ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಬ್ಲಾಕ್‌ಮೇಲ್ ಮಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಮಂಜುಳಾ ಪಾಟೀಲ್ ದಂಪತಿಯ ಮೊಬೈಲ್ ಫೋನ್‌ಗಳಲ್ಲಿ ಹಲವರ ಹನಿಟ್ರ್ಯಾಪ್‌ನ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ ಎಂದು ಉನ್ನತ ಪೊಲೀಸ್ ಮೂಲಗಳು ಹೇಳಿವೆ.
ಜಾಹೀರಾತು
ಜಾಹೀರಾತು
ಮಂಜುಳಾ ಪಾಟೀಲ್ ಮತ್ತು ಆಕೆಯ ಪತಿ ಶಿವರಾಜ ಪಾಟೀಲ್‌ನನ್ನು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದ್ದ ಸಿಸಿಬಿ ಪೊಲೀಸರು ನಾಲ್ಕು ಮೊಬೈಲ್ ಜಪ್ತಿ ಮಾಡಿದ್ದರು. ಆ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಹಲವು ಗಣ್ಯ ವ್ಯಕ್ತಿಗಳ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ.
ಜಾಹೀರಾತು
ಸಿಸಿಬಿ ಪೊಲೀಸರು ಮಂಜುಳಾ ದಂಪತಿಯನ್ನು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಮಂಜುಳಾ ಪಾಟೀಲ, ಹಲವು ಗಣ್ಯ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿರುವುದು ಆಕೆಯ ಮೊಬೈಲ್‌ಗಳಲ್ಲಿಸೆರೆಯಾಗಿರುವ ವಿಡಿಯೋಗಳಿಂದ ಗೊತ್ತಾಗಿದೆ.
ಮಾಜಿ ಸಚಿವರು ಮತ್ತು ಮಂಜುಳಾ ನಡುವೆ ಮೊಬೈಲ್‌ನಲ್ಲಿ ನಡೆದಿರುವ ಮೆಸೇಜ್, ವಿಡಿಯೋ, ಆಡಿಯೋ ಸಂಭಾಷಣೆ ಕುರಿತು ಪರಿಶೀಲನೆ ಮಾಡಲಾಗಿದೆ. ದೂರುದಾರರಾಗಿರುವ ಮಾಲೀಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ಹಾಗೂ ಮಾಲೀಕಯ್ಯ ಅವರಿಂದಲೂ ಹೆಚ್ಚಿನ ಮಾಹಿತಿ ಪಡೆಯಲಾಗುತ್ತದೆ. ಮಂಜುಳಾ ದಂಪತಿ ಇದೇ ರೀತಿ ಬೇರೆಯವರಿಗೂ ಬ್ಲ್ಯಾಕ್‌ಮೇಲ… ಮಾಡಿರುವ ಶಂಕೆಯಿದ್ದು, ಕಲಬುರಗಿಯಲ್ಲಿರುವ ದಂಪತಿಯ ಮನೆಯಲ್ಲಿಪರಿಶೀಲನೆ ಮಾಡಲಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಜಾಹೀರಾತು
ಆರೋಪಿ ಮಂಜುಳಾ ಪಾಟೀಲ್ ಬ್ಯಾಗ್‌ನಲ್ಲಿ 4 ಸ್ಮಾರ್ಟ್‌ಫೋನ್‌ಗಳು ಸಿಕ್ಕಿವೆ. ಆ ಫೋನ್‌ಗಳನ್ನು ಪರಿಶೀಲಿಸಿದಾಗ ಎಂಟು ಜನರ ಖಾಸಗಿ ವಿಡಿಯೊಗಳು ಪತ್ತೆಯಾಗಿವೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಪೊಲೀಸ್ ಅಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಸೇರಿದಂತೆ ಹಲವರ ಖಾಸಗಿ ವಿಡಿಯೊಗಳು ಸಿಕ್ಕಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಲಬುರಗಿ ಜಿಲ್ಲಾಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಮಂಜುಳಾ ಪಾಟೀಲ್, ಮಾಲೀಕಯ್ಯ ಅವರಿಗೆ ವಾಟ್ಸಪ್ ಮೂಲಕ ವಿಡಿಯೊ ಕರೆಗಳನ್ನು ಮಾಡಿ ಬಳಿಕ ಅವುಗಳನ್ನು ರೆಕಾರ್ಡ್ ಮಾಡಿಕೊಂಡು ಹಣ ಕೊಡುವಂತೆ ಬೆದರಿಸುತ್ತಿದ್ದಳು. ಆ ವಿಡಿಯೋಗಳನ್ನು ಬಿಡುಗಡೆ ಮಾಡದಿರಲು 20 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದಳು. ಈ ದುಷ್ಕೃತ್ಯಕ್ಕೆ ಶಿವರಾಜ ಪಾಟೀಲ್ ಸಹ ಪತ್ನಿಯ ಜತೆ ಕೈಜೋಡಿಸಿದ್ದ.
ಜಾಹೀರಾತು
ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿಸಕ್ರಿಯವಾಗಿದ್ದ ಮಂಜುಳಾ, ಕಲಬುರಗಿ ಜಿಲ್ಲೆಯ ಮಹಮ್ಮದ್ ನಲಪಾಡ್ ಬ್ರಿಗೇಡ್ ಸಂಘಟನೆ ಅಧ್ಯಕ್ಷೆಯಾಗಿದ್ದಳು. ಪಕ್ಷದಲ್ಲಿದ್ದ ಕಾರಣಕ್ಕೆ ಆಕೆ ಮಾಲೀಕಯ್ಯ ಅವರಿಗೆ ಪರಿಚಿತಳಾಗಿದ್ದಳು. ಇಬ್ಬರೂ ಪ್ರತಿನಿತ್ಯ ಮೊಬೈಲ್‌ನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದರು. ಈ ನಡುವೆ ವಿಡಿಯೋ ಕರೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಆಕೆ, ಅವುಗಳನ್ನು ಮುಂದಿಟ್ಟು ಹಣ ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದಳು. ಮಂಜುಳಾ ದಂಪತಿ ಎರಡು ದಿನಗಳ ಹಿಂದೆ ಮಾಲೀಕಯ್ಯ ಗುತ್ತೇದಾರ್‌ರ ಪುತ್ರ ರಿತೇಶ್‌ರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಡೀಲ್ ನಡೆಸಲು ಮುಂದಾಗಿದ್ದರು. ಈ ಬಗ್ಗೆ ರಿತೇಶ್ ನೀಡಿದ್ದ ದೂರು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಜಾಹೀರಾತು