ಪುತ್ತೂರು : ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರ ಯುವಮೋರ್ಚ ಪುತ್ತೂರು ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲ ನೇತೃತ್ವದಲ್ಲಿ ಭ್ರಷ್ಟಾ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ವಿರುದ್ದ ಅವಹೇಳನಕಾರಿಯಾಗಿ ಮಾತಾನಾಡಿದ ಕಾಂಗ್ರೆಸ್ ನಾಯಕರ ವಿರುದ್ದ ಪ್ರತಿಭಟನೆ ದರ್ಬೆ ವೃತ್ತ ಬಳಿ ನಡೆಯಿತು.
ಯುವ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಹೆಮ್ಮಾರ್ ಪ್ರಾಸ್ತಾವಿಕ ಮಾತಾನಾಡಿ ಹಗರಣದಲ್ಲಿ ತೊಡಗಿಸಿಕೊಂಡ ಸರಕಾರ ಸಿದ್ದರಾಮಯ್ಯ ಸರಕಾರ, ಜನರನ್ನು ಬೀದಿಗೆ ತಂದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ, ಕಣ್ಣಿಗೆ ಮಣ್ಣೇರೆಚುವ ವ್ಯವಸ್ಥೆಯೇ ಈ ಸುಳ್ಳು ಗ್ಯಾರಂಟಿಗಳಾಗಿವೆ ಈ ಗ್ಯಾರಂಟಿಯಿಂದ ಸರಕಾರದ ಖಜಾನೆ ಖಾಲಿಯಾಗಿದೆ , ನಾಲ್ಕು ಸಾವಿರ ಕೋಟಿ ದೋಚಿದ್ದು ಕಾಂಗ್ರೆಸ್ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ತಿಳಿಸಿದರು.
ಈ ಪ್ರತಿಭಟನೆಯಿಂದ ನ್ಯಾಯ ಸಿಗುತ್ತದೆ, ಐವನ್ ಬಂಧನ ಆಗುತ್ತದೇ ಅನ್ನೋ ನಂಬಿಕೆ ನಮಗಿಲ್ಲ ಆದರೆ ನಮ್ಮ ಆಕ್ರೋಶ ಮತ್ತು ಅನ್ಯಾಯದ ಪ್ರತಿಭಟನೆ. ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಕಾಂಗ್ರೆಸ್ ಸರಕಾರದ ಅಹಂಕಾರ ಎಲ್ಲಿಯ ತನಕ ಎಂದರೇ 130 ಶಾಸಕರಿದ್ದಾರೆ ಏನೂ ಮಾಡಿದರು ನಡೆಯುತ್ತದೆ ಎನ್ನೋ ಅಹಂ ಇದೆ ಐವನ್ ,ಜಮೀರ್ ,ಕೃಷ್ಣ ಬೈರೆ ಗೌಡ ದಿನಕೊಂದು ಹೇಳಿ ನೀಡುತ್ತಿದ್ದಾರೆ ಅವರ ಮೇಲೆ ಕೇಸ್ ಹಾಕುವ ತಾಕತ್ ಈ ಇಲಾಖೆಗಿಲ್ಲ. ಒಂದೊಮ್ಮೆ ಯಡಿಯೂರಪ್ಪ ಅವರ ವಿರುದ್ದ ಪ್ರಾಸಿಕ್ಯೂಷನ್ ಕೊಟ್ಟಾಗ ರಾಜೀನಾಮೆ ಕೊಟ್ಟು ನಿರಾಪರಾಧಿ ಆದ ನಂತರ ಮತ್ತೆ ಮುಖ್ಯಮಂತ್ರಿ ಆದದ್ದು ಸಿದ್ದರಾಮಯ್ಯರಿಗೆ ತಿಳಿದಿಲ್ಲ. ಸಿದ್ದರಾಮಯ್ಯ ಭ್ರಷ್ಟಾಚಾರಿ ತೊಡೆತಟ್ಟಿ ನಾವೇ ಕರೆದಿದ್ದೇವೆ ಎದುರಿಸುವ ತಾಕತ್ತು ಅವರಲ್ಲಿ ಇಲ್ಲ ಅವರು ಪಲಾಯನ ಮಾಡಿದ್ದಲ್ಲದೇ ನಿರಾಪರಾಧಿ ಎಂದು ತೋರಿಸಿಕೊಡಬಹುದಿತ್ತು .
