ಬಿಜೆಪಿ-ಕಾಂಗ್ರೆಸ್ ಹಾವು ಮುಂಗುಸಿಯಾಗಿ ಸ್ಪರ್ಧೆ ಮಾಡುತಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಟಕ್ಕರ್ ಆಗಿ ಬಂಡಾಯದ ಬಾವುಟದ ಹಾರಿಸಿದವರು ಅರುಣ್ ಪುತ್ತಿಲ. ಯುವ ನಾಯಕನಾಗಿ ಹಿಂದು ಸಂಘಟನೆಯ ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ ಪುತ್ತಿಲ ಬಿಜೆಪಿಯಿಂದ ಪ್ರಬಲ ಟಿಕೇಟ್ ಆಕಾಂಕ್ಷೆಯಾಗಿದ್ದರು ಕಡೆಯ ಕ್ಷಣದಲ್ಲಿ ಸುಳ್ಯ ಕ್ಷೇತ್ರದಿಂದ ಆಮದು ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡಿದರು. ತಾಳ್ಮೆಯ ಕಟ್ಟೆ ಒಡೆದ ಕಾರ್ಯಕರ್ತರು ಟಿಕೇಟ್ ಗಾಗಿ ಸುಮಾರು ವರುಷದಿಂದ ಚಾತಕ ಪಕ್ಷಿಯಂತೆ ಕಾದ ಪುತ್ತಿಲರನ್ನು ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸುವುದೇ ಸಿದ್ದ ಎಂದು ಪಣತೊಟ್ಟು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರ ಒತ್ತಾಸೆಯಂತೆ ನಾಮಪತ್ರ ಸಲ್ಲಿಸಿದರು. ಗೆಲುವಿನ ತಡ ಸೇರುವ ತವಕದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಎರಡು ಸಾವಿರ ಮತಗಳ ಅಂತರದಿಂದ ಸೋತ ಪುತ್ತಿಲ ಎರಡನೇ ಸ್ಥಾನದಲ್ಲಿದ್ದರೇ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿಯಿತು. ಬಂಡಾಯದ ಬಿಸಿಯಲ್ಲಿ ಇದ್ದ ಪುತ್ತೂರು ಬಿಜೆಪಿಗೆ ಗ್ರಾಂ.ಚುನಾವಣೆ ನಗರ ಸಭೆ ಚುನಾವಣೆಯಲ್ಲಿ ಸಹ ಪುತ್ತಿಲ ಪರಿವಾರ ಟಕ್ಕರ್ ನೀಡಿತು.
ಲೋಕಸಭಾ ಚುನಾವಣೆ:
ಮೋದಿ ಚುನಾವಣೆ ಎಂದೇ ಹೆಸರಾದ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಸ್ಪರ್ಧಿಸುವವರು ಎಂಬ ಸಂದೇಹದಲ್ಲಿದ್ದ ಬಿಜೆಪಿಗೆ ಹೊಸ ಮುಖದ ಅಭ್ಯರ್ಥಿ ಆಯ್ಕೆಯಾದ ನಂತರ ಪುತ್ತೂರಿನಲ್ಲಿ ಪುತ್ತಿಲ ಬಿಜೆಪಿ ಸೇರುವ ಬಗ್ಗೆ ಕೆಲವೊಬ್ಬರಿಗೆ ಪರ ವಿರೋಧ ಇದ್ದರು ಸಹ ಕಡೆಗೆ ಪುತ್ತಿಲ ಟೀಮ್ ಬಿಜೆಪಿ ಸೇರಿದಾಗ ಒಗ್ಗಟ್ಟಿನ ಸಂದೇಶ ಸಾರಿತು. ಹಿಂದುತ್ವದ ಚಿಂತನೆಯಲ್ಲಿ ಗೆಲ್ಲಬಹುದಾದ ದ ಕ ಜಿಲ್ಲೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಜಿಲ್ಲೆಯ ಸತತ ತಿರುಗಾಟ ಕಾರ್ಯಕರ್ತರ ಶ್ರಮದಿಂದ ಮೋದಿ ಆಗಮನದಿಂದ ಗೆಲುವಿನ ನಗು ಬೀರಿತು.
ನಂತರದ ಚುನಾವಣೆಯಲ್ಲಿ ಬಿಜೆಪಿ ಒಗ್ಗಟ್ಟಿನ ಮಂತ್ರ ಪಠಿಸಿ ಶಿಕ್ಷಕರ ಕ್ಷೇತ್ರ, ಬಂಡಾಯದ ಪದವೀಧರ ಕ್ಷೇತ್ರ ಬಿಜೆಪಿ ಗೆದ್ದು ಬೀಗಿತು.
ಪುತ್ತೂರು ನೂತನ ಮಂಡಲ..!?
ಲೋಕಸಭಾ ಚುನಾವಣೆ ಮೊದಲೇ ಕೆಲವು ಕ್ಷೇತ್ರದಲ್ಲಿ ಅಧ್ಯಕ್ಷರಾಗಿ ಘೋಷಣೆಯಾಗಿ ಕೆಲವೊಂದು ಕಡೆ ವಿರೋಧ ವ್ಯಕ್ತವಾಯಿತಾದರು ಮತ್ತೆ ಸಮಾಧಾನದಿಂದ ಮುನ್ನಡೆಯಿತು. ನೂತನ ಮಂಡಲದ ಅವಧಿ ಮುಗಿದು ಅಧ್ಯಕ್ಷರ ಆಯ್ಕೆ ಅನಿವಾರ್ಯವಾಗಿದೆ. ಆದರೆ ಇದರ ಆಯ್ಕೆಯೇ ಬಿಸಿ ತುಪ್ಪವಾಗಿದೆ.
