ಮಹಾಭಾರತದಲ್ಲಿ ಕೃಷ್ಣನ ಪಾತ್ರದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇಡೀ ಮಹಭಾರತಕ್ಕೆ ಅವರದ್ದೇ ನೇತೃತ್ವ. ಅವರು ಇಲ್ಲದೆ ಮಹಾಭಾರತವನ್ನು ಊಹಿಸಿಕೊಳ್ಳುವುದು ಕಷ್ಟ. ಈಗ ಸುದೀಪ್ ಅವರು ‘ಬಿಗ್ ಬಾಸ್’ ತೊರೆದ ಬಗ್ಗೆಯೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ‘ಸುದೀಪ್ ಇಲ್ಲದ ಬಿಗ್ ಬಾಸ್ನ ಊಹಿಸಿಕೊಳ್ಳೋದು ಕಷ್ಟ’ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ಬೇರೆ ಹೀರೋಗಳು ನಿರೂಪಣೆಗೆ ಬಂದರೆ ಟಿಆರ್ಪಿ ತಗ್ಗಲಿದೆ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.
ಮಾಜಿ ಸ್ಪರ್ಧಿಗಳಾದ ಪ್ರಶಾಂತ್ ಸಂಬಂರ್ಗಿ, ವಿನಯ್ ಗೌಡ ಅವರು ಈ ಬಗ್ಗೆ ಮಾತನಾಡಿದ್ದು, ‘ಕೃಷ್ಣ ಇಲ್ಲದ ಮಹಾಭಾರತ ಹಾಗೂ ಸುದೀಪ್ ಇಲ್ಲದ ಬಿಗ್ ಬಾಸ್ ಎರಡೂ ಒಂದೇ’ ಎಂದು ಅವರು ಹೇಳಿದ್ದಾರೆ. ಸುದೀಪ್ ಮಗಳು ಸಾನ್ವಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಅಪ್ಪಾ ನಿಮ್ಮ ಜರ್ನಿ ಬಗ್ಗೆ ಖುಷಿ ಇದೆ.
ನಿಮ್ಮಂತೆ ಬೇರೆ ಯಾರಿಗೂ ಮಾಡಲು ಸಾಧ್ಯವಿಲ್ಲ. ನಿಮ್ಮನ್ನು ಆ ಸ್ಟೇಜ್ ಮೇಲೆ ನೋಡುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ. ಅನೇಕರು ಕಲರ್ಸ್ ಕನ್ನಡ ವಾಹಿನಿಯ ವಿರುದ್ಧ ಕಿಡಿಕಾರಿದ್ದಾರೆ. ‘ಬಿಗ್ ಬಾಸ್ನಿಂದ ಸುದೀಪ್ ಅವರನ್ನು ಕಳೆದುಕೊಂಡ ನೀವು ಸಾಕಷ್ಟು ದೊಡ್ಡ ನಷ್ಟ ಅನುಭವಿಸುತ್ತಿರಿ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.