ಮೂರ್ತೆದಾರರ ಸೇವಾ ಸಹಕಾರಿ ಸಂಘ ಪಡೀಲು ಇದರ ವಾರ್ಷಿಕ ಮಹಾಸಭೆಯೂ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿತು ಮುಖ್ಯ ಅತಿಥಿಗಳಾಗಿ ಅಗಮಿಸಿದ
ಸಂಜೀವ ಪೂಜಾರಿ ಇವರು ಮಾತನಾಡಿ ದ. ಕ ಜಿಲ್ಲೆಯಲ್ಲಿ ಪುತ್ತೂರಿನ ಪಡೀಲು ಮೂರ್ತೆದಾರರ ಸಂಘವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿನಂದಿಸಿದರು.ಇದೇ ರೀತಿ ಉತ್ತಮವಾದ ಸೇವೆಯನ್ನು ಸಾರ್ವಜನಿಕರಿಗೆ ನೀಡುತ್ತಾ ಹೋದರೆ ಮುಂದಿನ ದಿನದಲ್ಲಿ ಒಂದು ಸಹಕಾರಿ ಸಂಘದ ದ ವ್ಯಾಪ್ತಿಯಲ್ಲಿ ಒಂದು ಪರಿಣಾಮಕಾರಿಯಾದ ಪಲಿತಾಂಶವನ್ನು ಖಂಡಿತವಾಗಿಯೂ ಸಮಾಜಕ್ಕೆ ನೀಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳುತ್ತಾ ಸಂಘಕ್ಕೆ ಶುಭ ಹಾರೈಸಿದರು
ಸತೀಶ್ ಕುಮಾರ್ ಕೆಡೆಂಜಿ ಮಾತಾಡಿ ಇಡೀ ನಮ್ಮ ದ. ಕ ಜೆಲ್ಲೆಯಲ್ಲಿ ಇರುವ ಶೇಂದಿ ಮಾರಾಟದ ಜಾಗವನ್ನು ಮೂರ್ತೆದಾರರ ಸಂಘಕ್ಕೆ ನೀಡಬೇಕಾಗಿ ಎಲ್ಲಾ ಮೂರ್ತೆದಾರರ ಸಂಘವು ಸೇರಿ ಒಂದು ದೊಡ್ಡ ಮಟ್ಟದ ಹೋರಾಟ ಮಾಡಬೇಕು.. ಹಾಗೆ ಮಾಡಿದರೆ ಈ ಶೇಂದಿ ಮಾರಾಟದ ಜಾಗವು ಸಂಘಕ್ಕೆ ದೊರೆಯಬಹುದು ಎಂದು ಮೂರ್ತೆದಾರರ ಸಂಘಕ್ಕೆ ಮನವರಿಕೆ ಮಾಡಿಕೊಟ್ಟರು.
ಹಾಗೂ ಸಂಘದ ವತಿಯಿಂದ ಹಿರಿಯ ಇಬ್ಬರು ಮೂರ್ತೆದರರಾದ ಡೊಂಬಯ್ಯ ಪೂಜಾರಿ ಪೆಲತ್ತ ಡಿ, ಸಂಕಪ್ಪ ಪೂಜಾರಿ ಮುರ ಮತ್ತು
ಈಶ್ವರ ಪೂಜಾರಿ ಕಡೇ ಶಿವಾಲಯ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಈಶ್ವರ ಪೂಜಾರಿ ಕಡೇ ಶಿವಾಲಯ ಮಾತಾಡಿ ಮೂರ್ತೆದಾರಿಕೆಯ ಶೇಂದಿ ಮಾರಾಟ ನಿಷೇದವಾದ ಸಂದರ್ಭ ದಲ್ಲಿ 1990 ರ ಆಗಿನ ಮಂತ್ರಿಯಾಗಿದ್ದ ಶ್ರೀ ಬಂಗಾರಪ್ಪ ಅವರಿಗೆ ಈ ಮೂರ್ತೆದಾರರ ಸಂಘ ದೊಡ್ಡ ಮಟ್ಟದ ಹೋರಾಟ ಮಾಡಿ ಈ ಶೇಂದಿ ನಿಷೇಧವನ್ನು ಹಿಂಪಡೆಯಬೇಕೆಂದು ಆಗ್ರಹಿಸಿತು.. ಆ ಹೋರಾಟದ ಪ್ರತಿಫಲ ಇಂದು ಕೇವಲ ಶೇಂದಿ ಮಾರಾಟಕ್ಕೆ ಸೀಮಿತವಾಗಿದ್ದ ಈ ಸಂಘ ಇಂದು 14 ಮೂರ್ತೆದಾರರ ಸೇವಾ ಸಹಕಾರಿ ಸಂಘ ದ ಬ್ರಾಂಚ್ ಗಳಾಗಿ ದೊಡ್ಡ ಮಟ್ಟದ ಸಹಕಾರಿ ಸಂಘವಾಗಿ ಬೆಳೆದು ನಿಂತಿದೆ ಎಂದು ಹೇಳಿ, ಸಂಘವೂ ಇನ್ನೂ ದೊಡ್ಡದಾಗಿ ಬೆಳೆಯಲಿ ಎಂದು ಹಾರೈಸಿದರು.
