ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಇಡೀ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿರುವುದು ಒಂದು ಕಡೆಯಾದರೆ. ಅದು ನಾಯಿ ಮಾಂಸವೇ ಅಥವಾ ಕುರಿಮಾಂಸವೇ ಎಂಬ ಚರ್ಚೆ ಮತ್ತೊಂದು ಕಡೆ. ಇದೀಗ ಈ ಎಲ್ಲಾ ಗೊಂದಲಗಳಿಗೆ ಆಹಾರ ಸುರಕ್ಷತಾ ಇಲಾಖೆ ತೆರೆ ಎಳೆದಿದೆ.
ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಜೈಪುರದಿಂದ ಬಂದಿದ್ದ ಲೋಡ್ ಬಾಕ್ಸ್ಗಳು ಮೆಜೆಸ್ಟಿಕ್ನಲ್ಲಿ ಅನ್ಲೋಡ್ ಆಗುತ್ತಿದ್ದಂತೆ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಈ ಬಾಕ್ಸ್ಗಳಲ್ಲಿ ಇರೋದು ನಾಯಿ ಮಾಂಸ ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನೂ ಮಿಕ್ಸ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಇದು ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಸದ್ಯ ನಾಯಿ ಮಾಂಸ ಅಥವಾ ಕುರಿ ಮಾಂಸ ಎಂದು ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಕೆರೆಹಳ್ಳಿ ಅರೆಸ್ಟ್ ಆಗಿದ್ದು ನಿನ್ನೆ ಜಾಮೀನು ಮೂಲಕ ಬಿಡುಗಡೆಯಾಗಿದ್ದರು ಮಾಜಿ ಸಂಸದ ಪ್ರತಾಪ್ ಸಿಂಹ ಪೋಲಿಸ್ ಇಲಾಖೆಯ ವಿರುದ್ದ ವಾಗ್ದಾಳಿ ಮಾಡಿದ್ದಾರೆ.
ಈಗ ಆಹಾರ ಇಲಾಖೆ ಮಾಂಸವನ್ನು ಪರಿಕ್ಷೆಗೆ ಕೂಡ ಮಾಡಿ ಅಲ್ಲಿ ಇದ್ದದ್ದು ಯಾವ ಮಾಂಸ ಅಂತ ಬಹಿರಂಗ ಮಾಡಿದೆ. ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಾಂಸ ವಶಕ್ಕೆ ಪಡೆದು ಪರಿಶೀಲನೆ ಮಾಡಿದ ಆಹಾರ ಸುರಕ್ಷತಾ ಇಲಾಖೆಯು ಎಲ್ಲ ಬಾಕ್ಸ್‌ನಲ್ಲಿರುವುದು ಕುರಿ ಮಾಂಸ ಎಂದು ಪರೀಕ್ಷಾ ವರದಿ ನೀಡಿದೆ.
ಬೆಂಗಳೂರಿಗೆ ರೈಲಿನಲ್ಲಿ ಪೂರೈಕೆ ಆಗುತ್ತಿದ್ದ ಮಾಂಸದ ಪರೀಕ್ಷಾ ವರದಿ ಬಗ್ಗೆ ಮಾತನಾಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತ ಕೆ. ಶ್ರೀನಿವಾಸ್ ಅವರು, ಮಾಂಸವನ್ನು ವಶಕ್ಕೆ ಪಡೆದು ಪರೀಕ್ಷೆ ಮಾಡಿದಾಗ 84 ಬಾಕ್ಸ್‌ಗಳಲ್ಲಿದ್ದ ಎಲ್ಲಾ ಮಾಂಸವೂ ಕುರಿಯ ಮಾಂಸ ಎಂದು ತಿಳಿದುಬಂದಿದೆ. ಈ ವರದಿಯನ್ನು ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ವರದಿ ಸಲ್ಲಿಕೆ ಮಾಡಿದ್ದೇವೆ. ಈಗ ಹೈದರಾಬಾದ್‌ಗೆ ಕಳುಹಿಸಲಾಗಿದ್ದ ಲ್ಯಾಬ್ ರಿಪೋರ್ಟ್ ಬಂದಿದ್ದು, ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಿದ ರಿಪೋರ್ಟ್ ಬರುವುದು ಬಾಕಿಯಿದೆ ಎಂದು ನೀಡಿದ್ದಾರೆ.
ಒಟ್ಟಾರೆಯಾಗಿ ರಾಜಸ್ಥಾನದಿಂದ ನಾಯಿ ಮಾಂಸ ಮಾರಾಟ ಪ್ರಕರಣದ ಬಗ್ಗೆ ಆಹಾರ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಈಗ ಸ್ಪಷ್ಟ ಉತ್ತರ ಸಿಕ್ಕಿದ್ದು ಸಿಲಿಕಾನ್ ಸಿಟಿ ಮಂದಿ ನಿಟ್ಟುಸಿರು ಬಿಡುತ್ತಿದ್ದು ಕೆರೆಹಳ್ಳಿ ತಂಡಕ್ಕೆ ತೀವ್ರ ಮುಖಾಭಂಗವಾಗಿದೆ.