ಪುತ್ತೂರು:ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸದಸ್ಯತಾ ಅಭಿಯಾನ 2024ರ ಕಾರ್ಯಗಾರ ಕಲ್ಲೇಗ ಭಾರತಮಾತಾ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಪಿ ಉಜ್ರೆಮಾರು ವಹಿಸಿದ್ದರು.ಕಾರ್ಯಾಗಾರದ ಪ್ರಸ್ತಾವನೆಯನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಪುತ್ತೂರು ಪ್ರಭಾರಿಯವರಾದ ಸುನೀಲ್ ಆಳ್ವಾ ಮಾತಾನಾಡಿದರು,ಕಾರ್ಯಾಗಾರದ ಕಾರ್ಯಸೂಚಿಯಾದ ಸದಸ್ಯತಾ ಅಭಿಯಾನವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವೀಯಾಗಿ ಅನುಷ್ಠಾನಗೊಳಿಸಲು ಕಾರ್ಯಕರ್ತರು ಶಕ್ತೀ ಮೀರಿ ಕೆಲಸ ಮಾಡಬೇಕು ಎಂದು ಜಿಲ್ಲೆಯ ಸದಸ್ಯತನಾ ಅಭಿಯಾನದ ಸಂಯೋಜಕರಾದ ವಿಕಾಸ್ ಪುತ್ತೂರು ಮಾತನಾಡಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆಯವರು ಸಂದರ್ಭೋಚಿತವಾಗಿ ಮಾತಾನಾಡಿದರು, ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್,ಜಿಲ್ಲಾ ಸದಸ್ಯತನಾ ಅಭಿಯಾನದ ಸಹ ಸಂಚಾಲಕರಾದ ನಿತೀಶ್ ಶಾಂತಿವನ, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ,ಅನಿಲ್ ತೆಂಕಿಲ,ನಿಕಟಪೂರ್ವ ಅಧ್ಯಕ್ಷರುಗಳಾದ ಸಾಜ ರಾಧಕೃಷ್ಣ ಆಳ್ವಾ,ಪಿ ಜಿ ಜಗನ್ನೀವಾಸ್ ರಾವ್ ,ಬೂಡಿಯಾರ್ ರಾಧಕೃಷ್ಣ ರೈ,ಒ.ಬಿ.ಸಿ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ್,ಅಪ್ಪಯ ಮಣಿಯಾಣಿ,ಪುರುಷೋತ್ತಮ ಮುಂಗ್ಲಿಮನೆಉಪಸ್ಥಿತರಿದ್ದರು.
ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಸ್ವಾಗತಿಸಿ,ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು ಧನ್ಯವಾದಗೈದರು,ಕಾರ್ಯಕ್ರಮವನ್ನು ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ ನಿರೂಪಿಸಿದರು.
ಗ್ರಾಮಾಂತರ ಮಂಡಲ ಸದಸ್ಯತನಾ ಅಭಿಯಾನದ ಪ್ರಮುಖರಾಗಿ ಉಮೇಶ್ ಕೋಡಿಬೈಲು,ಹರಿಪ್ರಸಾದ್ ಯಾದವ್,ಸುನೀಲ್ ದಡ್ಡು ಹಾಗೂ ನಗರ ಮಂಡಲಕ್ಕೆ ನಾಗೇಶ್ ಪ್ರಭು,ಯುವರಾಜ್ ಪೆರಿಯತ್ತೋಡಿ,ವಸಂತಲಕ್ಷ್ಮಿಯವರನ್ನು ಜಿಲ್ಲಾ ಬಿಜೆಪಿಯಿಂದ ನಿಯೋಜಿಸಲಾಗಿದೆ.