ಆರ್ ಸಿ ನಾರಾಯಣ ಮಾತಾಡಿ ಬ್ಯಾಂಕಿಗ್ ಕ್ಷೇತ್ರದಲ್ಲಿ ನಮ್ಮಲ್ಲಿ ಇರುವ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಖಂಡಿತವಾಗಿಯೂ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತದೆ ಹಾಗೂ ಸಂಘ ಸಂಸ್ಥೆಗಳಲ್ಲಿ ಸಂಘದ ಅಧ್ಯಕ್ಷರು ಹಾಗೂ ಸಿಬ್ಬಂದಿಗಳ ಒಗ್ಗಟ್ಟಿನಿಂದ ಇನ್ನೂ ಸಂಘ ಗಟ್ಟಿಯಾಗಿ ಬೆಳೆಯಲಿ ಎಂದು ಶುಭ ಕೋರಿದರು.
ಅಧ್ಯಕ್ಷ ರಾದ ಶ್ರೀ ಸುಂದರ ಪೂಜಾರಿ ಬಡಾವು ಮಾತಾನಾಡಿ ನಮ್ಮ ಸಂಘವು ಇಂದು ದೊಡ್ಡ ಪ್ರಮಾಣದಲ್ಲಿ ಪುತ್ತೂರಿನಲ್ಲಿ ವ್ಯವಹಾರ ನಡೆಸಲು ಇಲ್ಲಿ ಬಂದ ಎಲ್ಲಾ ನಮ್ಮ ಸಂಘದಲ್ಲಿ ವ್ಯವಹಾರ ನಡೆಸಿದ ತಾವೆಲ್ಲ ಪ್ರಮುಖ ಕಾರಣ ಎಂದು ಬಂದ ಎಲ್ಲರನ್ನೂ ಅಭಿನಂದಿಸಿದರು ಹಾಗೂ ಆದಷ್ಟು ಬೇಗ ತಮ್ಮೆಲ್ಲರ ಸಹಕಾರದೊಂದಿಗೆ ನಮ್ಮ ಸ್ವಂತ ಕಟ್ಟಡದಲ್ಲಿ ಸಂಘವನ್ನು ಮಾಡುತ್ತೇವೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ತೆಯನ್ನು ಶ್ರೀ ಸುಂದರ ಪೂಜಾರಿ ಬಡಾವು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸತೀಶ್ ಕುಮಾರ್ ಕೇಡೆಂಜಿ, ಶ್ರೀ ಸಂಜೀವ ಪೂಜಾರಿ, ಶ್ರೀ ಆರ್ ಸಿ ನಾರಾಯಣ, ಹಾಗೂ ಸಂಘದ ನಿರ್ದೇಶಕರು ಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವರದಿಯನ್ನು ಸಂಘದ ಕಾರ್ಯ ನಿರ್ವಹಣಾಧಿಕಾರಿ ರಾಧಾಕೃಷ್ಣ ಇವರು ಓದಿದರು.
ಅದರ್ಶ್ ಇವರು ಜಮಾ ಖರ್ಚಿನ ವಿವರವನ್ನು ಓದಿದರು. ಸವಿತಾ ಲಾಭ ನಷ್ಟದ ತಕ್ತೆ ಯನ್ನು ಓದಿದರು. 2024-25 ರ ಅಂದಾಜು ಬಜೆಟನ್ನು ಶ್ರುತಿ ಇವರು ಮಂಡಿಸಿದರು.
ಪ್ರಾರ್ಥನೆಯನ್ನು ದೈನಿಕ ಠೇವಣಿ ಸಂಗ್ರಹಗಾರ ದಿನೇಶ್ ಇವರು ನಡೆಸಿದರು.
ಸಂಘದ ನಿರ್ದೇಶಕರಾದ ಜಿ. ಕೆ. ಸುವರ್ಣ ಇವರು
ಧನ್ಯವಾದ ಸಮರ್ಪಣೆ ಮಾಡಿದರು.
.