ವಿಟ್ಲ: ಅಕ್ರಮ ಕಟ್ಟಡಗಳಲ್ಲಿ, ಪರವಾನಿಗೆ ಇಲ್ಲದೇ ನಡೆಯುತ್ತಿದೆ ವ್ಯಾಪಾರ. ಕಣ್ಣು ಮುಚ್ಚಿ ಕುಳಿತ ಪಿಡಿಓ, PWD ಇಲಾಖೆಯ ಪತ್ರಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು.
ಈ ಅಕ್ರಮ ಕಟ್ಟಡ, ವ್ಯಾಪಾರ ನಡೆಯುತ್ತಿರುವುದು ಬೇರೆ ಯಾವುದೊಕ ಜಿಲ್ಲೆಯಲ್ಲಿಯಲ್ಲ ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದೆಯುತ್ತಿದೆ. ವಿಟ್ಲ ಕಲ್ಲಡ್ಕ ರಸ್ತೆಯಲ್ಲಿ ಸಾಗುವಾಗ ಮಂಗಲಪದವು ಭಾಗದಲ್ಲಿ ಅನಧಿಕೃತ ಏಳು ಅಂಗಡಿಗಳು ತಲೆ ಎತ್ತಿ ನಿಂತು ನಂತರ ವ್ಯಾಪಾರ ವಹಿವಾಟು ಆರಂಭವಾಗಿ ಎರಡು ವರ್ಷಗಳೇ ಕಳೆದಿದೆ.
ಆದರೆ ಇದರ ಹಿಂದಿನ ಕಥೆ ಬೇರೆಯೇ ಇದೆ;
ವೀರಕಂಭ ಪಂಚಾಯತ್ ನಲ್ಲಿ ಬಿಜೆಪಿ ಸರಕಾರ ಅಧಿಕಾರ ಇದ್ದಾಗ ಈ ಅಕ್ರಮ ಕಟ್ಟಡದ ನಿರ್ಮಾಣವಾಗಿದೆ. ಆದರೆ ಮುಖ್ಯವಾಗಿ ಈ ಕಟ್ಟಡಕ್ಕೆ ಪರವಾನಿಗೆಯು ಇಲ್ಲದೇ ನಿರ್ಮಾಣವಾಗಿ ಡೋರ್ ನಂಬರ್, ವಿದ್ಯುತ್ ಕನೆಕ್ಷನ್ ಆಗಿದೆ ಎಂದರೇ ನೀವು ನಂಬುತ್ತೀರ.
ರಸ್ತೆ ಬದಿಯಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಇಪ್ಪತ್ತು ಮೀಟರ್ ಬಿಟ್ಟು ನಿರ್ಮಾಣ ಮಾಡಬೇಕು ಎನ್ನುವ ನಿಯಮ ಇದ್ದರು ಅದನ್ನು ಅವಗಿನ ಪಂಚಾಯತ್ ಬಿಜೆಪಿ ಅಧ್ಯಕ್ಷರು ಸುತ್ತೋಲೆಯನ್ನು ಗಾಳಿಗೆ ತೂರಿ ಅಸಡ್ಡೆ ವಹಿಸಿ ನಮ್ಮದೇ ಸಾಮ್ರಾಜ್ಯ ಎಂದು ಕಟ್ಟಡ ನಿರ್ಮಿಸಿ ಬಿಟ್ಟಿದ್ದಾರೆ.
