ಮಂಗಳಾದೇವಿಯಿಂದ ಮಂಗಳೂರು ಎಂಬ ಹೆಸರನ್ನು ಪಡೆದುಕೊಂಡಿರುವ ಈ ಊರು ತುಳುವಿನಲ್ಲಿ ಕುಡ್ಲ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಕುಡ್ಲ ಎಂದರೆ ಸಂಗಮ ಎಂಬ ಅರ್ಥವನ್ನು ಕೊಡುತ್ತದೆ. ತುಳು ಕೊಂಕಣಿ ಕನ್ನಡ ಬ್ಯಾರಿ ಭಾಷೆಯನ್ನು ಮಾತನಾಡುವ ಈ ಊರು ಕರ್ನಾಟಕದ ದಕ್ಷಿಣ ಭಾಗದಲ್ಲಿದೆ. 20ನೇ ಶತಮಾನದ ಪೂರ್ವಾರ್ಧದಲ್ಲಿಯೇ ಕಾರ್ಪೊರೇಷನ್ ಬ್ಯಾಂಕ್ ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್ಗಳನ್ನು ದೇಶಕ್ಕೆ ಕೊಟ್ಟ ಕೊಡುಗೆ ಮಂಗಳೂರಿನದ್ದು. ಹೋಟೆಲ್ ಉದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಊರು ಮಂಗಳೂರು.
ಮೀನುಗಾರಿಕೆ ಮತ್ತು ದೋಣಿ ನಿರ್ಮಾಣ ಪೀಳಿಗೆಗಳಿಂದ ಬಂದ ಮಂಗಳೂರಿಗರ ಉದ್ಯಮ. ಇದರ ಜೊತೆಗೆ ಹಂಚು ಬಿಡಿ ಕಾಫಿ ಮತ್ತು ಗೋಡಂಬಿ ರಫ್ತು ವ್ಯವಹಾರ ಮಂಗಳೂರಿನಿಂದ ಆಗುತ್ತದೆ. ಅಲ್ಬುಕರ್ಕ್ ಹಂಚಿನ ಕಾರ್ಖಾನೆ’ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಆದರೆ ಈಗ ಕಾಂಕ್ರೀಟೀಕರಣದ ಕಾರಣದಿಂದ ಅವನತಿಯತ್ತ ಸಾಗುತ್ತಿದೆ.
ಭೂ, ಜಲ, ವಾಯು ಸಾರಿಗೆ ಸಂಪರ್ಕ ಹೊಂದಿರುವ ಈ ನಗರ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಬಹುತ್ವವುಳ್ಳ ಬಹುದೊಡ್ಡ ನಗರ. ಆದರೆ ಇಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಎಬ್ಬಿಸಿವೆ. ಖಾಸಗಿ ಸಾರಿಗೆ ವ್ಯವಸ್ಥೆಗಳು ಖಾಸಗಿ ಕಂಪನಿಗಳು ಇಲ್ಲಿನ ಅರ್ಥ ವ್ಯವಸ್ಥೆಯ ಪ್ರಮುಖ ಪಾಲುದಾರಿಗಳು. ಬೇಸಲ್ ಇವಾಂಜಲಿಕಲ್ ಶಾಲೆ (1838) ಹಾಗೂ ‘ಮಿಲಾಗ್ರೆಸ್ ಶಾಲೆ’ (1848) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. 1953ರಲ್ಲಿ ಆರಂಭಗೊಂಡ ‘ಕಸ್ತೂರ್ ಬಾ ಮೆಡಿಕಲ್ ಕಾಲೇಜು’ ಭಾರತದ ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ,”ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ,”ಕೆನರಾ ಕಾಲೇಜು, ಸಂತ ಅಲೋಶಿಯಸ್ ಕಾಲೇಜು ಹಾಗೂ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜುಗಳು ಇಲ್ಲಿನ ಕೆಲವು ಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು.
ಸಪ್ಟಂಬರ್ 10, 1980ರಲ್ಲಿ ಸ್ಥಾಪನೆಗೊಂಡ ಮಂಗಳೂರು ವಿಶ್ವವಿದ್ಯಾನಿಲಯವು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತಿತ್ತು. ಆದರೆ ಹಂತ ಹಂತವಾಗಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಮುಳುಗಿಸುವಲ್ಲಿಯೂ ಸಫಲತೆಯನ್ನು ಸಾಧಿಸುತ್ತಿದೆ. ಅಂದರೆ ಮಂಗಳೂರು ವಿಶ್ವವಿದ್ಯಾನಿಲಯ ಮುಚ್ಚುವ ದಿನ ದೂರ ಉಳಿದಿಲ್ಲ.
ದಕ್ಷಿಣ ಕನ್ನಡದ ಪೈಕಿ ಎಲ್ಲಾ ತಾಲೂಕುಗಳು ಸಹ ಸರ್ಕಾರದ ಕೊಡುಗೆಯಿಂದ ವಂಚಿತವಾದುವುಗಳೇ. ಅದರಲ್ಲೂ ದಕ್ಷಿಣ ಕನ್ನಡದ ಕೇಂದ್ರ ಬಿಂದು ಮಂಗಳೂರು ಸಹ ಹೊರತಾಗಿಲ್ಲ. ಖಾಸಗಿ ಒಡೆತನದ ಬಸ್ಸುಗಳ ಹೊರತಾಗಿ ಇಲ್ಲಿ ಸರಕಾರಿ ಬಸ್ಸುಗಳು ಸಪ್ಪೆಯೇ.ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್ ಹಾಗೂ ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು. ಇದರ ಹೊರತಾಗಿ ಖಾಸಗಿ ಟ್ಯಾಕ್ಸಿಗಳು ಆಟೋ ರಿಕ್ಷಾ ಗಳು ಸಾರಿಗೆ ಸಂಪರ್ಕದ ಸೇವೆಯನ್ನು ನೀಡುವ ಇತರ ವ್ಯವಸ್ಥೆಗಳು.
