• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಬಿಜೆಪಿಯಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಯಾಗ್ತಾರಾ??

ಬಿಜೆಪಿಯಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಯಾಗ್ತಾರಾ??

January 11, 2025
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

September 15, 2025
ಸುಂಕದಕಟ್ಟೆ ಸನಾತನ ಹಿಂದೂ ಪ್ರತಿಷ್ಠಾನದ ವತಿಯಿಂದ ಅರುಣ್ ಕುಮಾರ್ ಪುತ್ತಿಲರಿಗೆ “ಧರ್ಮರತ್ನ” ಪ್ರಶಸ್ತಿ

ಸುಂಕದಕಟ್ಟೆ ಸನಾತನ ಹಿಂದೂ ಪ್ರತಿಷ್ಠಾನದ ವತಿಯಿಂದ ಅರುಣ್ ಕುಮಾರ್ ಪುತ್ತಿಲರಿಗೆ “ಧರ್ಮರತ್ನ” ಪ್ರಶಸ್ತಿ

September 15, 2025
ವಿಠಲಗೌಡ ಹೇಳಿಕೆಯಿಂದ ಎಸ್ಐಟಿ ತನಿಖೆ: ಬಂಗ್ಲೆಗುಡ್ಡೆಯಲ್ಲಿ ಮತ್ತೆ ಶೋಧ ಸಾಧ್ಯತೆ!

ವಿಠಲಗೌಡ ಹೇಳಿಕೆಯಿಂದ ಎಸ್ಐಟಿ ತನಿಖೆ: ಬಂಗ್ಲೆಗುಡ್ಡೆಯಲ್ಲಿ ಮತ್ತೆ ಶೋಧ ಸಾಧ್ಯತೆ!

September 15, 2025
ನಟ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ : ರಾಜ್ಯದಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು ವಿದ್ಯಾವಂತರೆ ಟಾರ್ಗೆಟ್

ನಟ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ : ರಾಜ್ಯದಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು ವಿದ್ಯಾವಂತರೆ ಟಾರ್ಗೆಟ್

September 15, 2025
RCB:ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

RCB:ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

September 15, 2025
ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಲಾಯಿಲ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಲಾಯಿಲ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

September 15, 2025
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಪುತ್ತೂರು ವತಿಯಿಂದ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆ ನಿಮಿತ್ತ ದಕ್ಷಿಣ ಕರ್ನಾಟಕದಾದ್ಯಂತ ರಥಯಾತ್ರೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಪುತ್ತೂರು ವತಿಯಿಂದ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆ ನಿಮಿತ್ತ ದಕ್ಷಿಣ ಕರ್ನಾಟಕದಾದ್ಯಂತ ರಥಯಾತ್ರೆ

September 15, 2025
ರಾಜಕೀಯ ಮಾಡಬೇಕಾದ್ದು ಚುನಾವಣೆ ಸಮಯದಲ್ಲಿ, ನಂಜಿ ಇರುವವರು ಬರ್ಕತ್ತಾಗುವುದಿಲ್ಲ: ಶಾಸಕ ಅಶೋಕ್ ರೈ

ರಾಜಕೀಯ ಮಾಡಬೇಕಾದ್ದು ಚುನಾವಣೆ ಸಮಯದಲ್ಲಿ, ನಂಜಿ ಇರುವವರು ಬರ್ಕತ್ತಾಗುವುದಿಲ್ಲ: ಶಾಸಕ ಅಶೋಕ್ ರೈ

September 15, 2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಗೆಹರಿಯದ ಕೆಂಪು ಕಲ್ಲು ಗಣಿಗಾರಿಕೆ ಸಮಸ್ಯೆ ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸೆ.16ರಂದು ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಧರಣಿ: ಸಂಸದ ಕ್ಯಾ. ಚೌಟ

ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸಿದ ಕಾಂಗ್ರೆಸ್‌ ಸರ್ಕಾರದ ವಿರುದ್ದ ಮಂಗಳೂರಿನಲ್ಲಿ ನಾಳೆ ಬೃಹತ್‌ ಪ್ರತಿಭಟನಾ ಧರಣಿ: ಸಂಸದ ಕ್ಯಾ. ಚೌಟ

September 15, 2025
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಆರಂಬೋಡಿ ಗ್ರಾಮದ ಬೂತ್ ಪ್ರಗತಿ ಸಭೆ

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಆರಂಬೋಡಿ ಗ್ರಾಮದ ಬೂತ್ ಪ್ರಗತಿ ಸಭೆ

September 10, 2025
ಕೂಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆ ಬಲಿ – ಸಾರ್ವಜನಿಕರ ಆಕ್ರೋಶ! ಜನಪ್ರತಿನಿದಿಗಳ ಅಸಡ್ಡೆ ,ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರು

ಕೂಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆ ಬಲಿ – ಸಾರ್ವಜನಿಕರ ಆಕ್ರೋಶ! ಜನಪ್ರತಿನಿದಿಗಳ ಅಸಡ್ಡೆ ,ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರು

September 10, 2025
ಸೆಪ್ಟೆಂಬರ್ 21ರಂದು ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ; ಯಾವಾಗ ಮತ್ತು ಎಲ್ಲಿ ಗೋಚರಿಸುತ್ತದೆ?

ಸೆಪ್ಟೆಂಬರ್ 21ರಂದು ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ; ಯಾವಾಗ ಮತ್ತು ಎಲ್ಲಿ ಗೋಚರಿಸುತ್ತದೆ?

September 10, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, September 16, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

    ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

    ಸುಂಕದಕಟ್ಟೆ ಸನಾತನ ಹಿಂದೂ ಪ್ರತಿಷ್ಠಾನದ ವತಿಯಿಂದ ಅರುಣ್ ಕುಮಾರ್ ