ಛಾಯಾಗ್ರಾಹಕ ಸಂಘ ಪುತ್ತೂರು ವಲಯ
ಛಾಯಾಗ್ರಾಹಕ ಸಂಘ ಪುತ್ತೂರು ವಲಯ ಇದರ ಉದ್ಘಾಟನಾ ಸಮಾರಂಭ ಜುಲೈ 21 ರ ಬೆಳಿಗ್ಗೆ 9 ಕ್ಕೆ ತೆಂಕಿಲ ಕೊಟ್ಟಿಬೆಟ್ಟು ತರವಾಡು ಸಮೀಪದ ಗದ್ದೆ ಯಲ್ಲಿ ನಡೆಯಿತು.
ದೀಪ ಪ್ರಜ್ವಲನೆಯನ್ನು ಶ್ರೀ ಶಶಿಧರ್ ನೈಕ್ ಇವರು ನಡೆಸಿ ಕೊಟ್ಟರು. ಇದರ ಕ್ರೀಡಾಕೂಟದ ಉದ್ಘಾಟನೆಯನ್ನು ಶ್ರೀ ರಮೇಶ್ ಕಲಾಶ್ರೀ ಎಸ್ ಕೆ ಪಿ ಎ ದ.ಕ ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ ರು ಇವರು ನೆರವೇರಿಸದರು ಹಾಗೂ ಶ್ರೀ ಭಾರಧ್ವಾಜ್ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಎಸ್ ಕೆ ಪಿ ಎ ಕೆಸರ್ಡ್ ಒಂಜಿ ದಿನ ಸ್ಪರ್ಧೆಗಳಿಗೆ ಚಾಲನೆಯನ್ನು ನೀಡಿದರು. ಉದ್ಘಾಟನೆ ಯನ್ನು ನಡೆಸಿ ಕೊಟ್ಟ ಶ್ರೀ ರಮೇಶ್ ಕಲಾಶ್ರೀ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ನಮ್ಮ ಸಾಂಸ್ಕೃತಿಕ ಕ್ರೀಡೆಯನ್ನು ಮರೆಯುವ ಈ ಕಾಲ ಘಟ್ಟದಲ್ಲಿ ಎಸ್ ಕೆ ಪಿ ಎ ಯ ಸದಸ್ಯರು ನಮ್ಮ ಹಿಂದಿನ ಪೀಳಿಗೆಯ ಈ ಒಂದು ಕೆಸರು ಗದ್ದೆಯ ಕ್ರೀಡಾಕೂಟವನ್ನು ನಡೆಸಿ ನಮಗೆಲ್ಲರಿಗೂ ಹಿಂದಿನ ಸಾಂಸ್ಕೃತಿಕ ಹಬ್ಬವನ್ನು ನೆನಪಿಸಿಕೊಟ್ಟರು.ಹಾಗೂ ಎಲ್ಲರಿಗೂ ಶುಭವನ್ನು ಹಾರೈಸಿದರು. ಶ್ರೀ ಭಾರಧ್ವಾಜ್ ಮಾತನಾಡಿ ಎಸ್ ಕೆ ಪಿ ಎ ವತಿಯಿಂದ ನಡೆಯುವ ಈ ಕೇಸರುಗದ್ದೆ ಕ್ರೀಡಾಕೂಟ ಭಾಗವಹಿಸಿದ ಎಲ್ಲಾ ವಲಯದ ಸದಸ್ಯರಿಗೆ ಶುಭವಾಗಲಿ ಹೇಳುತ್ತಾ, ಜಿಲ್ಲೆಯ ಮುಲ್ಕಿಯಲ್ಲಿ 11.08.2024ರಂದು ನಡೆಯುವ ಎಸ್ ಕೆ ಪಿ ಎ ಜಿಲ್ಲಾ ಕ್ರೀಡಾಕೂಟಕ್ಕೆ ಎಲ್ಲಾರಿಗೂ ಆಹ್ವಾನಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ದಿವಾಕರ ಗೌಡ ತೆಂಕಿಲ ಮಾತನಾಡಿ ಇತ್ತೀಚಿನ ಕಾಲದಲ್ಲಿ ನಮಗೆ ಗದ್ದೆಗಳನ್ನು ಉಳಿಸಿಕೊಳ್ಳೋದೇ ಒಂದು ದೊಡ್ಡ ಚಾಲೆಂಜ್.ಇಂತಹ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿ ಕೆಲವೊಂದು ಗದ್ದೆಗಳು ಇದೆ. ಇದನ್ನು ಉಳಿಸಿಕೊಂಡಂತಹ ಗದ್ದೆಯ ಮಾಲಕರನ್ನು ಅಭಿನಂದಿಸಿದರು ಹಾಗೂ ಈ ಭಾಗದಲ್ಲಿ ಈ ಒಂದು ಕಸರುಗದ್ದೆ ಯ ಆಟೋಟಗಳನ್ನು ನಡೆಸಿ ನಮಗೂ ಮನರಂಜನೆ ನೀಡಿದ ವಲಯದ ಸದಸ್ಯರಿಗೆಲ್ಲ ಅಭಿನಂದಿಸಿದರು.
ಕ್ರೀಡಾಕೂಟಕ್ಕೆ ಸ್ಥಳದಾನವನ್ನು ನೀಡಿದ ಜಾಗದ ಮಾಲಕರಾದ ಶ್ರೀ ಶಶಿಧರ್ ನೈಕ್ ಅವರನ್ನು ಎಸ್ ಕೆ ಪಿ ಎ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಊಟದ ವ್ಯವಸ್ಥೆ ಮತ್ತು ಪಾರ್ಕಿಂಗ್ ಗೆ ಸ್ಥಳದಾನ ನೀಡಿದ ದಿವಾಕರ ಗೌಡ ತೆಂಕಿಲ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ಪುತ್ತೂರು ವಲಯದ ಶ್ರೀ ರಘು ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ವಲಯದ ಮಾಜಿ ಅಧ್ಯಕ್ಷರಾದ ಸುದರ್ಶನ್ ರಾವ್ , ವಲಯದ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ,ಕೋಶಾಧಿಕಾರಿ ಪ್ರಮೋದ್ ಸಾಲ್ಯಾನ್ ಉಪಸ್ಥಿತರಿದ್ದರು. ಹರೀಶ್ ಎಲಿಯ ಸ್ವಾಗತಿಸಿ, ರವಿಕಿರಣ್ ಕನ್ಯಾನ ವಂದಿಸದರು.ಕಾರ್ಯ ಕ್ರಮದ ನಿರೂಪಣೆಯನ್ನು ಜೆಲ್ಲಾ ಕೋಶಾಧಿಕಾರಿ ಶ್ರೀ ನವೀನ್ ರೈ ಪಂಜಳ ನಡೆಸಿಕೊಟ್ಟರು.