ಟ್ರಾನ್ಸ್ ಫಾರ್ಮರ್ ಅಳವಡಿಸದೆ ಬೋರ್ ವೆಲ್ಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಸಭೆಯಲ್ಲಿ ಶಾಸಕ ಅಶೋಕ್ ರೈ ಕೆಂಡಾಮoಡಲ
ಆದೇಶ ಹೊರಡಿಸಿದ ಉಸ್ತುವಾರಿ ಸಚಿವರು
ಮಂಗಳೂರು: ಕೊಳವೆ ಬಾವಿ ತೆಗೆದರೆ ಅದಕ್ಕೆ ವಿದ್ಯುತ್ ಸಂಪರ್ಕ ನೀಡಬೇಕಾದಲ್ಲಿ ಟ್ರಾನ್ಸ್ ಫಾರ್ಮರ್ ಅಳವಿಡಿಸಲೇಬೇಕು, ಇಲ್ಲದೇ ಇದ್ದಲ್ಲಿ ಕನೆಕ್ಷನ್ ಕೊಡುವುದೇ ಇಲ್ಲ ಇದು ಯಾವ ಕಾನೂನು. ಮೆಸ್ಕಾಂ ನವರ ವಿಳಂಭ ಕೆಲಸಕ್ಕೆ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ.
ಮೆಸ್ಕಾಂ ನವರು ಟ್ರಾನ್ಸ್ ಫಾರ್ಮರ್ ಅಳವಡಿಸುವಾಗ ಮೂರರಿಂದ ನಾಲ್ಕು ತಿಂಗಳು ಬೇಕಾಗ್ತದೆ ಅಷ್ಟರವರೆಗೆ ಬೋರ್ ವೆಲ್ ಗೆ ಕರೆಂಟ್ ಕನೆಕ್ಷನ್ ಕೊಡುತ್ತಿಲ್ಲ ಈ ನಿಯಮದಿಂದ ಕೃಷಿಕರಿಗೆ ತೊಂದರೆಯಾಗುತ್ತಿದೆ ತಕ್ಷಣ ಈ ನಿಯಮ ತೆಗೆದು ಹಾಕಿ ಎಂದು ಜಿಲ್ಲಾ ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹಿಸಿದರು. ಶಾಸಕರ ಮಾತಿಗೆ ವಿಧಾನಪರಿಷತ್ ಸದಸ್ಯರಾದ ಐವನ್ ಎಇಸೋಜಾ ದನಿಗೂಡಿಸಿದರು.
ಇದರ ಬಗ್ಗೆ ಸ್ಪಷ್ಟೀಕರಣ ನೀಡಿದ ಉಸ್ತುವಾರಿ ಸಚಿವರೂ ಸಭೆಯ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಮಾತನಾಡಿ ಈ ನಿಯಮ ಮಾಡಿ ಎಂದು ನಿಮಗೆ ಹೇಳಿದವರು ಯಾರು? ನಿಮ್ಮಷ್ಡಕ್ಕೆ ನೀವು ಕಾನೂನು ರೂಪಿಸುವುದಾ? ಎಂದು ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡು ತಕ್ಷಣವೇ ಈ ನಿಯಮ ತೆಗೆದು ಹಾಕಿ. ಬೋರ್ ವೆಲ್ ತೆಗೆದರೆ ತಕ್ಷಣ ವಿದ್ಯುತ್ ಸಂಪರ್ಕ ಕೊಡಿ ಎಂದು ಸಚಿವರು ಸೂಚನೆಯನ್ನು ನೀಡಿದರು.
ಫ್ಲಾಟಿಂಗ್ ಗೆ ಸಮಯ ನಿಗಧಿಮಾಡಿ ಬಡವರನ್ನು ಕಚೇರಿಗೆ ಅಲೆದಾಡಿಸುವ ಕೆಲಸ ಮಾಡಬೇಡಿ : ಶಾಸಕ ಅಶೋಕ್ ರೈ
ಫ್ಲಾಟಿಂಗ್ ಅರ್ಜಿ ಹಾಕಿ ನಾಲ್ಕರಿಂದ ಐದು ವರ್ಷಗಳಿಂದ ಕಾಯುತ್ತಿದ್ದಾರೆ, ಪ್ರತೀ ದಿನ ತಾಲೂಕು ಕಚೇರಿ ಅಲೆದಾಡುತ್ತಿದ್ದಾರೆ, ಫ್ಲಾಟಿಂಗ್ ಗೆ ಸರಕಾರ ತಕ್ಷಣ ಸಮಯ ನಿಗಧಿಮಾಡಬೇಕು ಎಂದು ಶಾಸಕ ಅಶೋಕ್ ರೈ ಯವರು ಸಭೆಗೆ ತಿಳಿಸಿದರು.