ನಮ್ಮ ತಾಕತ್ ಬಗ್ಗೆ ಮಾತಾನಾಡಬೇಡಿ ಸಂಘರ್ಷದಿಂದಲೇ ಹುಟ್ಟಿದ ಸಂಘಟನೆ ಭಾರತೀಯ ಜನತಾ ಪಾರ್ಟಿ, ಸಂಘರ್ಷ ಕೆಲಸಕ್ಕೆ ಇಳಿಸಬೇಡಿ ಒಂದೊಮ್ಮೆ ಇಳಿದರೆ ಮುಂದಿನ ತೊಂದರೆಗಳಿಗೆ ಅನಾಹುತಗಳಿಗೆ ನೀವೆ ಜವಾಬ್ದಾರಿ ಎಂದರು ನಮ್ಮ ಸರಕಾರ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಲೇ ಇಲ್ಲ ಕಾರಣ ನಮ್ಮದು ನ್ಯಾಯದ ಸರಕಾರ ಇಂತಹ ಕೆಳ ಯೋಚನೆ ನಾವು ಮಾಡುದಿಲ್ಲ ಅಲ್ಲದೇ ಇಷ್ಟು ಹೇಳಿಕೆ ನೀಡಿದರು ಟ್ರಾನ್ಸ್ ಪರ್ ಗೆ ಹೆದರಿ ಕೇಸ್ ಹಾಕಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಅಧಿಕಾರಿಗಳೇ ಕಂದಾಯದಿಂದ ಎಲ್ಲಾ ಇಲಾಖೆಯವರೆರ ನಮ್ಮ ಬರುತ್ತದೆ ಅವಾಗ ನೋಡಿಕೊಳ್ಳುತ್ತೇವೆ.
ಅಶೋಕ್ ರೈ ಸ್ಪಾರ್ಟ್ ಶಾಸಕ -ಭರತ್ ಶೆಟ್ಟಿ ಶಾಸಕ
ಮೊನ್ನೆ ಕಾಂಗ್ರೆಸ್ ಪ್ರತಿಭಟನೆಯಲ್ಲಿ ನನಗೆ ಬೈದಿದ್ದಾರೆ ನಾನು ವಿಡಿಯೋ ನೋಡಿದೆ. ಅಜ್ಞಾನಿ,ಭಾಷೆ ಇಲ್ಲದವ ಏನೋನೋ ಹೇಳಿದ್ದಾರೆ ನನಗೆ ಬೇಸರವಿಲ್ಲ. ಇವರ ಗುರು ರಾಹುಲ್ ಗಾಂಧಿಯನ್ನು ಮೆಚ್ವಿಸಲು ಈ ಹೇಳಿಕೆ ನೀಡಿದ್ದಾರೆ ಮತ್ತು ಕಾರ್ಫೋರೆಷನ್, ಪಂಚಾಯತ್ ಸೀಟ್ ಗೆ ಬೇಕಾಗಿ ಹೇಳಿರಬಹುದು. ಯಾಕೆಂದರೆ ಶಾಸಕ ಸೀಟ್ ನೀಡುವುದಿಲ್ಲ ಯಾಕೆಂದರೆ ಅಶೋಕ್ ರೈ ಸ್ಪಾರ್ಟ್ ಆಗಿದ್ದಾರೆ ಅವರು ಬಿಡುವುದು ಇಲ್ಲ ಇವರ ನಾಯಕನ್ನು ಮೆಚ್ಚಿಸಲು ಈ ರೀತಿ ಮಾತಾನಾಡುತ್ತಾರೆ ಎಂದರು.
