ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧದ ಪ್ರಕರಣಗಳು ತೀರಾ ಹೆಚ್ಚಾಗಿ ಕೇಳಿಬರುತ್ತಿವೆ. ಮನೆಯಲ್ಲಿ ಹೆಂಡತಿಯಿದ್ದರೂ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಂತಹ, ಪರ ಪುರುಷನೊಂದಿಗೆ ವಿವಾಹಿತ ಮಹಿಳೆ ತಿರುಗಾಡಿ ಗಂಡನ ಕೈಲಿ ಸಿಕ್ಕಿ ಬಿದ್ದು, ರಂಪಾಟಗಳು ನಡೆದ ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಪರ ಪುರುಷನೊಂದಿಗೆ ಹೊಟೇಲ್ ರೂಮ್‌ಗೆ ಹೋಗಿ ಮಹಿಳೆಯೊಬ್ಬಳು ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ದೃಶ್ಯ ಕಂಡು ಇಂತಹ ನಾಚಿಕೆಗೇಡಿನ ಕೃತ್ಯಗಳಿಂದಲೇ ಇಂದು ಅದೆಷ್ಟೋ ಜನ ಮದುವೆಯಾಗಲು ಹಿಂಜರಿಯುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ನಿ ಪರಪುರುಷನೊಂದಿಗೆ ಓಯೋ ರೂಮ್‌ನಲ್ಲಿ ಇರುವ ವಿಚಾರ ತಿಳಿದು ಅಲ್ಲಿಗೆ ಬಂದಂತಹ ಪತಿರಾಯ ವಿಡಿಯೋ ಮಾಡುತ್ತಾ ಇಲ್ಲಿಗೆ ನೀನ್ಯಾಕೆ ಬಂದಿದ್ದೀಯಾ? ಯಾರ ಜೊತೆ ಬಂದಿದ್ದೀಯಾ? ಕೋಪದಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಆಕೆಯ ಬಾಯ್‌ಫ್ರೆಂಡ್‌ಗಾಗಿ ಹುಡುಕಾಟ ನಡೆಸಿದ್ದಾನೆ. ಈ ಕುರಿತ ವಿಡಿಯೋವನ್ನು venom1s ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ತುಂಬಾ ಭಯಾನಕ ಸಂಗತಿಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋದಲ್ಲಿ ಪತ್ನಿ ತನ್ನ ಗಂಡನ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ದೃಶ್ಯವನ್ನು ಕಾಣಬಹುದು. ಪತ್ನಿಯಿರುವ ಹೊಟೇಲ್ ರೂಮ್‌ಗೆ ವಿಡಿಯೋ ರೆಕಾರ್ಡ್ ಮಾಡುತ್ತಾ ಬಂದ ಗಂಡ, ಇಲ್ಲಿ ನೀನೇನು ಮಾಡ್ತಿದ್ದೀಯಾ? ಯಾರ್ ಜೊತೆ ಬಂದಿದ್ದೀಯಾ? ಮಾತಾಡು ಮಾತಾಡು ಎಂದು ಕೋಪದಲ್ಲಿ ಪ್ರಶ್ನೆಯನ್ನು ಕೇಳಿದ್ದಾನೆ. ಅಷ್ಟೇ ಅಲ್ಲದೆ ಅಲ್ಲಿ ಗಂಡಸಿನ ಶೂ ಇರುವುದನ್ನು ಕಂಡು ಶಾಕ್ ಆದ ಗಂಡ, ಈಕೆ ಪರಪುರುಷನೊಂದಿಗೆಯೇ ಬಂದಿದ್ದಾಳೆ ಎಂದು ಗೊತ್ತಾಗಿ ಆತನಿಗಾಗಿ ಇಡೀ ರೂಮ್ ಹುಡುಕಾಟ ನಡೆಸಿದ್ದಾನೆ.