ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದವನ್ನು ನೀಡುವ ಸಂಪ್ರದಾಯವು 300 ವರ್ಷಕ್ಕೂ ಹಿಂದೆ ಚಾಲ್ತಿಗೆ ಬಂತು. ಮೊದಲ ಬಾರಿಗೆ 1715ರ ಆಗಸ್ಟ್ 2 ರಂದು ಮೊದಲ ಬಾರಿಗೆ ಲಡ್ಡು ಪ್ರಸಾದ ನೀಡುವುದನ್ನು ಜಾರಿಗೊಳಿಸಲಾಯಿತು. ಪೋಟು (ದೇವರ ಅಡುಗೆ ಮನೆ) ಎಂಬ ಅಡುಗೆ ಮನೆಯಲ್ಲಿ ಇದನ್ನು ತಯಾರಿಸುವ ಪರಂಪರೆ ಬೆಳೆಯಿತು. ಸಾಂಪ್ರದಾಯಿಕ ಸಮುದಾಯದ ನುರಿತ ಬಾಣಸಿಗರು ಈ ಲಾಡನ್ನು ತಯಾರಿಸುತ್ತಾರೆ.
ಈಗಾಗಲೇ ಹೇಳಿರುವಂತೆ ತಿರುಪತಿಯಲ್ಲಿ ಲಡ್ಡು ಪ್ರಸಾದ ನೀಡುವ ಸಂಪ್ರದಾಯವು 1803 ರಲ್ಲಿ ಬೂಂದಿಯನ್ನು ಪ್ರಸಾದವಾಗಿ ನೀಡುವುದರೊಂದಿಗೆ ಆರಂಭವಾಯಿತು. ಈ ಸಂಪ್ರದಾಯ ಆರಂಭವಾಗಿ ಸುಮಾರು 200 ವರ್ಷಗಳು ಕಳೆದಿದೆ. ಆದರೆ ಈ ಸಂಪ್ರದಾಯವನ್ನು 1940 ರಲ್ಲಿ ಬದಲಾಯಿಸಲಾಯಿತು. ಬೂಂದಿಗೆ ಬದಲಾಗಿ ಲಡ್ಡು ಬಳಕೆ ಆರಂಭವಾಗಿದೆ. 1950 ರಲ್ಲಿ ಪ್ರಸಾದದಲ್ಲಿ ಬಳಸಬೇಕಾದ ವಸ್ತುಗಳ ಪ್ರಮಾಣವನ್ನು ಟಿಟಿಡಿ ನಿಗದಿಪಡಿಸಿತು. ಹಾಗೂ 2001 ರಲ್ಲಿ ಲಡ್ಡು ತಯಾರಿಸುವುದರಲ್ಲಿ ಕೊನೆಯ ಬದಲಾವಣೆಯನ್ನು ಮಾಡಲಾಗಿದ್ದು, ಇದನ್ನೇ ಇಲ್ಲಿಯವರೆಗೂ ಅನುಸರಿಸಿಕೊಂಡು ಬರಲಾಗುತ್ತಿದೆ.
ತಿರುಪತಿ ಲಡ್ಡು ಪ್ರಸಾದವನ್ನು ಶ್ರೀವಾರಿ ಲಡ್ಡು ಎಂದೂ ಕರೆಯುವುದುಂಟು. 2009 ರಲ್ಲಿ ಭೌಗೋಳಿಕ ಗುರುತಿನ (ಜಿಐ) ಟ್ಯಾಗ್ ಪಡೆದ ತಿರುಮಲ ಲಡ್ಡು ಮೂರು ಶತನಮಾನಗಳಿಂದ ಭಕ್ತರ ಪ್ರೀತಿಗೆ ಪಾತ್ರವಾದ ಜನಪ್ರಿಯ ಪ್ರಸಾದವಾಗಿ ರೂಪುಗೊಂಡಿದೆ.
ಲಡ್ಡು ಪೊಟ್ಟು ಎಂದು ಕರೆಯಲಾಗುವ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಪ್ರತಿದಿನ 8 ಲಕ್ಷಕ್ಕೂ ಅಧಿಕ ಲಡ್ಡುಗಳನ್ನು ತಯಾರಿಸಲು ಸುಮಾರು 620 ಅಡುಗೆಯವರು ಕೆಲಸ ಮಾಡುತ್ತಾರೆ. ಈ 620 ಜನರನ್ನು ಪೊಟ್ಟು ಕಾರ್ಮಿಕರು ಎಂದು ಕರೆಯಲಾಗುತ್ತದೆ. ಇವರಲ್ಲಿ 150 ನೌಕರರು ನಿಯಮಿತ ಮತ್ತು 350 ನೌಕರರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಉದ್ಯೋಗಿಗಳಲ್ಲಿ 247 ಜನರು ಅಡುಗೆಯನ್ನು ಬೇಯಿಸುವಲ್ಲಿ ನಿರತರಾಗಿರುತ್ತಾರೆ.
