ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ (ರಿ) ಮಂಗಳೂರು ಇದರ ಆಶ್ರಯದಲ್ಲಿ ದೈವರಾಧನೆಗ್ ಒಂಜಿ ದಿನ
‘ನಂಬಿಕೆ ಒರಿಪಾಗ’ ಎನ್ನುವ ಶೀರ್ಷಿಕೆಯಡಿಯಲ್ಲಿ ವಿನೂತನ ಕಾರ್ಯಕ್ರಮವು ಸೆಪ್ಟೆಂಬರ್ 01 ರ ಆದಿತ್ಯವಾರ ಮಂಗಳೂರಿನ ಸಹಕಾರಿ ಸದನ ಕಾವೂರು ಬೊಂದೆಲ್ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.
ಒಂದು ಉತ್ತಮ ಮತ್ತು ಅಗತ್ಯವೆನಿಸಿದ ಕಾರ್ಯಕ್ರಮ ಆಯೋಜನೆಗೊಂಡಿದೆ. ದೈವ ನಂಬಿಕೆ ಉಳಿಸುವ ಜವಾಬ್ದಾರಿ ಕೇವಲ ಚಾಕಿರಿಯವರಿಗೆ, ಹಿಂದೂ ಸಂಘಟನೆಗಳಿಗೆ ಮಾತ್ರವಲ್ಲ, ಪೂರ್ಣ ಹಿಂದೂ ಸಮಾಜದ್ದಾಗಿದೆ. ದೈವ ನಂಬಿಕೆ ಮೇಲೆ ದಾಳಿಯಾಗುವಾಗ ಕೇವಲ ಫೇಸ್ಬುಕ್, ವಾಟ್ಸಾಪ್‌ನಲ್ಲಿ ಮಾತನಾಡುವ ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಗತ್ಯವಿದೆ. ವಿಶೇಷವಾಗಿ ಸಭಾ ಕಾರ್ಯಕ್ರಮ ಮತ್ತು ಸಂವಾದ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಹಿರಿಯ ದೈವ ನರ್ತಕರಾದ ಶ್ರೀ ಲೋಕಯ್ಯ ಸೇರಾ, ಶ್ರೀ ಎನ್. ಕೆ. ಸಾಲ್ಯಾನ್ , ದೈವ ನರ್ತಕರಾದ ದಯಾನಂದ ಕತ್ತಲ್ ಸಾರ್, ತುಳು ಜಾನಪದ ವಿದ್ವಾಂಸರಾದ ಶ್ರೀ ಮಹೇಂದ್ರನಾಥ್ ಸಾಲೆತ್ತೂರು, ಬರಹಗಾರರು ಹಿಂದು ಮುಖಂಡರು ಪ್ರಖರ ವಾಗ್ಮಿ ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಲೇಖಕರು ಚಿಂತಕರಾದ ಶ್ರೀ ಮನ್ಮಥ ಶೆಟ್ಟಿ ಪುತ್ತೂರು, ವಿಶ್ವ ಹಿಂದು ಪರಿಷತ್ ನ ಹಿಂದು ಮುಖಂಡ ಶ್ರೀ ಶರಣ್ ಪಂಪ್ ವೆಲ್, ತುಳುನಾಡ ದೈವರಾಧನ ಸಂರಕ್ಷಣಾ ವೇದಿಕೆ ಗೌರವಧ್ಯಕ್ಷರಾದ ಶ್ರೀ ದಿಲ್ ರಾಜ್ ಆಳ್ವ, ಚಿಂತಕರಾದ ಶ್ರೀ ತಮ್ಮಣ್ಣ ಶೆಟ್ಟಿ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಯು ಟಿ ಖಾದರ್ ಸಭಾಪತಿಗಳು, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ,ನಾಲ್ಕು ತಾಲೂಕಿನ ಶಾಸಕರು, ಹಿಂದೂ ಸಂಘಟನೆಗಳ ಪ್ರಮುಖರು, ದೈವ ಚಾಕಿರಿಯವರು, ನಾಟಕ, ಸಿನೇಮಾ, ಯಕ್ಷಗಾನ ಕಲಾವಿದರು, ಜಿಲ್ಲೆಯ ಜನಪ್ರತಿನಿಧಿಗಳು, ದೈವಭಕ್ತರು ಒಟ್ಟು ಸೇರಿ ದೈವಾರಾಧನೆಯ ಮೇಲಾಗುತ್ತಿರುವ ಸಾಂಸ್ಕೃತಿಕ ಆಕ್ರಮಣ, ಅನಗತ್ಯ ಬದಲಾವಣೆ, ದೈವ ನಂಬಿಕೆಯ ವಿಡಂಬನೆ, ದೈವ ನಂಬಿಕೆಗಳನ್ನು ಅಪಮಾನಿಸುವುದರ ವಿರುದ್ಧ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೇದಿಕೆಯ ಅಧ್ಯಕ್ಷರಾದ ಭರತ್ ಬಳ್ಳಾಲ್ ಬಾಗ್ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಕೇಳಿಕೊಂಡಿದ್ದಾರೆ.