ಅಧ್ಯಕ್ಷರ ಆಯ್ಕೆಯ ಚೆಂಡು ಜಿಲ್ಲಾಧ್ಯಕ್ಷರ ಅಂಗಳಕ್ಕೆ:
ಸತೀಶ್ ಕುಂಪಲ ನೇತೃತ್ವದಲ್ಲಿ ಬಿಜೆಪಿಗೆ ಪುತ್ತಿಲ ಟೀಮ್ ಸೇರಿದಾದ ಜವಾಬ್ದಾರಿ ಆಸೆ ಇಲ್ಲ ಎಂಬುದಾಗಿ ಗಂಟಘೋಷವಾಗಿ ಪುತ್ತಿಲ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಹೇಳಿದ್ದರು ಪ್ರಸ್ತುತ ಮಂಡಲದ ಜವಾಬ್ದಾರಿ ಯಾರಿಗೆ ಎಂಬ ಪ್ರಶ್ನೆ ಎದುರಾಗಿದ್ದು ಹಲವು ಮಂದಿ ರೇಸ್ ನಲ್ಲಿದ್ದಾರೆ. ಪಕ್ಷ ಬಲ ಪಡಿಸುವ ಯೋಚನೆಯ ಜೊತಗೆ ಜಾತಿ ಸಮೀಕರಣ, ಹಿಂದುತ್ವ, ಸಂಘಟನೆ ಮುಖ್ಯವಾಗುತ್ತದೆ ಎಂಬುದು ನಮ್ಮ ಅಂಬೋಣ.
ಮಂಗಳೂರಿನಲ್ಲಿ ನಾಳೆ ಮಾತುಕತೆ:
ಪ್ರಸ್ತುತ ಆಯ್ಕೆಯ ವಿಚಾರವಾಗಿ ನಾಳೆ ರಾಜ್ಯ ಬಿಜೆಪಿ ಸೂಚನೆ ಮೇರೆಗೆ ಜಿಲ್ಲಾ ಬಿಜೆಪಿ ಸಭೆ ಕರೆದಿದೆ ಎಂದು ಖಚಿತ ಮಾಹಿತಿ ವ್ಯಕ್ತವಾಗಿದೆ.
ಪುತ್ತಿಲ ಪರಿವಾರ ಮತ್ತು ಬಿಜೆಪಿಯ ಪ್ರಮುಖರಿಗೆ ಈಗಾಗಲೇ ದೂರವಾಣಿ ಕರೆ ಬಂದಿದ್ದು ನಾಳೆ ಸಭೆಯ ಬಗ್ಗೆ ತಿಳಿಸಲಾಗಿದೆ. ಅಂತಿಮ ನಿರ್ಣಯ ನಾಳೆಯಾದರೆ ಗ್ರಾಮಾಂತರ ಮಂಡಲ /ನಗರ ಮಂಡಲ ಅಧ್ಯಕ್ಷರಾಗಿ ಒರ್ವರೇ ಆಯ್ಕೆಯಾಗುವರೇ ಅಥವಾ ಬದಲಾವಣೆ ಜೊತೆಗೆ, ಪರಿವಾರ ಬಿಜೆಪಿ ಒಂದು ಎರಡು ಜವಾಬ್ದಾರಿ ಪಡೆದುಕೊಳ್ಳುವರೇ ಕಾದು ನೋಡಬೇಕಾಗಿದೆ. ಒಂದೊಮ್ಮೆ ಎರಡು ತಂಡದ ವಿಚಾರಗಳನ್ನು ಒಟ್ಟಾಗಿ ಸೇರಿಸಿ ಮುಗಿಸಿದರೆ ಮತ್ತೆ ಬಿಜೆಪಿ ಬಲಗೊಂಡು ಕಾಂಗ್ರೆಸ್ ಸ್ಪರ್ಧೆ ನೀಡಬಹುದು. ಯಾಕೆಂದರೆ ಇತ್ತೀಚಿಗೆ ಪುತ್ತೂರು ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯನ್ನು ಒಟ್ಟಾಗಿ ಒಗ್ಗಟ್ಟು ಪ್ರದರ್ಶನ ನಡೆಸಿದ್ದು ಮಾದರಿಯಾಗಿತ್ತು.
ಕೊನೆಯ ಘಳಿಗೆ ಆಯ್ಕೆಯಲ್ಲಿ ಯಾವ ರೀತಿ ನಡೆಯಬಹುದು ಎಂದರೆ ಜಿಲ್ಲಾ ಉಪಾಧ್ಯಕ್ಷ ಸ್ಥಾನವು ಖಾಲಿ ಇದ್ದು ಇಲ್ಲಿ ಯಾರಿಗಾದರೂ ಅವಕಾಶ ನೀಡಿ ಪುತ್ತೂರು ತಾಲೂಕು ಸಂಘಟಿಸುವರೇ ತಿಳಿಯಬೇಕಾಗಿದೆ