ಮುಂಬೈ: ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಹಲವು ಜನರಿಗೆ ವಂಚಿಸಿದ ಆರೋಪದ ಮೇರೆಗೆ 47 ವರ್ಷದ ವ್ಯಕ್ತಿಯೊಬ್ಬನನ್ನು ಕರ್ನಾಟಕ ಪೊಲೀಸರು ಮುಂಬೈಯಲ್ಲಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಬೆಳಗಾವಿ ಮೂಲದ ಆರ್ಗಂಡ ಅರವಿಂದ್ ಕುಮಾರ್ ಬಂಧಿತ ಆರೋಪಿ. ನಗರದ ಸಕಿನಾಕಾ ಪ್ರದೇಶದಲ್ಲಿನ ಅವರ ಉದ್ಯೋಗ ಮಾಹಿತಿ ಕೇಂದ್ರದಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಅವರ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಬಂಧಿಸಿರುವುದಾಗಿ ಅವರು ಹೇಳಿದರು.
ಕುಮಾರ್ ವೈದ್ಯಕೀಯ ಸೀಟು ಕೊಡಿಸುವುದಾಗಿ ದೂರುದಾರರಿಂದ ಹಣ ಪಡೆದಿದ್ದರು. ಆದರೆ ಕೆಲಸ ಕೊಡಿಸಿರಲಿಲ್ಲ. ಇದು NEET ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿಲ್ಲ. ಅವರು ಮುಂಬೈಯ ಸಕಿನಾಕಾದಲ್ಲಿ ಉದ್ಯೋಗ ಮಾಹಿತಿ ಕೇಂದ್ರ ತೆರೆದಿದ್ದು, ಅಲ್ಲಿ ಅಲ್ಲಿ ಕರ್ನಾಟಕ ಪೊಲೀಸರು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ಆರೋಪಿ ಮತ್ತಷ್ಟು ಜನರನ್ನು ವಂಚಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
NEET-UG ಪೇಪರ್ ಸೋರಿಕೆ ಪ್ರಕರಣದ ಸಿಬಿಐ ತನಿಖೆಯ ಮಧ್ಯೆ ವೈದ್ಯಕೀಯ ಕಾಲೇಜುಗಳಲ್ಲಿನ ಪ್ರವೇಶಗಳು ಗಮನ ಸೆಳೆದಿವೆ. ಸಿಬಿಐ ತನ್ನ ತನಿಖೆಗೆ ಸಂಬಂಧಿಸಿದಂತೆ ಅನೇಕ ರಾಜ್ಯಗಳಲ್ಲಿ ಆರೋಪಿಗಳ ಬಂಧನ ಕಾರ್ಯದಲ್ಲಿ ತೊಡಗಿದೆ.