ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಡಿಪಾಡಿ ಮತ್ತು ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಇದರ ಎನ್.ಸಿ.ಸಿ. ಘಟಕ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂ ದಳ, 5 ಕರ್ನಾಟಕ ಎನ್.ಸಿ.ಸಿ. ನೌಕಾ ದಳ, ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆ ಪುತ್ತೂರು ಇದರ ಎನ್.ಸಿ.ಸಿ. ಘಟಕ 91/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ, 41A/5 ಕರ್ನಾಟಕ ಎನ್.ಸಿ.ಸಿ. ನೌಕಾ ದಳ, 44/6 ಕರ್ನಾಟಕ ವಾಯುದಳ ಇವುಗಳ ಜಂಟಿ ಆಶ್ರಯದಲ್ಲಿ 25ನೇ ಕಾರ್ಗಿಲ್ ವಿಜಯೋತ್ಸವ, ವನಮಹೋತ್ಸವ ಮತ್ತು ಪೌಷ್ಠಿಕಾಂಶ ದಿನಗಳನ್ನು ಶಾಲೆಯ ಸಭಾಂಗಣದಲ್ಲಿ ಮತ್ತು ಶಾಲಾವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ವಿಷ್ಣು ಪ್ರಸಾದ್, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಪುತ್ತೂರು ತಾಲೂಕು ಹಾಗೂ ದೇಶದ ನಿವೃತ ಯೋಧರು ತಮ್ಮ 16 ವರ್ಷ 2 ತಿಂಗಳಿನ ಸೇನೆಯ ಜೀವನ, ಶಿಸ್ತು, ಮತ್ತು ವಿವಿಧ ಪ್ರದೇಶಗಳ ಜೀವನಕ್ರಮದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸೇನೆಯು ‘ಒಂದುಗುಂಡು, ಒಬ್ಬ ವೈರಿ’ ಎಂಬ ದ್ಯೇಯದೊಂದಿಗೆ ಒಬ್ಬ ಸೈನಿಕ ತನ್ನನು ರಕ್ಷಿಸುವುದೊಂದಿಗೆ, ತನ್ನ ಎದುರಾಳಿಯ ಯೋಜನೆಗಳನ್ನು ನಿರ್ನಾಮ ಮಾಡುವ ಜೊತೆಯಾಗಿ ವೈರಿಯನ್ನು ಸದೆಬಡಿಯುವ ಮೂಲಕ ದೇಶವನ್ನು ರಕ್ಷಿಸುತ್ತಾರೆ. ಹಲವಾರು ಯುದ್ಧಗಳಲ್ಲಿ ದೇಶವು ಗೆಲುವು ಸಾಧಿಸಿದ್ದು, ಕಾರ್ಗಿಲ್ ಯುದ್ಧದ ಗೆಲುವು ಮತ್ತು ಪರಾಕ್ರಮವು ವಿಶ್ವದೆಲ್ಲೆಡೆ ಹರಡಲು ನಮ್ಮ ಸೈನ್ಯಧಿಕಾರಿಗಳು ಮತ್ತು ಯೋಧರು ತಮ್ಮ ಜೀವ ಲೆಕ್ಕಿಸದೆ ದೇಶಸೇವೆ ನೀಡಿರುತ್ತಾರೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆ ಪುತ್ತೂರು ಇದರ 41 A/5 ಕರ್ನಾಟಕ ಎನ್.ಸಿ.ಸಿ. ನೌಕಾದಳದ ಅಧಿಕಾರಿ ಕ್ಲೆಮೆಂಟ್ ಪಿಂಟೋ ರವರು ವನಮಹೋತ್ಸವದ ಕುರಿತಾಗಿ ಗಿಡ ಮರಗಳು ನಮಗೆ ಹಲವಾರು ಲಾಭಗಳು ನೀಡುತ್ತವೆ. ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ನ್ನು ಹೀರಿಕೊಂಡು ಆಮ್ಲಜನಕವನ್ನು ನಮಗೆ ನೀಡುತ್ತದೆ. ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿ ತರಲು ಮತ್ತು ನಮಗೆ ಉತ್ತಮ ಮಳೆ ಪಡೆಯಲು ಮರಗಿಡಗಳನ್ನು ನೆಟ್ಟು, ಬೆಳೆಸಿ ಪೋಷಿಸುವ ಜವಾಬ್ದಾರಿ ನಮ್ಮದಾಗಿದೆ. ಇಂದು ನಾವು ಈ ಶಾಲೆಯಲ್ಲಿ ಹಣ್ಣು ಹಂಪಲಿನ ಗಿಡಗಳನ್ನು ನೆಡುವಾಗ 2 ರೀತಿಯ ಲಾಭಗಳು ನಮಗೆ ದೊರೆಯುತ್ತವೆ. ಒಂದು ಹಣ್ಣುಗಳು ನಮಗೆ ತಿನ್ನಲು ಮತ್ತು ಉಸಿರಾಡಲು ಆಮ್ಲಜನಕವು ಪಡೆದುಕೊಳ್ಳುತ್ತೆವೆ ಎಂದು ಹೇಳಿ ಹೇಗೆ ನಾವು ಪರಿಸರವನ್ನು ಕಾಪಾಡಬೇಕು ಮತ್ತು ಪರಿಸರ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಕರ್ತವ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಗೌರವ ಅತಿಥಿಯಾಗಿ ಆಗಮಿಸಿದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ರಾಮಜೋಯಿಸರು ಮಾತನಾಡಿ ನಾವೆಲ್ಲರೂ ಸೈನಿಕರು. ಹೇಗೆ ಗಡಿ ಕಾಯುವ ಸೈನಿಕ ತನ್ನ ಜವಾಬ್ದಾರಿಯನ್ನು ಅರಿತು ತನ್ನ ಕಾರ್ಯ ನಿಷ್ಠೆಯನ್ನು ಯಶಶ್ವಿಯಾಗಿ ನಿಭಾಯಿಸುತಾನೋ ಅದೇ ರೀತಿ ನಾವೆಲ್ಲರೂ ಸೈನಿಕರಂತೆ ನಮ್ಮ ಜವಾಬ್ದಾರಿಗಳನ್ನು ಅರಿತು ನಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಅಭಿವೃದ್ಧಿಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ನೆಟ್ಟ ಗಿಡಗಳನ್ನು ಪೋಷಿಸಿ ಬೆಳೆಸಬೇಕಾಗಿದೆ. ನಮ್ಮ ಸೈನಿಕರನ್ನು ನಾವು ಅತ್ಯಂತ ಗೌರವದಿಂದ ನೋಡಬೇಕು. ಸೈನ್ಯಕ್ಕೆ ಸೇರುವ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಬೇಕು. ಈ ರೀತಿ ನಮ್ಮ ದೇಶವನ್ನು ಬಲಿಷ್ಠ ದೇಶವನ್ನಾಗಿ ಮಾಡಲು ನಮ್ಮ ಸಹಕಾರ ಅತೀ ಮುಖ್ಯ. ಈ ಗ್ರಾಮದ ಕೆಲವರು ದೇಶದ ಸೈನಿಕರಾಗಿದ್ದಾರೆ ಅಂತೆಯೇ ನಿಮ್ಮಂಥ ವಿದ್ಯಾರ್ಥಿಗಳು ಸೇನೆಗೆ ಭರ್ತಿಗೊಳ್ಳುವ ಮೂಲಕ ನಮ್ಮ ಗ್ರಾಮಕ್ಕೆಮತ್ತು ಶಾಲೆಗೆ ಇನ್ನಷ್ಟು ಹೆಸರು ಬರಲಿಎಂದು ಹೇಳಿದರು.
ಕುಡಿಪಾಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್ ರವರು ವಿಶೇಷ ದಿನಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಯಾದ ನಿವೃತ ಯೋಧರಾದ ಶ್ರೀ ವಿಷ್ಣು ಪ್ರಸಾದ್ ರವರ ಪರಿಚಯವನ್ನು ನೀಡಿ, ಅವರು ದೇಶಕ್ಕಾಗಿ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನ ಕಾರ್ಯವನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾ. ಜೋನ್ಸನ್ ಡೇವಿಡ್ ಸಿಕ್ವೇರಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆಯ ಎನ್.ಸಿ.ಸಿ. ಭೂದಳ ಅಧಿಕಾರಿ ನರೇಶ್ ಲೋಬೊ, ಎನ್.ಸಿ.ಸಿ. ವಾಯುದಳ ಅಧಿಕಾರಿ ರೋಶನ್ ಸಿಕ್ವೇರಾ ಉಪಸ್ಥಿತರಿದ್ದರು.
ಕುಡಿಪಾಡಿ ಶಾಲಾ ಅಭಿವೃದ್ಧಿಮತ್ತು ಮೇಲುಸ್ತುವಾರಿ ಸಮಿತಿಯ ಸದ್ಯಸರು ಮತ್ತುವಿದ್ಯಾರ್ಥಿಗಳ ಹೆತ್ತವರುಮತ್ತುಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿಧ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ತಯಾರಿಸಿದ ವಿವಿಧ ಪೌಷ್ಠಿಕಾಂಶ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಿ ಪೌಷ್ಠಿಕಾಂಶ ದಿನವನ್ನು ಮತ್ತು ತುಳುನಾಡಿನ ಆಟಿ ತಿಂಗಳ ಸಂಭ್ರಮವನ್ನು ಆಚರಿಸಿದರು.
ಸಾಮಾಜಿಕ ಅರಣ್ಯ ಇಲಾಖೆ ಪುತ್ತೂರಿನಿಂದ ವನಮಹೋತ್ಸವ ಕಾರ್ಯಕ್ರಮಕ್ಕೆ ಹಣ್ಣು ಹಂಪಲಿನ ಗಿಡಗಳನ್ನು ನೀಡಿದರು.ಗಿಡಗಳನ್ನು ಶಾಲೆಯ ಆವರಣದಲ್ಲಿ ಎನ್.ಸಿ.ಸಿ. ಕೆಡೆಟ್ಗಳು ಮತ್ತು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಶಾಲಾ ಶಿಕ್ಷಕರಾದ ಗಣೇಶ್ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ವಂದಿಸಿದರು. ಶಿಕ್ಷಕಿ ಜಾನೆಟ್ ಸಿಕ್ವೇರಾ ಕಾರ್ಯಕ್ರಮವನ್ನು ನಿರೂಪಿಸಿದರು. ಕುಡಿಪಾಡಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಗಳು, ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ಎನ್.ಸಿ.ಸಿ. ಭೂದಳ, ನೌಕಾದಳ, ವಾಯುದಳದ ಕೆಡೆಟ್ ಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.