ಕೆಮ್ಮಾಯಿಯಲ್ಲಿ ನೂತನ ಪ್ರಯಾಣಿಕರ ತಂಗುದಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ 11-9-2024 ರಂದು ನಡೆಯಿತು.
ಬಸ್ಸು ಪ್ರಯಾಣಿಕರ ತಂಗುದಾಣ ನಿರ್ಮಾಣವು ಕೌಶಲ್ ಮಿಡಿಯಾ ಇವರ ಪ್ರಾಯೋಜಕತ್ವದಲ್ಲಿ ಹಾಗೂ ನಗರ ಸಭೆಯ ಸಹಕಾರದಿಂದ ನಿರ್ಮಾಣ ಆಗುತ್ತಿದೆ .
ಕಾರ್ಯಕ್ರಮದಲ್ಲಿ
ಮಾಜಿ ಶಾಸಕ ಸಂಜೀವ ಮಠಂದೂರು,
ನಗರ ಸಭೆಯ ಅಧ್ಯಕ್ಷ ರಾದ ಲೀಲಾವತಿ ಕೃಷ್ಣನಗರ,
ಉಪಾಧ್ಯಕ್ಷರಾದ ಬಾಲಚಂದ್ರ,
ಸ್ಥಾಯಿ ಸಮಿತಿಯ ನಿಯೋಜಿತ ಅಧ್ಯಕ್ಷ ಸುಂದರ ಪೂಜಾರಿ ಬಡಾವು,
ನಗರ ಸಭೆಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾ ಗೌರಿ,
ಕೌಶಲ್ ಮಿಡಿಯಾದ ಕೌಶಲ್,
ಶ್ರೀ ವಿಷ್ಣು ಯುವಕ ಮಂಡಲದ ಅಧ್ಯಕ್ಷ ದಯಾನಂದ ಗೌಡ ಕೆಮ್ಮಾಯಿ,
ಪುತ್ತೂರು ನಗರ ಮಂಡಲದ ಅಧ್ಯಕ್ಷರಾದ ಶಿವಕುಮಾರ್,
ಮಹಿಳಾ ಮೋರ್ಚಾ ದ ಅಧ್ಯಕ್ಷೆ ಸ್ವರ್ಣಾ ಲತಾ ಹೆಗ್ಡೆ,
ಬೂತ್ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ,
ನಲ್ಕ ಗೋಪಾಲಕೃಷ್ಣ ಆಚಾರ್ಯ, ಹಸೈನಾರ್ ಕೆಮ್ಮಾಯಿ,
ಪಂಚಾಯತ್ ಸದಸ್ಯ ತಿಮ್ಮಪ್ಪ ಪೂಜಾರಿ
ಮತ್ತು ಕೆಮ್ಮಾಯಿ ಪಾರ್ಕಿಂಗ್ ನ ರಿಕ್ಷಾ ಚಾಲಕ ಹಾಗೂ ಮಾಲಕರು ಉಪಸ್ಥಿತರಿದ್ದರು.
ಶಿಲಾನ್ಯಾಸ ಕಾರ್ಯಕ್ರಮವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ನಗರಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ಮತ್ತು ಸುಂದರ ಪೂಜಾರಿ ಬಡಾವು ಇವರು ನೇರವೇರಿಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರು ಈ ಹಿಂದೆ ನಾವು ಪುತ್ತೂರು ನಗರ ಸಭೆಯ ಹಲವು ಕಡೆ ಹೈಟೆಕ್ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಆಗಿದ್ದು , ಕೆಮ್ಮಾಯಿ ಯಲ್ಲಿ ಈಗ ನೇರವೇರುತ್ತಿದೆ.
ಈ ಪ್ರಯಾಣಿಕರ ತಂಗುದಾಣಕ್ಕೆ ಸಹಕರಿಸುವ ಕೌಶಲ್ ಮಿಡಿಯ ಹಾಗೂ ಸುಂದರ ಪೂಜಾರಿ ಬಡಾವು ಇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಾತಾಡಿದರು.
ಕಾರ್ಯಕ್ರಮವನ್ನು ಪ್ರಶಾಂತ್ ಕೆಮ್ಮಾಯಿ ನಿರೂಪಿಸಿದರು