ಪುತ್ತೂರು: ಆರ್ ಎಸ್ ಎಸ್ ಬಗ್ಗೆ ಅಪಚಾರ, ಪ್ರಚೋದನಕಾರಿ ಮತ್ತು ಧಾರ್ಮಿಕ ನಂಬಿಕೆ ದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಆಡಿಯೋ ವೈರಲ್ ಸಾಮಾಜಿಕ ಕಾರ್ಯಕರ್ತ ಹಕೀಂ ಕೂರ್ನಡ್ಕ ವಿರುದ್ದ ದೂರು
ಸಾಮಾಜಿಕ ಕಾರ್ಯಕರ್ತ ಎನ್ನಲಾದ ಹಕೀಂ ಕೂರ್ನಡ್ಕ ಎಂಬವನು ಪುತ್ತೂರಿನ ಮರೀಲ್ ನಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿರುವ ಅಖಿಲ್ ಎಂಬವನ ಜೊತೆ ದೂರವಾಣಿ ಕರೆ ಸಂಭಾಷಣೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಹಕೀಂ ಕೂರ್ನಡ್ಕ ವಿರುದ್ದ ಎಡಕ್ಕಾನ ಕಲ್ಮಡ್ಕ ನಿವಾಸಿ ರಾಜಾರಾಮ್ ಭಟ್ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಂಭಾಷಣೆಯಲ್ಲಿ ಉತ್ತರ ಭಾರತದ ಕಸಾಯಿಖಾನೆ ನಡೆಸುವವರು ಆರ್ ಎಸ್ ಎಸ್ ಮತ್ತು ಬಿಜೆಪಿ, 40% ಹಿಂದುಗಳು ಗೋ ಮಾಂಸ ಭಕ್ಷಕರು, ಗೋಮಾಂಸ ರಫ್ತಿನಲ್ಲಿ ಭಾರತ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಪ್ರಚೋದನಕಾರಿ ಮಾತುಗಳನ್ನಾಡಿ ಧಾರ್ಮಿಕ ಭಾವನೆ ನಂಬಿಕೆಗಳಿಗೆ ಧಕ್ಕೆ ಬರುವಂತೆ ಪ್ರಯತ್ನಿಸಿ ಕೋಮು ಪ್ರಚೋದನೆ ಪ್ರೋತ್ಸಾಹ ನೀಡಿದ್ದಾನೆ. ಅಲ್ಲದೇ ಭಾರತೀಯ ಜನಹಿತ ಪರಿವಾರ ಗ್ರೂಪ್ ನಲ್ಲಿಯೂ ಬಂದಿದೆ.
ಸನಾತನ ಹಿಂದೂ ಧರ್ಮಿಯಾದ ನನ್ನಂತಹ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಹಕೀಂ ಕೂರ್ನಡ್ಕ ಪತ್ತೆ ಹಚ್ಚಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.