ಮಂಗಳೂರು ನಗರ ಪಾಲಿಕೆ ಚುನಾವಣೆಯ ಸಂಘಟನಾ ಉಸ್ತುವಾರಿಯಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ರಾದ ಎಚ್. ಮಹಮ್ಮದ್ ಆಲಿ.. ಇವರಿಬ್ಬರನ್ನು ನೇಮಕ ಗೊಳಿಸಿ ಅದೇಶಿಸಲಾಗಿದೆ.
ಎಂ ಬಿ ವಿಶ್ವನಾಥ್ ರೈ ಯವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕ್ರಿಯಾಶೀಲ ಅಧ್ಯಕ್ಷರಾಗಿ ಪರಿಣಾಮಕಾರಿ ರೀತಿ ಪಕ್ಷವನ್ನು ಸಂಘಟಿಸಿ ಪ್ರಖ್ಯಾತಿ ಪಡೆದವರಾಗಿರುತ್ತಾರೆ ಮತ್ತು ಎಚ್. ಮಹಮ್ಮದ್ ಆಲಿಯವರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾಗಿ ಪಕ್ಷ ಸಂಘಟನೆಯೊಂದಿಗೆ,ಸಂಪ್ಯ ಮಂಡಲ ಪಂಚಾಯತ್, ಪ್ರದಾನರಾಗಿ,ಪುತ್ತೂರು ಪುರಸಭಾ ಮತ್ತು ನಗರಸಭೆಯಲ್ಲಿ ಉಪಾಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ವಿರೋಧಪಕ್ಷ ನಾಯಕರಾಗಿ, ಸಹಕಾರಿ ಸಂಘದ ಅಧ್ಯಕ್ಷರಾಗಿ ಅಪಾರ ಆಡಳಿತ ಅನುಭವ ಹೊಂದಿದವರಾಗಿರುತ್ತಾರೆ.
ಮಂಗಳೂರು ನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಪಕ್ಷವನ್ನು ಬಹುಮತಕ್ಕೆ ತರುವ ಉದ್ದೇಶದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಶ್ರೀ ಮಂಜುನಾಥ್ ಭಂಡಾರಿ ಯವರ ಸೂಚನೆಯ ಮೇರೆಗೆ ಕಾರ್ಯಾದ್ಯಕ್ಷರ ಜವಾಬ್ದಾರಿ ಉಸ್ತುವಾರಿವಹಿಸಿರುವ ಎಂ ಎಸ್ ಮಹಮ್ಮದ್ ರವರು ಸದರಿಯವರನ್ನು ನೇಮಕ ಗೊಳಿಸಿ ಆದೇಶವನ್ನು ಹೊರಡಿಸಿರುತ್ತಾರೆ