೇಯ ದಾಳಿಕೋರರು ಮುಜಾಫರ್‌ಬಾದ್‌ನಲ್ಲಿ ಇದ್ರಿಸ್ ಮೇಲೆ ವಿಷಪೂರಿತ ಸೂಜಿಯಿಂದ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಪರಿಣಾಮವಾಗಿ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಖ್ವಾರಿ ಇದ್ರಿಸ್ ಪ್ರದೇಶದಾದ್ಯಂತ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕೆ ಹೆಸರುವಾಸಿಯಾದ ಲಷ್ಕರ್-ಎ-ತೈಬಾದೊಂದಿಗೆ ದೀರ್ಘಕಾಲದ ಒಡನಾಟವನ್ನು ಹೊಂದಿರುವ ತೀವ್ರಗಾಮಿ ಬೋಧಕರಾಗಿದ್ದ. ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಭಯೋತ್ಪಾದಕ ಬಣಗಳ ನಡುವೆ ನಡೆಯುತ್ತಿರುವ ಸಂಘರ್ಷದ ಕಾರಣಗಳಿಂದಾಗಿದೆ ಇದ್ರಿಸ್ ಹತ್ಯೆ ಯಾಗಿದೆ ಎಂದು ಹಲವರು ಶಂಕಿಸಿದ್ದಾರೆ.ಕೆಲವು ದಿನಗಳ ಹಿಂದೆಯಷ್ಟೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮಾಜಿ ಸದಸ್ಯ, ಜಮಾತ್-ಇ-ಇಸ್ಲಾಮಿ J&K ನಾಯಕ ಮತ್ತು ಹುರಿಯತ್ ಚಳವಳಿಯ ಪ್ರಮುಖ ವ್ಯಕ್ತಿ ಮೌಲಾನಾ ಗುಲಾಂ ನಬಿ ನೌಶ್ರಿ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದ.
ಕಳೆದ ವಾರ, ಪಾಕಿಸ್ತಾನ ಪಂಜಾಬ್‌ನ ಝೀಲಂ ಪ್ರದೇಶದ ಲಿಲ್ಲಾ ಇಂಟರ್‌ಚೇಂಜ್‌ನಲ್ಲಿ ಪಾಕಿಸ್ತಾನದ ನಿವೃತ್ತ ಸೇನಾ ಬ್ರಿಗೇಡಿಯರ್ ಅಮೀರ್ ಹಮ್ಜಾನನ್ನು ಅಪರಿಚಿತ ಬಂದೂಕುಧಾರಿಗಳು ಮಾರಣಾಂತಿಕವಾಗಿ ಹೊಡೆದುರುಳಿಸಿದ್ದರು. ಬ್ರಿಗೇಡಿಯರ್ ಹಮ್ಜಾ ತನ್ನ ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿದ್ದಾಗ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.