ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರಿಗೆ 62 ಗ್ರಾಂ ನ ಬಂಗಾರದ ನೆಕ್ಲೇಸ್ ಸಮರ್ಪಿಸಿದ ಯುವ ಉದ್ಯಮಿ
ಹಲವಾರು ಪ್ರಮುಖ ದೇವಿ ದೇವಾಲಯಗಳಲ್ಲಿ ತುಳುನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಕೂಡ ಒಂದಾಗಿದೆ. ದುಂಬಿಯ ರೂಪದಲ್ಲಿ ಅರುಣಾಸುರನನ್ನು ವದಿಸಿ ನಂದಿನಿ ನದಿಯ ತಟದಲ್ಲಿ ಲಿಂಗರೂಪಿಯಾಗಿ ನೆಲೆಸಿದ್ದಾಳೆ ಎಂಬುದು ಐತಿಹ್ಯ. ಬೇಡಿದ ವರವನ್ನು ಕರುಣಿಸುವ ಮಹಾ ತಾಯಿ. ಅದೆಷ್ಟೋ ಭಕ್ತರನ್ನು ಹೊಂದಿರುವ ಕ್ಷೇತ್ರಕ್ಕೆ ಪರವೂರಿನಿಂದಲೂ ಸಾವಿರಾರು ಭಕ್ತರಿದ್ದಾರೆ. ಅದರಂತೆ ಬೆಂಗಳೂರಿನಿ ಯುವ ಉದ್ಯಮಿಯಾಗಿರುವ ಮಧುಸೂದನ್ ಶೃತಿ ಎಂಬವರು ಬಂಗಾರ ನೆಕ್ಲೇಸ್ ಸಮರ್ಪಿಸಿದ್ದಾರೆ.
ಸುಮಾರು 62 ಗ್ರಾಂ ತೂಕದ ನೆಕ್ಲೆಸ್ ನಲ್ಲಿ 27 ಲಕ್ಷ್ಮೀಯ ಚಿತ್ರವನ್ನು ಕೆತ್ತಲಾಗಿದ್ದು ಎರಡು ಬದಿಗಳಲ್ಲಿ ಮಯೂರನ ಚಿತ್ರ ನಿರ್ಮಿಸಲಾಗಿದ್ದು ಪಟ್ಟೆ ಸೀರೆಯೊಂದಿಗೆ ಕ್ಷೇತ್ರದ ಪ್ರಮುಖ ಅರ್ಚಕರಾದ ಅಸ್ರಣ್ಣರಲ್ಲಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.