ರಾಮ ಮಂದಿರ ಸೋರಿಕೆ ಅಧಿಕಾರಿಗಳನ್ನು ಅಮಾನತು ಮಾಡಿದ ಯೋಗಿ ಸರಕಾರ
ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರದಲ್ಲಿ ಕೇಳಿ ಬಂದ ವಿಚಾರವೇ ರಾಮಮಂದಿರ ಛಾವಣಿ ಸೋರುತಿದೆ ಎಂದು ಹಲವು ಪರ ಮತ್ತು ವಿರೋಧ ವರದಿಗಳು ಕೇಳಿ ಬಂದ ನಂತರ ಇದೀಗ ಉತ್ತರ ಪ್ರದೇಶ ಸರಕಾರ ಎಚ್ಚೆತ್ತುಕೊಂಡಿದೆ.
ಈ ವಿಚಾರವಾಗಿ ಯೋಗಿ ಸರಕಾರ ಆರು ಅಧಿಕಾರಿಗಳನ್ನು ಅಮಾನತು ಮಾಡಿದೆ ಎಂದು ತಿಳಿದು ಬಂದಿದೆ.
ರಾಜ್ಯದ ಲೋಕೋಪಯೋಗಿ ಇಲಾಖೆ ಮತ್ತು ಜಲ ನಿಗಮದ ಅಧಿಕಾರಿಗಳು ಶಿಸ್ತು ಕ್ರಮಕ್ಕೆ ಒಳಗಾಗಿದ್ದಾರೆ. ಅಯೋಧ್ಯೆಯ ರಾಮಪಥದ ಹಲವೆಡೆ ರಸ್ತೆಗಳು ಕುಸಿದಿದ್ದು ಅನೇಕ ಕಡೆಗಳಲ್ಲಿ ನೀರು ಹರಿಯದೆ ನಿಂತಿದೆ ಎಂದು ವರದಿಯಾಗಿದ್ದವು. ನೂತನವಾಗಿ ನಿರ್ಮಿಸಲಾದ ರಾಮಪಥ ಹತ್ತು ಕಡೆಗಳಲ್ಲಿ ರಸ್ತೆ ಕುಸಿದಿತ್ತು. ರಾಮಮಂದಿರ ಲೋಕಾರ್ಪಣೆ ಸಂಧರ್ಭಕ್ಕಾಗಿ ರಾಮಪಥವನ್ನು ನಿರ್ಮಿಸಲಾಗಿತ್ತು. ಜನವರಿ 22 ರಂದು ಪ್ರಧಾನಿ ನರೆಂದ್ರ ಮೋದಿ ನೂತನ ಮಂದಿರವನ್ನು ಉದ್ಘಾಟಿಸಿದ್ದರು. ಈ ಕ್ರಮದ ಮೂಲಕ ಯೋಗಿ ಸರಕಾರ ಬದ್ಧತೆಯನ್ನು ಉಳಿಸಿಕೊಂಡಿದೆ ಎಂದು ತಿಳಿದುಬಂದಿದೆ