ಹುಬ್ಬಳ್ಳಿ: ಚಲಿಸುತ್ತಿದ್ದ ಲಾರಿ ಪಲ್ಟಿಯಾಗಿ ಲಾರಿ ಕ್ಲೀನರ್ ಎದೆಗೆ ಚುಚಿದ್ದ 98 ಸೆಂ. ಮೀ ಕಬ್ಬಿಣದ ಪೈಪ್ ಹೊರತೆಗೆಯುವಲ್ಲಿ ಹುಬ್ಬಳ್ಳಿಯ ಕೆಎಂಸಿಆರ್ಐ ವೈದ್ಯರು ಯಶಸ್ವಿಯಾಗಿದ್ದಾರೆ. ವೈದ್ಯರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬುಧವಾರ ರಾಣಿಬೆನ್ನೂರಿನ ನ್ಯೂರಿನ ಹೂಲಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ (accident) ಕಬ್ಬಿಣದ ಪೈಪ್ ಲಾರಿ ಕ್ಲೀನರ್ ದಯಾನಂದ ಶಂಕರ ಬಡಗಿ (27)ಯ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಹೊರ ಬಂದಿತ್ತು.
ತಕ್ಷಣ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂ ಸಿಆರ್ಐನ ತುರ್ತು ಚಿಕಿತ್ಸಾ ಘಟಕಕ್ಕೆ ಕರೆ ತರಲಾಗಿತ್ತು. ಡಾ.ರಮೇಶ ಹೊಸಮನಿ ನೇತೃತ್ವದ ತಂಡವು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಪೈಪ್ ಹೊರ ತೆಗೆದಿದೆ.
ಭೀಕರ ಅಪಘಾತದಲ್ಲಿ ಲಾರಿ ಕ್ಲೀನರ್ ಎದೆಗೆ ಚುಚ್ಚಿದ್ದ 98 ಸೆಂ. ಮೀ ಉದ್ದದ ಕಬ್ಬಿಣ ಪೈಪ್ ಅನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿರುವ ಹುಬ್ಬಳ್ಳಿಯ ಕೆಎಂಸಿಆರ್ಐ ವೈದ್ಯರಿಗೆ ಅಭಿನಂದನೆಗಳು.
ರಾಣಿಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಲಾರಿ ಕ್ಲೀನರ್ ದಯಾನಂದ ಶಂಕರ ಬಡಗಿ ಅವರಿಗೆ ಹೃದಯದ ಸಮೀಪವೇ ಕಬ್ಬಿಣದ ಪೈಪ್ ಚುಚ್ಚಿತ್ತು. ಕಠಿಣ ಪರಿಸ್ಥಿತಿಯಲ್ಲಿಯು ಡಾ. ರಮೇಶ ಹೊಸಮನಿ ನೇತೃತ್ವದ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಪೈಪ್ ಹೊರ ತೆಗೆದು, ರೋಗಿಯ ಪ್ರಾಣ ಉಳಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿನಂದಿಸಿದ್ದಾರೆ.