ಜಿಎನ್‌ಎಸ್‌ಎಸ್ ಅಳವಡಿಸಿದ ವಾಹನಗಳ ಮಾಲೀಕರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುಡ್ ನ್ಯೂಸ್ ನೀಡಿದೆ. ಪ್ರಾಯೋಗಿಕವಾಗಿ ರಾಜ್ಯದ ಒಂದು ಮಾರ್ಗದಲ್ಲಿ ಜಿಎನ್‌ಎಸ್‌ಎಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ನವದೆಹಲಿ ಗ್ಲೋಬಲ್ ನೇವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್‌ಎಸ್‌ಎಸ್- ಪ್ರಯಾಣಿಸಿದ ದೂರಕ್ಕಷ್ಟೇ ಶುಲ್ಕ ವಿಧಿಸಲು ಅನುವು ಮಾಡುವ ವ್ಯವಸ್ಥೆ) ಅಳವಡಿಸಿಕೊಂಡ ಖಾಸಗಿ ವಾಹನಗಳಿಗೆ, ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ 20 ಕಿ.ಮೀವರೆಗಿನ ಪ್ರಯಾಣಕ್ಕೆ ಶುಲ್ಕ ವಿಧಿಸದೇ ಇರುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆ, 2008ಕ್ಕೆ ತಿದ್ದುಪಡಿ ತರುವ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.