ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಶಿರಾಡಿ ಘಾಟಿಯ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿತ ಆಗಿದೆ. ಸಕಲೇಶಪುರತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದ್ದು, ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಬಂದ್ ಮಾಡಲಾಗಿದೆ.
ಜು.29ರವರೆಗೆ ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್, ಬೆಂಗಳೂರು -ಮುರುಡೇಶ್ವರ ಎಕ್ಸ್‌ಪ್ರೆಸ್, ಬೆಂಗಳೂರು-ಕಾರಾವರ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಹಲವು ರೈಲುಗಳ ಓಡಾಟ ರದ್ದಾಗಿದೆ.
ಜೊತೆಗೆ ಶಾಂತಿಗ್ರಾಮ ಬಳಿ ಚಲಿಸುತ್ತಿರುವ ರೈಲಿನ ಮೇಲೆಯೇ ಮಣ್ಣು ಕುಸಿತ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ಅಪಾಯ ತಪ್ಪಿದೆ.
ಕಿಲೋಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ ನಿನ್ನೆ ರಾತ್ರಿ ಮಣ್ಣು ಕುಸಿತವಾಗಿತ್ತು. ಇದರಿಂದಾಗಿ ಬೆಂಗಳೂರು- ಹಾಸನ- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಇಲಾಖೆ ಬಂದ್ ಮಾಡಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.
ನಿನ್ನೆ ಸಂಜೆಯಿಂದ ಹಳಿ ದುರಸ್ತಿ ಹಾಗು ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಸಂಜೆಯಿಂದಲೇ ಬೆಂಗಳೂರು ಮಂಗಳೂರು ನಡುವಿನ ಎಲ್ಲಾ ಪ್ರಯಾಣಿಕ ಹಾಗು ಗೂಡ್ಸ್ ರೈಲು ಸಂಚಾರ ರದ್ದುಪಡಿಸಲಾಗಿದ್ದು, ರೈಲ್ವೆ ಇಲಾಖೆ ನಿನ್ನೆ ರೈಲಿನಲ್ಲಿ ಸಿಲುಕಿದ್ದವರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಿದೆ. ಅಪಾರ ಪ್ರಮಾಣದ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.
ಶಿರಾಡಿಘಾಟ್ ಬಳಿಕ ಶಾಂತಿಗ್ರಾಮ ಬಳಿಯೂ ರೈಲ್ವೆ ಟ್ರ್ಯಾಕ್ ಮೇಲೆ ಗುಡ್ಡ ಕುಸಿದಿದೆ. ಗೂಡ್ಸ್ ರೈಲು ಚಲಿಸುವಾಗಲೇ ಗುಡ್ಡ ಕುಸಿತವಾಗಿದ್ದು, ರೈಲಿನ ಬೋಗಿ ಹಳಿ ತಪ್ಪಿದೆ. ಇಂದು ಮುಂಜಾನೆ 5.45ರ ಸುಮಾರಿಗೆ ಹಳಿ ಮೇಲೆ ಮಣ್ಣು ಕುಸಿದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಮಣ್ಣು ತೆರವುಗೊಳಿಸಿದ ಸಿಬ್ಬಂದಿ ರೈಲು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.
ಹಾಸನ- ಬೆಂಗಳೂರು, ಬೆಂಗಳೂರು- ಹಾಸನ ರೈಲುಗಳ ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ. ಮಣ್ಣು ತೆರವು ಬಳಿಕ ಹಾಸನ ಬೆಂಗಳೂರು ಮಾರ್ಗದ ರೈಲುಗಳ ಸಂಚಾರ ಪುನಾರಂಭವಾಗಲಿದೆ.
ಹೀಗಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ಭೂಕುಸಿತ ಸಂಭವಿಸಿದೆ. ಈ ಕಾರಣ ಕೆಲವು ರೈಲುಗಳನ್ನು ಮರು ನಿಗದಿಪಡಿಸಲಾಗಿದೆ ಜತೆಗೆ ರದ್ದುಪಡಿಸಲಾಗಿದೆ
- 1.ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 27.07.2024 ರಂದು ರದ್ದಾಗಿದೆ.
- 2.ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ದಿನಾಂಕ 27.07.2024 ರಂದು ರದ್ದಾಗಿದೆ.
- 3.ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ದಿನಾಂಕ 27.07.2024 ರಂದು ರದ್ದಾಗಿದೆ.
- 4. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
- 5.ರೈಲು ಸಂಖ್ಯೆ 06567 ಎಸ್ಎಂವಿಟಿ ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
- 6.ರೈಲು ಸಂಖ್ಯೆ 06568 ಕಾರವಾರ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
- 7.ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
- 8.ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
- 9.ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲು ದಿನಾಂಕ 29.07.2024 ರಂದು ರದ್ದಾಗಿದೆ.