ಮೊದಲಿಗೆ ದೇವರಿಗೆ ಲಡ್ಡು ನೈವೇದ್ಯವಾಗಿ ನೀಡಲಾಗುತ್ತಿತ್ತು. ಅದನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡುವ ಪರಿಪಾಠ 1940ರ ದಶಕದಲ್ಲಿ ಶುರುವಾಯಿತು. ಈ ಅಲಂಕಾರಿಕ ನೈವೇದ್ಯಗಳಿಗೆ ಮೊದಲು ವೆಂಟಕೇಶ್ವರನಿಗೆ ಮಣ್ಣಿನ ಪಾತ್ರೆಯಲ್ಲಿ ಮೊಸರು ಅನ್ನವನ್ನು ನೈವೇದ್ಯವಾಗಿ ಸಮರ್ಪಿಸಲಾಗುತ್ತಿತ್ತು. ಅದು ದೇವರ ಅಚ್ಚು ಮೆಚ್ಚಿನ ನೈವೇದ್ಯ. ಅದನ್ನು ಇಂದಿಗೂ ಮುಂದುವರಿಸಲಾಗಿದೆ”.
ದೇವಾಲಯದಲ್ಲಿ ಪ್ರತಿದಿನ ಸಿಗುವ ಲಡ್ಡುಗಳಲ್ಲದೆ ಇನ್ನು ವಿವಿಧ ರೀತಿಯ ಲಡ್ಡುಗಳನ್ನು ಇಲ್ಲಿ ಪ್ರಸಾದವಾಗಿ ನೀಡಲಾಗುತ್ತದೆ. ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಂದು ಭಕ್ತರಿಗೂ 60 ರಿಂದ 70 ಗ್ರಾಂ ತೂಕವನ್ನು ಹೊಂದಿರುವ ಪ್ರೋಕ್ತಂ ಲಡ್ಡುವನ್ನು ನಿಯಮಿತವಾಗಿ ನೀಡಲಾಗುತ್ತದೆ. ಇನ್ನು ವಿಶೇಷ ದಿನಗಳಲ್ಲಿ ಅಥವಾ ಹಬ್ಬಗಳ ಸಮಯದಲ್ಲಿ 750 ಗ್ರಾಂ ತೂಕವನ್ನು ಹೊಂದಿರುವ ಆಸ್ಥಾನಂ ಲಡ್ಡುಗಳನ್ನು ವಿತರಿಸಲಾಗುತ್ತದೆ. ಈ ಲಡ್ಡುವಿನಲ್ಲಿ ನಾವು ಹೆಚ್ಚಾಗಿ ಗೋಡಂಬಿ, ಬಾದಾಮಿ ಮತ್ತು ಕೇಸರಿಗಳನ್ನೇ ನೋಡಬಹುದು. ಕಲ್ಯಾಣೋತ್ಸವದಲ್ಲಿ ಕೆಲವು ವಿಶೇಷ ಭಕ್ತರಿಗೆ ಲಡ್ಡು ನೀಡಲಾಗುತ್ತದೆ. ಈ ಲಡ್ಡುಗಳಿಗೂ ಹೆಚ್ಚಿನ ಬೇಡಿಕೆ ಇದೆ.
ತಿರುಮಲದಲ್ಲಿ ಮೂರು ರೀತಿಯ ಲಡ್ಡುಗಳು – 750 ಗ್ರಾಂ ತೂಕದ ಆಸ್ಥಾನಂ ಲಡ್ಡು. ಇದರಲ್ಲಿ ಕೇಸರಿ, ಬಾದಾಮಿ, ಗೋಡಂಬಿ, ದ್ರಾಕ್ಷಿ ತುಂಬಿಕೊಂಡಿದ್ದು ಇದಕ್ಕೆ 200 ರೂಪಾಯಿ ದರ. ವಿಶೇಷ ಸೇವೆ ಇದ್ದರಷ್ಟೆ ಇದನ್ನು ಮಾಡುತ್ತಾರೆ. ಎರಡನೇಯದ್ದು ಕಲ್ಯಾಣೋತ್ಸವಂ ಲಡ್ಡು. ಕಲ್ಯಾಣೋತ್ಸವ ಸೇವೆಗೆ ನೈವೇದ್ಯವಾಗಿ ಬಳಸುವ ಲಡ್ಡು ಇದಾಗಿದ್ದು, ಸೇವೆ ಮಾಡಿಸಿದವರಿಗೆ ಪ್ರಸಾದ ರೂಪವಾಗಿ ನೀಡುತ್ತಾರೆ. ಇನ್ನು ಮೂರನೇಯದ್ದು ಪ್ರೋಕ್ತಂ ಲಡ್ಡು 160 – 175 ಗ್ರಾಂ ತೂಕ ಇರುತ್ತೆ. 50 ರೂಪಾಯಿ ದರ. ಇದಲ್ಲದೇ ನಾಲ್ಕನೇಯ ಲಡ್ಡು ಪ್ರಸಾದ ಗಾತ್ರದ ಇನ್ನೂ ಸಣ್ಣದು, ಭಕ್ತರಿಗೆ ಉಚಿತವಾಗಿ ನೀಡಲಾಗುತ್ತದೆ.
ವಿಸ್ಮಯ