ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಹೋರಾಟ ಮನೋಭಾವ ಇಲ್ಲದೇ ಇರುವುದು ನಮ್ಮ ಹಿನ್ನಡೆಗೆ ದೊಡ್ಡ ಕಾರಣವಾಗಿದೆ ಎಂದುಶಾಸಕ ಅಶೋಕ್ ರೈ ಹೇಳಿದರು.
ಶಾಸಕರು ಹಾಗೂ ಗೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಪಂಜಿಗುಡ್ಡೆ ಈಶ್ವರಭಟ್ ಮನೆಯಲ್ಲಿನಡೆದ ಅಡಿಕೆ ತೋಟಗಳಿಗೆ ಬಾಧಿಸುತ್ತಿರುವ ರೋಗಗಳು ಮತ್ತು ಅಡಿಕಡ ಕೃಷಿಕರ ಇತರೆ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯಕಾರ್ಯಕ್ರಮವನ್ನುಉದ್ಘಾಟಿಸಿಮಾತನಾಡಿದರು.
ಗುಟ್ಕಾ ಬಂದ್ ಆದರೆ ಅಡಿಕೆ ಬೆಲೆ ಪಾತಾಳಕ್ಕೆ ಇಳಿಯಬಹುದು ,ಗುಟ್ಕಾ ಇರುವ ಕಾರಣನಮ್ಮ ಅಡಿಕೆಯ ಮಾನ ಉಳಿದಿದೆ.ಅಡಿಕೆಗೆ ಪರ್ಯಾಯ ಬೆಳೆ ಬೆಳೆಯದೇ ಇದ್ದಲ್ಲಿಮುಂದೆ ಆತಂಕ ಎದುರಾಗಬಹುದು. ಅಡಿಕೆಗೆ ಪರ್ಯಾಯವಾಗಿ ಏನು ಬೆಳೆಯಬಹುದು ಎಂಬುದನ್ನು ಸಂಶೋಧಕರುಪತ್ತೆ ಮಾಡಬೇಕು. ಅಡಕೆ ಕೃಷಿಯಸಂಶೋಧನೆಗೆ ಇರುವ ಸಂಸ್ಥೆಗಳು ಈ ವಿಚಾರದಲ್ಲಿಮುಂದೆ ಬರಬೇಕು. ಅಡಿಕೆ ಬೆಳೆಗೆ ಬರುವ ರೋಗಗಳನ್ನು ಪತ್ತೆ ಮಾಡಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯತೆ ಇದೆ.
ಅಡಿಕೆ ಆಮದಿನಲ್ಲಿ ದೊಡ್ಡಲಾಭಿ ಇದೆ.ಕೇಂದ್ರ ಸರಕಾರದ ಅಧಿಕಾರಿಗಳಿಗೆ ಅಡಿಕೆ ಬೆಳೆಯ ಬಗ್ಗೆ ಮಾಹಿತಿಇಲ್ಲದೆ ಇರುವುದು ದುರಂತ.ಅಡಿಕೆ ಆಮದನ್ನು ಕೇಂದ್ರ ಸರಕಾರ ನಿಲ್ಲಿಸಿದರೆ ಅಡಿಕೆಗೆ 500 ದರ ಆಗಬಹುದು .
ಹವಾಮಾನ ಆಧಾರಿತ ಬೆಳೆ ವಿಮೆ ಅಡಿಕೆಗೆ ಪರಿಹಾರವಲ್ಲ. ಇದನ್ನು ನಿಲ್ಲಿಸಬೇಕು ಎಂಬ ಲಾಭಿಯೂನಡೆಯುತ್ತಿದೆ. ಹವಾಮಾನ ಆಧಾರಿತ ವಿಮೆಯು 60 % ರಾಜ್ಯ ಸರಕಾರದ ಅನುದಾನ, 30% ಕೇಂದ್ರದ ಅನುದಾನ 10% ವಿಮಾಕಂಪೆನಿಯ ಮೊತ್ತವಾಗಿದೆ ಇದರಲ್ಲಿ ರಾಜ್ಯ ಸರಕಾರದ ಪಾಲು ಜಾಸ್ತಿ ಇದೆ ಎಂದುಶಾಸಕರು ಹೇಳಿದರು.
ಅಡಿಕೆನಾಶವಾದರೆ ಬಿಕ್ಷೆ ಬೇಡುವ ಸ್ಥಿತಿ
ಎಲ್ಲಿಯಾದರೂ ಅಡಕೆ ಬೆಳೆ ನಾಶ ಅಥವಾ ಬೆಲೆ ಕಡಿಮೆಯಾದರೆ ಅಡಿಕೆ ಕೃಷಿಕರು ಬಿಕ್ಷೆ ಬೇಡುವ ಪರಿಸ್ಥಿತಿನಿರ್ಮಾಣವಾಗಬಹುದು ಅದಕ್ಕಿಂತಮುಂಚೆ ಹೋರಾಟ ಮಾಡುಬ ಮೂಲಕ ಉಳಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.