ಕೇಶ ದಾನ ಮಾಡಿರುವ ಪುಟ್ಟ ಸಹೋದರಿಗೆ ಕೃತಜ್ಞತೆಗಳು..
ತಾನು ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಕೇಶವನ್ನು ನೀಡಬೇಕು ಎಂಬ ಉದ್ದೇಶದಿಂದ ಕೂದಲು ಬೆಳಸಿ…ಕೂದಲು ದಾನ ಮಾಡಿರುವ ಕಾರ್ಯ ನಿಜಕ್ಕೂ ಪ್ರಶಂಸನೀಯ…
ಚೆಲುವೆಯ ಅಂದದ ಮೊಗಕೆ ಕೇಶವೇ ಭೂಷಣ…ಕೇಶವನ್ನು ಯಾವ ರೀತಿಯೆಲ್ಲಾ ಶೃಂಗರಿಸಿ ಅಂದವಾಗುವಂತೆ ಮಾಡುವುದು ಪ್ರತಿಯೊಬ್ಬ ಹೆಣ್ಣಿನ ಹೆಣ್ಣು ಮಗುವಿನ ಆಸೆಯೂ ಕೂಡಾ .
ಕ್ಯಾನ್ಸರ್ ನಿಂದ ಕೂದಲು ಕಳೆದುಕೊಂಡು ತಲೆಗೂದಲಿಲ್ಲದೆ ಮಗುವೊಬ್ಬಳು ಯಾವ ರೀತಿಯ ಸಂಕಟ ಪಡುತ್ತಾಳೆ ಎನ್ನುವುದನ್ನು ಮನಗಂಡಿದ್ದ ಶೃಂಗೇರಿಯ 4 ನೇ ತರಗತಿಯ ವಿದ್ಯಾನಗರ ಶಾಲೆಯ ಚಿತ್ರಿಕಾ D/o ಪ್ರವೀಣ್ ಎಸ್ ಸಂಕ್ಲಾಪುರ ಚಿಕ್ಕಮಂಗಳೂರು ಜಿಲ್ಲೆಯ ಪುಟ್ಟ ಸಹೋದರಿ ತಮ್ಮ ತಲೆಗೂದಲನ್ನು ಕ್ಯಾನ್ಸರ್ ನಿಂದಾಗಿ ತಲೆಗೂದಲು ಕಳೆದುಕೊಂಡವರಿಗೆ ದಾನವಾಗಿ ನೀಡಲು ತೀರ್ಮಾನಿಸಿ ಪುತ್ತೂರಿನ ” ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ ರಿ ಆರ್ಲಪದವು ಪಾಣಾಜೆ ಪುತ್ತೂರು” ಹಾಗೂ ” ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ” ಇವರಿಗೆ ನೀಡಿದ್ದಾರೆ…ನಿಮ್ಮ ಮಾನವೀಯತೆ ಇನ್ನೊಬ್ಬರಿಗೆ ಪ್ರೇರಣೆ ಆಗಲಿ ಎಂದು “ಪ್ರಜಾ ಧ್ವನಿ ವೆಬ್ ನ್ಯೂಸ್” ಹಾರೈಕೆ……… 🙏