ಇದರ ಬಗ್ಗೆ ಸಾರ್ವಜನಿಕರು PWD ಇಲಾಖೆಗೆ ಮಾಹಿತಿಗಾಗಿ ಅರ್ಜಿ ಸಲ್ಲಿಸಿ ವರದಿ ಕೇಳಿದಾಗ ಇದು ಅನಧಿಕೃತ ಕಟ್ಟಡ ಎಂದು pwd ಇಲಾಖೆ ಇದನ್ನು ತೆರವು ಮಾಡಬೇಕೆಂದು ಪತ್ರ ಮುಖೇನ ಪಂಚಾಯತ್ ಗೆ ತಿಳಿಸಿದ್ದಾರೆ.ಆದರೆ ಪಿಡಿಒ ಗಣನೆಗೆ ತೆಗೆದುಕೊಳ್ಳುದೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಅಂಗಡಿಯ ಲೈಸೆನ್ಸ್ ಅವಧಿ ಮುಗಿದಿದ್ದರು ಸಹ ಅಂಗಡಿಗಳ ಏಲಂ ಪ್ರಕ್ರಿಯೆ ನಡೆದಯದೇ, ಲೈಸೆನ್ಸ್ ನವೀಕರಣ ಮಾಡದೇ ವ್ಯಾಪಾರ ನಡೆಸುತ್ತಿದ್ದಾರೆ. ಇದನ್ನು ಗ್ರಾಮ ಪಂಚಾಯತ್ ಯಾಕೆ ಪ್ರಶ್ನಿಸುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆ.
ಈ ಬಗ್ಗೆ ಪ್ರಸ್ತುತ ಪಂಚಾಯತ್ ಅಧ್ಯಕ್ಷರನ್ನು ಪ್ರಜಾಧ್ವನಿ ನ್ಯೂಸ್ ಸಂಪರ್ಕಿಸಿದಾಗ ಇದರ ಬಗ್ಗೆ ನನಗೆ ತಿಳಿದಿಲ್ಲ ಪಿಡಿಒ ಅವರನ್ನು ಕೇಳಿ ಎಂದಿದ್ದಾರೆ.
ಪಿ ಡಿ ಒ ಅವರನ್ನು ಸಂಪರ್ಕಿಸಿದಾಗ ನಾನು ಜನವರಿಯಲ್ಲಿ ಬಂದಿದ್ದೇನೆ, PWD ಇಲಾಖೆ ಪತ್ರ ನೀಡಿದ್ದಾರೆ ಆದರೆ ನಾನು ಉತ್ತರಿಸಿಲ್ಲ. ಕಟ್ಟಡ ನಿರ್ಮಾಣದ ಕಂಟ್ರಾಕ್ಟರ್ ಗೆ ಹಣ ನೀಡಲು ಬಾಕಿ ಇದೆ ಅದಕ್ಕೆ ವ್ಯಾಪಾರ ಮಾಡುತ್ತಿದ್ದಾರೆ ಎಂದಿದ್ದಾರೆ. ನೀವು ಸರಕಾರಿ ಅಧಿಕಾರಿ ನಿಮಗೆ ಕಾನೂನು ಕ್ರಮಕೈಗೊಳ್ಳಲು ಆಗುವುದಿಲ್ಲವಾದರೇ ಪತ್ರ ಮೂಲಕ ಬರೆದು ನೀಡಿ ಎಂದಾಗ ಮಂಗಳವಾರ ಬನ್ನಿ ನೀಡುತ್ತೇನೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.
ಹಾಗಾದರೆ ಯಾರು ಕೂಡು ಪರವಾನಿಗೆ ಇಲ್ಲದೇ ಅಕ್ರಮ ಕಟ್ಟಡ ನಿರ್ಮಿಸಬಹುದಲ್ಲವೇ, ಈಗ ಕಟ್ಟಡ ನಿರ್ಮಿಸಿದವರ ಮೇಲೆ ಕ್ರಮ ಕೈಗೊಳ್ಳಬಹುದಲ್ಲವೇ.? ಬಿಲ್ ಬಾಕಿ ಇದ್ದರೆ ಕಟ್ಟಡ ನಿರ್ಮಿಸಿದವರೇ ಬಿಲ್ ಪಾವತಿ ಮಾಡಲಿ ಎಂದು ಸ್ಥಳಿಯರಾದ ವಿಜಯ್ ಮಂಗಲಪದವು ಹೇಳಿದ್ದಾರೆ.
