ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ ಮತ್ತು ಲಾರಿ ನದಿಯ ಆಳದಲ್ಲಿ ಸಿಲುಕಿದೆ. 20 ಅಡಿ ಅಳದಲ್ಲಿ ಲಾರಿ ಇದೆ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ಕರಾವಳಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಇಂದು ಶಿರೂರಿಗೆ ಆಗಮಿಸುತ್ತಿದೆ ತಿಳಿದು ಬಂದಿದೆ.
ಈಶ್ವರ್ ಮಲ್ಪೆ ಮೂಲತಃ ಕರಾವಳಿ ಭಾಗದ ಹೆಸರಾಂತ ಈಜುಗಾರು. ಅದಲ್ಲದೇ ಆ್ಯಂಬುಲೆನ್ಸ್ ಚಾಲಕನಾಗಿರುವ ಈಶ್ವರ್ ಅದೇಷ್ಟೋ ಜನರ ಜೀವ ಉಳಿಸಿದ್ದಾರೆ. ಮಾತ್ರವಲ್ಲದೆ ನದಿ ಆಳದಲ್ಲಿ ಸಿಲುಕಿದ ನಾಪತ್ತೆಯಾದ ಮೃತದೇಹವನ್ನು ಪತ್ತೆ ಹಚ್ಚುವ ಸಾಹಸಿ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಈಶ್ವರ್ ಮಲ್ಪೆ ಮಾಡಿದ ಉದಾಹರಣೆಗಳಿವೆ. ಎಂತಹದೇ ಅಪಾಯಕಾರಿಯಾದರು ಆ ಸ್ಥಳದಲ್ಲಿ ಶೋಧ ನಡೆಸಿ, ಅದೆಷ್ಟೋ ಮೃತದೇಹವನ್ನು ಮೇಲೆತ್ತಿಕೊಟ್ಟಿದ್ದಾರೆ.
ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 12 ದಿನ ಕಳೆದಿದೆ. ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ದುರಂತದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಅಂತಿಮವಾಗಿ ಕೇರಳ ಭಾಗ ಅರ್ಜುನ್ ಅವರನ್ನು ಹುಡುಕುವಂತೆ ಮಂಜೇಶ್ವರ ಶಾಶಕರಾದ ಅಶ್ರಪ್ ಸ್ವತಃ ಶಿರೂರಿಗೆ ಆಗಮಿಸಿದ್ದರು. ಜೊತೆಗೆ ಸಾವಿರಾರು ಜನ ಅರ್ಜುನ್ ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.