ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಾರಥ್ಯದಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿ.28 ,29 ರಂದು ಜರಗುವ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮಸಂಗಮ ಕಾರ್ಯಕ್ರಮದ ಪ್ರಯುಕ್ತ ಆಮಂತ್ರಣ ಪತ್ರಿಕೆ ಗ್ರಾಮೀಣ ಮಟ್ಟದಲ್ಲಿ ಹಾಗೂ ಹೊರ ತಾಲೂಕಿನಲ್ಲಿ ವಿತರಣೆ ಹಾಗೂ ಸಮಿತಿಗಳ ರಚನೆ ನಡೆಯುತ್ತಿದೆ.
ಈಗಾಗಲೇ ಕಡಬ, ಸವಣೂರು, ಉಪ್ಪಿನಂಗಡಿ, ಈಶ್ವರಮಂಗಲ, ಕಾವು , ಮಾಡಾವು, ಪುತ್ತೂರು ನಗರ, ಪಡ್ನೂರು, ಬನ್ನೂರು, ಕೊಳ್ತಿಗೆ, ಪಾಣಾಜೆ, ಇರ್ದೆ, ಆರ್ಯಾಪು, ಸರ್ವೆ, ತಿಂಗಳಾಡಿ, ವಿಟ್ಲ ಸೇರಿದಂತೆ ಹಲವು ಕಡೆ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಸಮಿತಿ ರಚನೆ ಕಾರ್ಯಕ್ರಮ ನಡೆಯುತ್ತಿದೆ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ)ಪುತ್ತೂರು, ಕೆಯ್ಯೂರು ಘಟಕ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ)ಪುತ್ತೂರು, ಸವಣೂರು ಘಟಕ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ)ಪುತ್ತೂರು, ಕಡಬ ಘಟಕ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ)ಪುತ್ತೂರು, ಬೆಟ್ಟಂಪಾಡಿ ಘಟಕ.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು , ಹಿಂದೂ ಸಂಘಟನೆಯ ಪ್ರಮುಖರು ಹಾಗೂ ಪಕ್ಷದ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪುತ್ತೂರು ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಬ್ಯಾನರ್ ಗಳ ಅಳವಡಿಕೆ ನಡೆಯುತ್ತಿದೆ