ಈಗ ಪ್ರಸ್ತುತ ಕಾಂಗ್ರೆಸ್ ಪಂಚಾಯತ್ ಅಧಿಕಾರದಲ್ಲಿದ್ದರು, ಬಂಟ್ವಾಳ ತಾಲೂಕಿನಲ್ಲಿ ಬಿಜೆಪಿ ಶಾಸಕರಿದ್ದರು ಅಕ್ರಮ ಕಟ್ಟಡ ತೆರವು ಮಾಡುವುದಾಗಲಿ, ಅಂಗಡಿಗೆ ಬೀಗ ಹಾಕುವ ಕಾರ್ಯಕ್ಕೆ ಯಾರು ಮುಂದಾಗಲಿಲ್ಲ. ಒಂದೊಮ್ಮೆ ಇದು ಶಾಸಕರ ಗಮನಕ್ಕೆ ಬಂದಿದೆಯೋ/ ಇಲ್ಲವೋ ತಿಳಿದಿಲ್ಲ. ಅಥವಾ ಸ್ಥಳೀಯ ಬಿಜೆಪಿ – ಕಾಂಗ್ರೆಸ್ ನಾಯಕರು ದೊಸ್ತಿಯಾಗಿ ಅಂಗಡಿಯವರಿಂದ ಮಾಮುಲು ಪಡೆಯುತ್ತಿದ್ದಾರೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಹಠ ಹಿಡಿದು ಸ್ಥಳೀಯ ಬಿಜೆಪಿ ನಾಯಕರು, ಸಾರ್ವಜನಿಕರು, ಸಂಘ ಸಂಸ್ಥೆಗಳು ಮನಸ್ಸು ಮಾಡಿ ಪ್ರತಿಭಟನೆ ನಡೆಸಿ ಇದರ ಹಿಂದಿನ ಅಕ್ರಮ ಬಯಲು ಮಾಡುವಲ್ಲಿ ಮುತುವರ್ಜಿಬೇಕಾಗಿದೆ.
ಪರವಾನಿಗೆ ಪಡೆಯದೇ ಕಟ್ಟಡ ಕಟ್ಟುವುದಕ್ಕೆ ಮುಂದಾದ ಊರಿನವರು:
ಇಲ್ಲಿ ಯಾವ ಅಂಗಡಿಯಲ್ಲಿ ವ್ಯಾಪಾರಿ ಯಾರು ಎಂಬ ಲೈಸೆನ್ಸ್ ಇಲ್ಲದೇ ಪಂಚಾಯತ್ನಲ್ಲಿ ದಾಖಲೆ ಇಲ್ಲದೇ ನಾಳೆ ಹೊಸದಾಗಿ ಯಾರಾದರೂ ಬಂದು ಗಂಜ ಅಪೀಮ್ ಇಟ್ಟು ಹೋಗಿ ತೊಂದರೆಯಾದರೆ ಜವಾಬ್ದಾರಿ ಯಾರು,ಇದನ್ನು ಇಲ್ಲಿ ಕೇಳುವವರಿಲ್ಲ. ಇಂತಹ ಸಮಸ್ಯೆಗಳಿಗೆ ನೇರ ಹೊಣೆಗಾರಿಕೆ ಪ್ರಸ್ತುತ ಪಂಚಾಯತ್ ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿ ಆಗಿರುತ್ತಾರೆ. ಆದರ ಕಾರಣ ತಕ್ಷಣ ಈ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಂಡು ಮುಂದೆ ಆಗುವ ತೊಂದರೆಗಳಿಗೆ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ,ಗ್ರಾಮ ಪಂಚಾಯತ್, ಕಂದಾಯ ಇಲಾಖೆ ಕಾರ್ಯ ಪ್ರವೃತ್ತರಾದರೇ ಒಳ್ಳೆಯದು ಎಂಬುದು ಈ ವರದಿಯ ಉದ್ದೇಶ.