ಮಂಗಳೂರು: ಮುಸ್ಲಿಂ ಜೋಡಿಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ದ.ಕ ಬಿಜೆಪಿ ಜಿಲ್ಲಾಧ್ಯಕ್ಷರ ಹೆಸರಿನಿಂದ ಆಮಂತ್ರಣ. ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫರಂಗಿಪೇಟೆಯ ಅಬ್ಬಾಸ್ ಎಂಬವರ ಮೊಮ್ಮಗಳು ಫಾತಿಮಾ ಕೌಸರ್ ವಿವಾಹವು ಪಾಣೆಮಂಗಳೂರಿನ ಅಬ್ದುಲ್ ರಾಝಿಕ್ ಎಂಬ ಯುವಕನೊಂದಿಗೆ ನಡೆಯಲಿದೆ. ಈ ವಿವಾಹ ಜುಲೈ 18 ರಂದು ನೇರಳಕಟ್ಟೆ ಮಾಣಿ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದೆ. ಇವರ ವಿವಾಹ ಆಮಂತ್ರಣ ಪತ್ರಿಕೆ ಪ್ರಿಂಟ್ ಆಗಿ ಹಂಚಲಾಗಿದ್ದು. ಯಾರೋ ಇದನ್ನು ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಆಮಂತ್ರಣ ಪತ್ರಿಕೆಯ ಸವಿನಯ ಆಮಂತ್ರಣದ ಜಾಗದಲ್ಲಿ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲರ ಹೆಸರಿದೆ. ಇದೀಗ ಆಮಂತ್ರಣ ಪತ್ರಿಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವರು ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲೂ ಹಾಕಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿಗಾಗಿ ಮಾಧ್ಯಮದಿಂದ ಮೂರು ನಾಲ್ಕು ಬಾರಿ ಕರೆ ಮಾಡಿದರು ಸಹ ಸತೀಸ್ ಕುಂಪಲ ಕರೆ ಸ್ವೀಕರಿಸದೇ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರ ಬಗ್ಗೆ ಪರ ವಿರೋದ ವಾದ ನಡೆಯುತ್ತಿದ್ದು ಕೆಲವೊಂದು ವಾಟ್ಸ್ ಪ್ ಗ್ರೂಪ್ ಗಳಲ್ಲಿ ಹಿಂದು ಕಾರ್ಯಕರ್ತರು ಇದು ತಪ್ಪು ಎಂದಿದ್ದಾರೆ.
ಕೆಲವೊಬ್ಬರು ಇದೊಂದು ಸಾಮರಸ್ಯಕ್ಕೆ ನಾಂದಿಯಾಗಿದೆ ಎಂದಿದ್ದಾರೆ. ಕೆಲವೊಂದು ಗ್ರೂಪ್ ಗಳಲ್ಲಿ ಇದು ಎಡಿಟ್ ಎಂದು ಕುಂಪಲ ಪರ ಕಾರ್ಯಕರ್ತರು ಬ್ಯಾಟ್ ಬೀಸಿದ ಸಂದೇಶ ಹರಿದಾಡುತ್ತಿದ್ದು ಒಂದೊಮ್ಮೆ ಇದು ನಿಜವಾಗಿದ್ದರೆ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸೌಹಾರ್ದತೆ ಸಾರಿದ್ದಂತಗುತ್ತದೆ. ಏನೇ ಆದರು ಇದರೊಳಗಿನ ಸಂಪೂರ್ಣ ವಿಚಾರಕ್ಕೆ ಸತೀಶ್ ಕುಂಪಲರೇ ಮಾಹಿತಿ ನೀಡಿ ಪರ ವಿರೋಧ ವಿಚಾರಕ್ಕೆ ತೆರೆ ಎಳೆಯಬೇಕಾಗಿದೆ.