ನವದೆಹಲಿ: ಮೂರು ಹಂತಗಳಲ್ಲಿ ನಡೆದ ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಮತದಾನ ಮಾಡುವುದರೊಂದಿಗೆ ದಾಖಲೆಯ ಶೇ. 69.69 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಗುರುವಾರ ಹೇಳಿದೆ.
ಮತಗಟ್ಟೆಗಳಲ್ಲಿ ಒಟ್ಟಾರೇ ಶೇ. 63.88 ರಷ್ಟು ಮತದಾನವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಶೇ. 58.58 ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಅಕ್ಟೋಬರ್ 1 ರಂದು ಕೇಂದ್ರಾಡಳಿತ ಪ್ರದೇಶದ 40 ಸ್ಥಾನಗಳಿಗೆ ಮೂರನೇ ಹಂತದ ಮತದಾನ ನಡೆದಿತ್ತು.
ಶೇ. 70.02 ರಷ್ಟಿದ್ದ ಮಹಿಳೆಯರಿಗೆ ಹೋಲಿಸಿದರೆ ಶೇ. 69.37 ರಷ್ಟು ಪುರುಷ ಮತದಾರರು ಮತದಾನ ಮಾಡಿದ್ದಾರೆ. ಸುಮಾರು ಶೇ. 44 ರಷ್ಟು ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 64.68 ರಷ್ಟು ಪುರುಷರು ಮತದಾನದಲ್ಲಿ ಪಾಲ್ಗೊಳ್ಳುವುದರೊಂದಿಗೆ ದಾಖಲೆಯ ಒಟ್ಟಾರೇ ಶೇ. 63. 88 ರಷ್ಟು ಮತದಾನವಾಗಿದೆ.
ಒಟ್ಟಾರೇ ಶೇ. 63.04ರಷ್ಟು ಮಹಿಳೆಯರು ಮತ್ತು ಶೇ. 38.24 ರಷ್ಟು ತೃತೀಯ ಲಿಂಗಿಗಳು ಮತದಾನ ಮಾಡಿದ್ದಾರೆ.
ಮತ ಎಣಿಕೆ ವೇಳೆ ಅಂಚೆ ಮತಪತ್ರಗಳ ಎಣಿಕೆ ಲಭ್ಯವಿರುತ್ತವೆ. ಅಂಚೆ ಮತಪತ್ರಗಳಲ್ಲಿ ಸೇವಾ ಮತದಾರರು, ಗೈರುಹಾಜರಾದ ಮತದಾರರು (85 ವರ್ಷಕ್ಕಿಂತ ಮೇಲ್ಪಟ್ಟವರು, ವಿಕಲಚೇತನರು, ಅಗತ್ಯ ಸೇವೆಗಳಲ್ಲಿ ಇರುವವರು ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಮತದಾರರಿಗೆ ನೀಡಿದ ಅಂಚೆ ಮತಪತ್ರಗಳು ಸೇರಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.