ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರ ಹೆಚ್ಚಿಸಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ಪ್ರತಿ ಲೀಟರ್ ಪ್ಯಾಕೆಟ್ ಹಾಲಿನ ದರವನ್ನು 2 ರೂ. ನಷ್ಟು ಹೆಚ್ಚಿದೆ. ಇನ್ನೂ ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಲ್‌ಗಳಲ್ಲಿ ಕಾಫಿ, ಟೀ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಪಿ.ಸಿ ರಾವ್ ಮಾತನಾಡಿದ್ದಾರೆ.
ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಫಿ ಪುಡಿ, ಟೀ ಪುಡಿ ದರ ಬೆಲೆ ಜಾಸ್ತಿ ಇದೆ. ಈಗ ಹಾಲಿನ ಬೆಲೆಯೂ ಜಾಸ್ತಿಯಾಗಿದೆ. ಆದ್ದರಿಂದ ಹೋಟೆಲ್ ಮಾಲೀಕರು ಕಾಫಿ, ಟೀ ಬೆಲೆ ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಿದ್ದಾರೆ. ಕಾಫಿ, ಟೀ ಬೆಲೆ 10 ರೂ. ಇದ್ದರೆ, 12 ರೂ.ಗಳಿಗೆ ಹೆಚ್ಚಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸಂಘ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ಬೆಲೆ ಏರಿಕೆ ಮಾಡುವುದು ಹೋಟೆಲ್ ಮಾಲೀಕರ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಪಿ.ಸಿ ರಾವ್ ಪ್ರತಿಕ್ರಿಯಿಸಿದ್ದಾರೆ.
ಕಬಾಬ್‌ಗೆ ಕೃತಕ ಬಣ್ಣ ನಿಷೇಧ ಸ್ವಾಗತಾರ್ಹ:
ಇನ್ನೂ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಬಳಿಕ ಕಬಾಬ್ ಪದಾರ್ಥಗಳಿಗೆ ಕೃತಕ ಬಣ್ಣ ಬಳಕೆ ನಿಷೇಧಿಸಿರುವ ಆರೋಗ್ಯ ಇಲಾಖೆ ನಿರ್ಧಾರವನ್ನು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಹೋಟೆಲ್ ಮಾಲೀಕರೂ ಇದನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಂಘ ಹೇಳಿದೆ.
ಹಾಲಿನ ದರ ಯಾವುದಕ್ಕೆ ಎಷ್ಟು ಹೆಚ್ಚಳ:
ಸದ್ಯ ಕೆಎಂಎಫ್ ಪ್ರತಿ ಲೀಟರ್ ಪ್ಯಾಕೆಟ್ ಹಾಲಿನ ದರ ಹೆಚ್ಚಿಸಿದ್ದು, ಇದರೊಂದಿಗೆ ಪ್ಯಾಕೆಟ್ ಹಾಲಿನ ಪ್ರಮಾಣವನ್ನು 50 ಎಂಎಲ್ ಹೆಚ್ಚುವರಿ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್ (1 ಲೀಟರ್) ಪ್ಯಾಕೆಟ್ ಹಾಲು ಇನ್ಮುಂದೆ 1,050 ಎಂಎಲ್ ಹಾಗೂ ಅರ್ಧ ಲೀಟರ್ ಪ್ಯಾಕೆಟ್ ಹಾಲು 550 ಎಂಎಲ್ ಹೆಚ್ಚುವರಿ ಸಿಗಲಿದೆ. ಪರಿಷ್ಕೃತ ದರ ಜೂನ್ 26ರಿಂದಲೇ ಜಾರಿಯಾಗಲಿದೆ.
ಯಾವುದಕ್ಕೆ ಎಷ್ಟು ದರ ಹೆಚ್ಚಳ?
ಟೋನ್ಡ್ ಹಾಲು
550 ಎಂಎಲ್ – 24 ರೂ.
1050 ಎಂಎಲ್ – 44 ರೂ.
ಹೋಮೋಜಿನೈಸ್ಡ್ ಟೋನ್ಡ್ ಹಾಲು
550 ಎಂಎಲ್ – 24 ರೂ.
1050 ಎಂಎಲ್ – 45 ರೂ.
ಹೋಮೋಜಿನೈಸ್ಡ್ ಹಸುವಿನ ಹಾಲು
550 ಎಂಎಲ್ – 26 ರೂ.
1050 ಎಂಎಲ್ – 48 ರೂ.
ಸ್ಪೆಷಲ್ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 50 ರೂ.
ಶುಭಂ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 50 ರೂ.
ಸಮೃದ್ಧಿ ಹಾಲು
550 ಎಂಎಲ್ – 28 ರೂ.
1050 ಎಂಎಲ್ – 53 ರೂ.
ಹೋಮೋಜಿನೈಸ್ಡ್ ಶುಭಂ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 51 ರೂ.
ಸತೃಪ್ತಿ ಹಾಲು
550 ಎಂಎಲ್ – 30 ರೂ.
1050 ಎಂಎಲ್ – 57 ರೂ.
ಶುಭಂ ಗೋಲ್ಡ್ ಹಾಲು
550 ಎಂಎಲ್ – 28 ರೂ.
1050 ಎಂಎಲ್ – 51 ರೂ.
ಡಬಲ್ ಟೋನ್ಡ್ ಹಾಲು
550 ಎಂಎಲ್ – 23 ರೂ.
1050 ಎಂಎಲ್ – 43 ರೂ.