ಸಿಟಿ ಬಸ್ ಗಳು ನಗರದ ಒಳಗಡೆ ಹಾಗೂ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. ಸರ್ಕಾರಿ ಬಸ್ಸುಗಳ ಬೇಡಿಕೆ ಇದ್ದರು 100 ಎಲೆಕ್ಟ್ರಿಕ್ ಬಸ್ಸುಗಳು ಮಂಗಳೂರಿಗೆ ಅನುಮೋದನೆ ಸಿಕ್ಕಿದ್ದರೂ ಕೂಡ ಅದನ್ನು ಕೊಡದೆ ಬರೀ ರಾಜಧಾನಿಗೆ ಬಳಸಲಾಗುತ್ತಿರುವುದು ಖೇದಕರ ಸಂಗತಿ. ಅದಲ್ಲದೆ ಇಲ್ಲಿನ ಸಮಸ್ಯೆಗಳನ್ನು ಪ್ರಶ್ನಿಸುವ ರಾಜಕಾರಣಿಗಳು ಇಲ್ಲಿ ಮೌನಕ್ಕೆ ಶರಣಾಗಿದ್ದಾರೆ.
ಮಂಗಳೂರು ನಗರದಲ್ಲಿ ವೆನ್ ಆಫ್ ಮತ್ತು ಲೇಡಿ ಗೋಷನ್ ಖಾಸಗಿ ಆಸ್ಪತ್ರೆಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲವೂ ಖಾಸಗಿ ಆಸ್ಪತ್ರೆಗಳೇ. ಖಾಸಗಿ ಆಂಬುಲೆನ್ಸ್ ಗಳು ಖಾಸಗಿ ಆಸ್ಪತ್ರೆಗಳು ಮಾತ್ರ ಇಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಸರ್ಕಾರಿ ಮೆಡಿಕಲ್ ಕಾಲೇಜುಗಳು ಸಹ ಮಂಗಳೂರಿನ ಮೆಟ್ಟಿಲು ಹತ್ತಲಿಲ್ಲ ಮತ್ತು ಹತ್ತುವುದೂ ಇಲ್ಲ.
ಮಂಗಳೂರು ಅನ್ನು ಅಭಿವೃದ್ದಿ ಮಾಡಲು ಅಸಡ್ಡೆ ತೋರುತಿವ ರಾಜ್ಯದ ಅಧಿಕಾರ ಹಿಡಿದಿರುವ ರಾಜಕಾರಣಿ ಗಳು ಇದು ಪ್ರತ್ಯೇಕ ರಾಜ್ಯ ಉದಯವಾಗಳು ಇದು ಮುನ್ನುಡಿಯೇ?
ತುಳು ಮಾತನಾಡುವ ತುಳುವರ ನಾಡಿನಲ್ಲಿ ಎಲ್ಲವೂ ಇದೆ ಎಲ್ಲವೂ ಖಾಸಗಿಯವರ ಒಡೆತನದಲ್ಲಿದೆ. ಇಂಡಿಯಾ ಟುಡೆ’ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು (ಕೊಚ್ಚಿಯ ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. ಆದರೆ ಇಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ರಾಜಕಾರಣಿಗಳು ವೋಟಿಗಾಗಿ ಮಾತ್ರ ಇಲ್ಲಿನ ಜನರನ್ನು ಹೊಗಳಿ ಅಟ್ಟಕ್ಕೇರಿಸಿ ಬುದ್ಧಿವಂತರು ಅಂತ ಕರೆಯುತ್ತಾರೆ.
ಆದರೆ ಸರ್ಕಾರದ ಕೊಡುಗೆ ಮಾತ್ರ ಕೈಗೆಟುಕದ ನಕ್ಷತ್ರ. ಬಹು ಸಂಸ್ಕೃತಿಯ ಮತ್ತು ಬಹುಭಾಷೆಯ ನಾಡಾಗಿರುವ ಮಂಗಳೂರಿಗೆ ಸರ್ಕಾರದ ಕೊಡುಗೆ, ಅನುದಾನದ ಅಗತ್ಯ ಸಾಕಷ್ಟಿದೆ ಈ ಬಗ್ಗೆ ಇಲ್ಲಿನ ರಾಜಕಾರಣಿಗಳು ರಾಜಕೀಯ ಮರೆತು ಅಭಿವೃದ್ಧಿಯ ಪಾತ್ರದೊಳಗೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕೆಂಬುದು ನಮ್ಮ ಕೋರಿಕೆ. ನಾಡು ಅಭಿವೃದ್ಧಿಯ ಪಥದಲ್ಲಿದ್ದಾಗ ನಾಡಿನಲ್ಲಿರುವವರೆಲ್ಲರೂ ಶ್ರೀಮಂತರು ಎಂದು ಭಾವಿಸಿ ಸರ್ಕಾರದಿಂದ ಕೊಡಬೇಕಾದ ಯೋಜನೆಗಳನ್ನು ಕೊಡದಿದ್ದಾಗ ಮಾಧ್ಯಮ ವರ್ಗದವರು ಬಡವರು ಅರಿತಪ್ಪಿಸುವ ಬರಿಯನ್ನು ಮಂಗಳೂರಿನ ಸುತ್ತ ಓಡಾಡಿ ಅಲ್ಲಿನ ಬಡವರ ಮನವಿಗಳನ್ನೂ ಪರಿಶೀಲಿಸುವ ಅಗತ್ಯವಿದೆ. ಏನಂತೀರಾ..?