ಜಿಲ್ಲಾ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕರು ಫ್ಲಾಟಿಂಗ್ ಇಷ್ಡು ದಿನದೊಳಗೆ ಮಾಡಿಕೊಡಬೇಕು ಎಂದು ದಿನ ನಿಗಧಿ ಮಾಡಬೇಕು ಸರ್ವೆಯರ್ ಗಳ ಕೊಎತೆವಿದೆ ಎಂದು ಇಲಾಖೆ ಸಬೂಬು ಹೇಳುತ್ತಿದೆ. ಪರವಾನಿಗೆ ಹೊಂದಿರುವ ಖಾಸಗಿ ಸರ್ವೆಯರ್ ಗಳಿಗೆ ಸರ್ವೆ ಮಾಡಿಸಲು ಸರಕಾರ ಅನುಮತಿ ನೀಡಬೇಕು. ತಾಲೂಕಲ್ಲಿ ಒಬ್ಬರೇ ಸರ್ವೆಯರ್ ಕೆಲಸ ಮಾಡಿದರೆ ಅರ್ಜಿ ವಿಕೇವಾರಿ ಮಾಡಲು ತುಂಬಾ ತಡವಾಗಬಹುದು. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಫ್ಲಾಟಿಂಗ್ ಸಮಸ್ಯೆಯನ್ನು ಬಗೆಹರಿಸಬೇಕು. ಈ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಮುಂದೆ ಬಡವರು ಇನ್ನಷ್ಡು ಕಷ್ಟ ಅನುಭವಿಸಬೇಕಾಗುತ್ತದೆ. ಸರಕಾರ ಕೂಡಲೇ ಪ್ಲಾಟಿಂಗ್ ವಿಚಾರದಲ್ಲಿ ಕೈಯ್ಯಾಡಿಸಬೇಕು. ಸಮಸ್ಯೆ ಪರಿಹರಿಸಿ ಅರ್ಜಿ ಹಾಕಿದ ಕನಿಷ್ಡ ಮೂರು ತಿಂಗಳಲ್ಲಿ ಫ್ಲಾಟಿಂಗ್ ಪೂರ್ಣವಾಗುವಂತೆ ವ್ಯವಸ್ಥೆಯಾಗಬೇಕಯ ಎಂದು ಶಾಸಕರು ಸಭೆಗೆ ತಿಳಿಸಿದರು. ಈ ಬಗ್ಹೆ ಸ್ಪಷ್ಡನೆ ನೀಡಿದ ಸಭಾಧ್ಯಕ್ಷರಾದ ಸಚಿವ ದಿನೇಶ್ ಗುಂಡೂರಾವ್ ಶಾಸಕ ಅಶೋಕ್ ರೈ ಹೇಳಿದ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ. ಫ್ಲಾಟಿಂಗ್ ಸಮಸ್ಯೆ ಇತ್ಯರ್ಥವಾಗುವಲ್ಲಿ ಖಾಸಗಿ ಸರ್ವೆಯರ್ ಗಳ ಬಳಕೆಯ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹರಿಸವುದಾಗಿ ತಿಳಿಸಿದರು.
ಅಡಿಕೆ ಹಳದಿ ಹಾಗೂ ಕೊಳೆ ರೋಗ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ: ಅಶೋಕ್ ರೈ
ಪುತ್ತೂರು ಸುಳ್ಯ ಹಾಗೂ ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಡಿಕೆಗೆ ಹಳದಿ ಹಾಗೂ ಕೊಳೆ ರೋಗ ಬಂದಿದೆ, ಯಾವುದೇ ಔಷಧಿ ಸಿಂಪಡನೆಮಾಡಿದರೂ ರೋಗ ಕಡಿಮೆಯಾಗಿಲ್ಲ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಎರಡು ತಾಲೂಕಿನ ಕೃಷಿಕರ ಬದುಕು ಮೂರಾಬಟ್ಟೆಯಾಗಲಿದೆ ಎಂದುಶಾಸಕ ಅಶೋಕ್ ರೈಯವರು ಕೆಡಿಪಿ ಸಭೆಯನ್ನು ಸಚಿವರ ಗಮನ ಸೆಳೆದರು.
