ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಪ್ರತಿಷ್ಟಿತ ಪಾರ್ತಿಸುಬ್ಬ ಪ್ರಶಸ್ತಿಗೆ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಆಯ್ಕೆಗೊಂಡಿದ್ದಾರೆ. ಉಳಿದಂತೆ ಐವರಿಗೆ ಗೌರವ ಪ್ರಶಸ್ತಿ, 10 ಮಂದಿಗೆ ಯಕ್ಷಸಿರಿ ಪ್ರಶಸ್ತಿ, ಹಾಗೂ 1 ದತ್ತಿನಿಧಿ ಪ್ರಶಸ್ತಿ ಘೋಷಿಸಲಾಗಿದೆ.
ತೆಂಕುತಿಟ್ಟಿನ ಖ್ಯಾತ ಭಾಗವತರಾದ ದಿನೇಶ ಅಮ್ಮಣ್ಣಾಯ, ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ,,ಮೂಡಲಪಾಯದ ಭಾಗವತ ನಾರಾಯಣಪ್ಪ ಎಂ.ಆರ್, ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ ಅವರಿಗೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟಿಸಿ ಘೋಷಿಸಲಾಗಿದೆ.
10 ಮಂದಿಗೆ ಯಕ್ಷಸಿರಿ ಪ್ರಶಸ್ತಿ ಪ್ರಕಟಿಸಲಾಗಿದೆ. ತೆಂಕುತಿಟ್ಟಿನ ಹಿರಿಯ ಕಲಾವಿದ ಕಾಸರಗೋಡು ಮೂಲದ ರಘುನಾಥ ಶೆಟ್ಟಿ ಬಾಯಾರು, ಬಡಗು ತಿಟ್ಟಿನ ಹಾಸ್ಯಗಾರ ಹೊಳೆಮಗೆ ನಾಗಪ್ಪ ಮರಕಲ, ತೆಂಕು ಪ್ರಸಾದನ ಕಲಾವಿದ ದಿವಾಕರದಾಸ್ ಕಾವಳಕಟ್ಟೆ, ಬಡಗು ವೇಷಧಾರಿ ಶಿರಳಗಿ ತಿಮ್ಮಪ್ಪ ಹೆಗಡೆ, ತೆಂಕಿನ ಬಣ್ಣದ ವೇಷಧಾರಿ ಸುಬ್ರಾಯ ಪಾಟಾಳಿ, ತೆಂಕು-ಬಡಗಿನ ಕಲಾವಿದ ಬಾಬು ಕುಲಾಲ್ ಹಳ್ಳಾಡಿ, ಬಡಗಿನ ನರಾಡಿ ಭೋಜರಾಜ ಶೆಟ್ಟಿ, ಬಡಗು ಚೆಂಡೆ ವಾದಕ ಸದಾನಂದ ಪ್ರಭು, ಮೂಡಲಪಾಯ ಭಾಗವತರಾದ ಶಿವಯ್ಯ, ಜೀಯಪ್ಪ ಕೋಲಾರ ಯಕ್ಷಸಿರಿ ಪ್ರಶಸ್ತಿ ಇವರುಗಳ ಮೂಡಿಗೇರಿದೆ.
2022-23ನೇ ಸಾಲಿನ ಪುಸ್ತಕ ಬಹುಮಾನಕ್ಕೆ ವಿದ್ವಾನ್ ಗಣಪತಿ ಭಟ್, ಡಾ. ಮನೋರಮ ಬಿ.ಎನ್, ಡಾ. ಸತೀಶ ನಾಯ್ಕ, ಎಚ್. ಸುಜಯೀಂದ್ರ ಹಂದೆ ಅವರ ಕೃತಿಗಳನ್ನು ಆರಿಸಲಾಗಿದೆ.