ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದು ನ್ಯಾಯಾಲಯ ತೀರ್ಪು : ಪುತ್ತೂರು ಬಿಜೆಪಿ ಸ್ವಾಗತ : ದಯಾನಂದ ಶೆಟ್ಟಿ ಉಜಿರೆಮಾರ್
ಮುಡಾ ಹಗರಣದಲ್ಲಿ ಭಾಗಿಯಾದ ಸಿ ಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದು ತೀರ್ಪು ಪ್ರಕಟಿಸಿದ ಮಾನ್ಯ ಉಚ್ಚ್ಯ ನ್ಯಾಯಾಲಯದ ತೀರ್ಪನ್ನು ಪುತ್ತೂರು ಬಿಜೆಪಿ ಸ್ವಾಗತಿಸುತ್ತದೆ. ಅಧಿಕಾರದ ಮದದಿಂದ ನಾನು ನಡೆದ್ದದೇ ದಾರಿ ಎಂದು ಅಘೋಷಿತ ತುರ್ತು ಪರಿಸ್ಥಿತಿಯ ಆಡಳಿತ ನಡೆಸುತ್ತಾ ಕರ್ನಾಟಕ ರಾಜ್ಯವನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಗೆ ಇದು ನಿಶ್ಚಿತ ಪಾಠವಾಗಿದೆ.
ನ್ಯಾಯಾಲಯ ತೀರ್ಪು ನೀಡಿದೆ ಈ ಮೂಲಕ ನ್ಯಾಯಾಂಗ ವ್ಯವಸ್ಥೆಯ ನಂಬಿಕೆ ಬಲಗೊಂಡಿದೆ. ಸಂವಿಧಾನದ ಮೇಲೆ ನಿಜವಾದ ನಂಬಿಕೆ ಇರುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ಒತ್ತಾಯಿಸಿದ್ದಾರೆ.