ಕೊಳೆರೋಗ ಅಥವಾ ಹಳದಿ ರೋಗ ಬಂದರೆ ಕೃಷಿಕರಿಗೆ ಪರಿಹಾರ ಕೊಟ್ಟರೆ ಸಾಲದು, ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ. ಸಾವಿರಾರು ಕೃಷಿಕರು ಅಡಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಬೆಳೆ ವಿಮೆಯಲ್ಲಿ ಪರಿಹಾರ ಸರಕಾರ ಕೊಟ್ಡರೆ ಏನೂ ಸಾಲದು. ಜೀವನವೇ ಅಡಿಕೆ ಆಗಿರುವಾಗ ಪರಿಹಾರ ಎಷ್ಟು ಕೊಡಬೇಕಿದೆ? ವಿಜ್ಞಾನಿಗಳನ್ನು ಕರೆಸಿ ಈ ಬಗ್ಗೆ ಸಂಶೋಧನೆ ನಡೆಸಿ ಅದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ನಾನು ಸಿಪಿಸಿಆರ್ ಐ ವಿಜ್ಞಾನಿಗಳ ಜೊತೆ ಮಾತನಾಡಿದ್ದೇನೆ, ಸರಕಾರ ಇದಕ್ಕೆ ವಿಶೇಷ ಅನುದಾನವನ್ನುಮೀಸಲಿಡುವ ಮೂಲಕ ಅಡಿಕೆ ಕೊಳೆರೋಗ ಮತ್ತು ಹಳದಿ ರೋಗದ ಬಗ್ಗೆ ಸಂಶೋಧನೆ ಮಾಡಿ ಕೃಷಿಕರಿಗೆ ಬದುಕು ನೀಡಬೇಕಿದೆ. ಈಗಾಗಲೇ ಸುಳ್ಯ ತಾಲೂಕಿನ ಆರ್ಧ ಭಾಗ ಹಾಗೂ ಪುತ್ತೂರು ತಾಲೂಕಿನ ಒಂದೆರಡು ಗ್ರಾಮದಲ್ಲಿ ರೋಗ ಕಠಣಿಸಿಕೊಂಡಿದೆ ಎಂದು ಶಾಸಕರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ಪೃಕೃತಿ ವಿಕೋಪದಿಂದ ಪೂರ್ತಿ ಮನೆ ಬಿದ್ದರೆ 5 ಲಕ್ಷ ಪರಿಹಾರ ಕೊಡಿ: ಶಾಸಕ ಅಶೋಕ್ ರೈ ಮನವಿ
ಮಂಗಳೂರು: ಮಳೆಗೆ ಧರೆ ಕುಸಿದು, ಗಾಳಿಗೆ ಸೇರಿದಂತೆ ಪೃಕೃತಿ ವಿಕೋಪದಿಂದ ಮನೆ ಪೂರ್ತಿ ದ್ವಂಸವಾದರೆ ಅಂಥವರಿಗೆ ಸರಕಾರದಿಂದ ಕನಿಷ್ಡ 5 ಲಕ್ಷ ಪರಿಹಾರ ಕೊಡಬೇಕುಎಂದು ಶಾಸಕ ಅಶೋಕ್ ರೈ ಕೆಡಿಪಿ ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಮನವಿ ಮಾಡಿದರು.
ಸರಕಾರ ಸದ್ಯಮನೆಪೂರ್ತಿ ದ್ವಂಸವಾದರೆ 1.25 ಲಕ್ಷ ಪರಿಹಾರ ಕೊಡುತ್ತಿದೆ. ಈ ಹಣದಿಂದ ಮನೆ ಕಟ್ಲಿಕ್ಕೆ ಸಾದ್ಯವಿದೆಯೇ? ಸರಕಾರದ ಹಣ ಬರುವುದು ಹಂತ ಹಂತವಾಗಿ ಮನೆ ಯೋಜನೆ ಪೂರ್ತಿಯಾಗುವಾಗ ವರ್ಷ ಕಳೆಯುತ್ತದೆ ಅಷ್ಟುಸಮಯ ಮನೆ ಕಳೆದುಕೊಂಡವರು ಏನು ಮಾಡುವುದು? ಅವರಿಗೆ ಸೂಕ್ತ ಒಂದುಚಿಕ್ಕಮನೆಯನಿರ್ಮಾಣಕ್ಕೆ ಸರಕಾರ 5 ಲಕ್ಷ ಕೊಡುವಂತಾಗಬೇಕು ಎಂದು ಶಾಸಕರುಸಭೆಯಲ್ಲಿ ಮನವಿಮಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮನೆಗಳು ಧರೆ ಕುಸಿದು ದ್ವಂಸವಾಗಿದೆ, ಕೆಲವೊಂದು ಕಡೆ ಭಾಗಶ ಹಾನಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಧರೆ ಕುಸಿತ ಹೆಚ್ಚಾಗಿರುತ್ತದೆ. ಸರಕಾರ ವಿಶೇಷ ಗಮನಹರಿಸಿ ದ ಕ ಜಿಲ್ಲೆಗೆ ವಿಶೇಷ ಮಾನ್ಯತೆಯನ್ನು ನೀಡಿ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಶಾಸಕರು ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಹೇಳಿದರು.