ಪುತ್ತೂರು: ಬಹುಕಾಲದ ಕನಸು ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಶಾಸಕ ಅಶೋಕ್ ರೈ ಮನವಿ
ಪುತ್ತೂರು ಜನತೆಯ ಬಹುಕಾಲದ ಬೇಡಿಕೆಯಾಗಿರುವ ಮೆಡಿಕಲ್ ಕಾಲೇಜಿಗೆ ಈ ಬಾರಿ ಬಜೆಟ್ ನಲ್ಲಿ ಅನುಮೋದನೆ ನೀಡಬೇಕೆಂದು ಆಗ್ರಹಿಸಿ ವೈದ್ಯಕೀಯ ಶಿಕ್ಷಣಸಚಿವ ಶರಣಪ್ರಕಾಶ್ ರವರಿಗೆ ಹಾಗೂ ಮುಖ್ಯಮಂತ್ರಿಗಳ ಹಣಕಾಸು ಕಾರ್ಯದರ್ಶಿ ಎಲ್ ಜೆ ಅತೀಕ್ ಅವರಿಗೆ ಶಾಸಕ ಅಶೋಕ್ ರೈಯವರು ಮನವಿ ಸಲ್ಲಿಸಿದರು.
ಈ ಹಿಂದೆ ಶಕುಂತಲಾ ಶೆಟ್ಟಿ ಶಾಸಕರಾಗಿದ್ದ ವೇಳೆ ಸೇಡಿಯಾಪು ಬಳಿ ಜಾಗ ಗುರುತಿಸಿದ್ದು ನಂತರ ಶಾಸಕರಾಗಿದ್ದ ಸಂಜೀವ ಮಠಂದೂರು ಈ ಕೆಲಸವನ್ನು ಮುಂದುವರಿಸುವಲ್ಲಿ ವಿಫಲರಾಗಿದ್ದ ಪ್ರಸ್ತುತ ಅಶೋಕ್ ರೈ ಶಾಸಕರಾಗಿ ಆಯ್ಕೆಯಾದ ದಿನದಿಂದಲೇ ಮೆಡಿಕಲ್ ಕಾಲೇಜ್ ನಿರ್ಮಿಸುವ ಬಗ್ಗೆ ಮುತುವರ್ಜಿವಹಿಸಿದ್ದು ಕಳೆದ ಬಜೆಟ್ ನಲ್ಲಿ ಘೋಷಣೆಯಾಗದಿದ್ದರು ಈ ಬಾರಿ ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದು ತನ್ನ ಅಧಿಕಾರ ಮುಗಿಯುವ ಮೊದಲು ಮೆಡಿಕಲ್ ಕಾಲೇಜ್ ನಿರ್ಮಿಸುವುದು ಅವರ ಧ್ಯೇಯವಾಗಿದೆ