ವಿಟ್ಲ: ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಸಂಘಟನೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ, ರಾಜ್ಯಾಧ್ಯಕ್ಷರಾದ ಜೆ. ಶ್ರೀನಿವಾಸ್ ರವರ ಆದೇಶದಂತೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಿಡ ನೆಡುವ ಕಾರ್ಯಕ್ರಮ ಮತ್ತು ಡಿ ಗ್ರೂಪ್ ನೌಕರರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಹಗಲು ಕಷ್ಟ ಪಟ್ಟು ದುಡಿಯುವ ಡಿ ಗ್ರೂಪ್ ನೌಕರರನ್ನು ಗುರುತಿಸಿ ಅವರನ್ನು ಶಾಲು ಹೊದಿಸಿ ಪುಷ್ಪ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ರಾಜ್ಯ ಸಂಚಾಲಕರಾದ ರಾಮದಾಸ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ ಕಾರ್ತಿಕ್ ರೈ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವೇದಾವತಿ, ಕಚೇರಿ ಅಧೀಕ್ಷಕಿ ಆಶಾಲತಾ, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ, ಎಂ ಇಂದಿರಾ ಮತ್ತು ಸಿಬ್ಬಂದಿಗಳು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ್ ವಿಟ್ಲ, ಲಯನ್ಸ್ ಕ್ಲಬ್ ನಿಕಟ ಪೂರ್ವ ಪ್ರಾಂತೀಯ ಅದ್ಯಕ್ಷರಾದ ಸುದರ್ಶನ್ ಪಡಿಯಾರ್, ವಿಟ್ಲ ಲಯನ್ಸ್ ಕ್ಲಬ್ ನ ಅದ್ಯಕ್ಷರಾದ ರಜಿತ್ ಆಳ್ವ, ಜಯರಾಮ ಬಲ್ಲಾಳ್, ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಸದಸ್ಯರಾದ ರಾಜಶೇಖರ ಶೆಟ್ಟಿ, ಮನೋಜ್ ರೈ,ನಾಗೇಶ ಬಸವನ ಗುಡಿ,ತಿಲಕ್ ರಾಜ್ ಶೆಟ್ಟಿ,ನವೀನ್ ಶೆಟ್ಟಿ ಚಂದಳಿಕೆ, ಹರೀಶ್ ಕೆಲಿಂಜ, ತುಳಸಿ ಶೆಟ್ಟಿ, ರಘುನಾಥ್ ಮೇಗಿನಪೇಟೆ,ರಾಜೇಶ್ ನಾಯಕ್, ಅಜಿತ್ ಮಾಣಿಲ, ನವೀನ್ ಪಟ್ಟೆ, ಮನೋಜ್ ಆಳ್ವ,ಪ್ರವೀಣ್ ನಾಯಕ್ ಅನಂತಾಡಿ, ಮೋಹನ ಕಟ್ಟೆ, ಭರತರಾಜ್ ಶೆಟ್ಟಿ, ಸುದರ್ಶನ್ ವಿಟ್ಲ ನಿಶಾಂತ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಪ್ರಭಾಕರ ಅಮೈ, ಪ್ರವೀಣ್ ನಾಯ್ಕ್. ಅನಂತಾಡಿ, ಸಚಿನ್ ರೈ ಉಪಸ್ಥಿತರಿದ್ದರು.