ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ನಿವಾಸಿಯಾದ ನಿವೃತ್ತ ಮುಖ್ಯೋಪಾಧ್ಯಾಯ ಎಸ್ ಪಿ ಬಾಲಕೃಷ್ಣ ಬಡಕ್ಕಿಲ್ಲಾಯ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು, ತನಿಖೆ ನಡೆಸಲಾಗಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿರುತ್ತದೆ .
ಸದ್ರಿ ಆರೋಪಿಗಳು ಮೃತರಿಗೆ ಸಂಬಂಧಿಕರಾಗಿದ್ದು ಭೂಮಿ ವಿವಾದದಲ್ಲಿ ವೈ ಮನಸ್ಸು ಉಂಟಾಗಿ ಆರೋಪಿಗಳು ಸದರಿ ಕೃತ್ಯವನ್ನು ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ. ಆರೋಪಿಗಳ ಪೈಕಿ ಓರ್ವನು ಅಪರಾಧಿಕ ಹಿನ್ನೆಲೆ ಹೊಂದಿದ್ದು, ಆತನ ವಿರುದ್ಧ ಕೇರಳ ರಾಜ್ಯದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ, ಕೊಲೆಯತ್ನ ಪ್ರಕರಣವು ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿರುವ ಬಗ್ಗೆಯೂ ತಿಳಿದುಬಂದಿರುತ್ತದೆ.