ಇವರ ಗುರು ರಾಹುಲ್ ಗಾಂಧಿ ಮಿಸ್ ಇಂಡಿಯಾ ಕಾಂಫಿಟೇಷನ್ ನಲ್ಲಿ ದಲಿತರಿಗೆ ಅವಕಾಶ ಯಾಕೆ ನೀಡಿಲ್ಲ ಕೇಳ್ತಾನೆ ಹಿಂದುಗಳ ಬಗ್ಗೆ ಮಾತಾನಾಡದೇ,ಹಿಂದು ಹೆಣ್ಣುಮಕ್ಕಳು ಅತ್ಯಾಚಾರದ ಬಗ್ಗೆ ಮಾತಾನಾಡದೇ ಜಾತ್ಯತೀತರು ಎಂದು ಹೇಳುತ್ತಾರೆ ಇವರಿಗೆ ನಾಚಿಕೆಯಾಗಬೇಕು ಎಂದರು
ಸಾವಿರಾರು ಕೋಟಿ ಬಡವರ ದುಡ್ಡು ನುಂಗಿ ನೀರು ಕುಡಿದಿದ್ದಾರೆ. ಪಾಕಿಸ್ತಾನದ ಜಿಂದಾಬಾದ್ ಜೈಕಾರ ಹಾಕುವಾಗ ನಾನು ಹತ್ತಿರದಲ್ಲೇ ಇದ್ದೇ ಅವರ ಮೇಲೆ ಕೇಸ್ ಹಾಕುವ ತಾಕತ್ ಈ ಸರಕಾರಕ್ಕೆ ಇಲ್ಲ. ಐವನ್ ಡಿ ಸೋಜಾ ರಾಜ್ಯಪಾಲ ಬಗ್ಗೆ ಮಾತಾನಾಡುವ ನೈತಿಕತೆ ಇಲ್ಲ. ಬಿಕ್ಷೆ ಬೇಡಿ ಎಂ ಎಲ್ ಸಿ ಪಡೆದುಕೊಂಡದ್ದು ಅಲ್ಲದೇ ರಾಹುಲ್ ಗಾಂಧಿ ಮತ್ತು ಇವರ ನಾಯಕನ್ನು ಮೆಚ್ಚಿಸಲು ಹೇಳಿಕೆ ಕೊಡುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಬೆಂಕಿ ಬಿದ್ದಾಗ ಮಾತಾನಾಡದ ಕಾಂಗ್ರೆಸ್, ಎಲ್ಲೋ ಬಾಂಬ್ ಬಿದ್ದಾಗ ಇವರ ಮನೆಗೆ ಬಿದ್ದಂತೆ ಹಾರಾಡುತ್ತಿದೆ. ಅತ್ಯಾಚಾರದ ವಿರುದ್ದ ಮಾತಾಡುವ ಯೋಗ್ಯತೆ ಇವರಿಗಿಲ್ಲ ಎಂದರು ಅಲ್ಲದೇ ಪೋಲಿಸ್ ಇಲಾಖೆವರೇ ನಿಮಗೆ ಕಾನೂನು ತಿಳಿಯದಿದ್ದಾರೆ ನಮ್ಮಲ್ಲಿ ತಜ್ಞರಿದ್ದಾರೆ,ನಮ್ಮ ಸರಕಾರ ಬಂದಾಗ ನಾವು ನೋಡಿ ಕೊಳ್ಳುತ್ತೇವೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಪೂರ್ಣ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಆರ್ ಸಿ ನಾರಾಯಣ್, ಗ್ರಾಮಾಂತರ ಮಂಡಲದ ನಿಯೋಜಿತ ಅಧ್ಯಕ್ಷ ದಯಾನಂದ ಶೆಟ್ಟಿ, ಸುನೀಲ್ ದಡ್ಡು, ನಿಯೋಜಿತ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಯುವಮೋರ್ಚ ನಗರಾಧ್ಯಕ್ಷ ನಿತೀಶ್ ನಗರ, ಬಿಜೆಪಿ ಮುಖಂಡ ನಿತೇಶ ಶಾಂತಿವನ, ಮುರಳಿಕೃಷ್ಣ ಹಸಂತಡ್ಕ, ಪಿ ಜಿ ಜಗನ್ನಿವಾಸ್,ವಿರೂಪಾಕ್ಷ ಮಚ್ಚಿನಲೆ, ನಾಗೇಶ್ ಪ್ರಭು,ಅರುಣ್ ಪುತ್ತಿಲ, ಹರಿಪ್ರಸಾದ್ ಯಾದವ್, ಕಿರಣ್ ಪೆರ್ನೆ,ಶ್ರೀಕೃಷ್ಣ ವಿಟ್ಲ ,ಪುನೀತ್ ಮಾಡತ್ತಾರು ಕಾರ್ಯಕರ್ತರು ಉಪಸ್ಥಿತರಿದ್ದರು.