ಪುತ್ತೂರು: ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನಕ್ಕೆ ತೆರಳುವ ಮಾರ್ಗವಾದ ನರಿಮೊಗರು ರಸ್ತೆಯಿಂದ ಮುಕ್ವೆವರೆಗೆ ಏ.14 ರಂದು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ್ ಬಿ ಏನ್ ವಹಿಸಿದ್ದರು. ಉದ್ಘಾಟನೆಯನ್ನು ನೆರವೇರಿಸಿದ ನಿವೃತ್ತ ಯೋಧ ವಸಂತ ಸಾರಕೆರೆರವರು ತೆಂಗಿನ ಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು, ಸ್ವಚ್ಛತಾ ಕಾರ್ಯಕ್ರಮವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನಕ್ಕೆ ತೆರಳುವ ಮಾರ್ಗ ನರಿಮೊಗರು ರಸ್ತೆಯಿಂದ ಮುಕ್ವೆಯ ವರೆಗೆ ಸ್ವಚ್ಚತೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಭಾಸ್ಕರ ನರಿಮೊಗರು, ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರುಗಳು ಪಾಲ್ಗೊಂಡರು.



 
                                









 
			










 
		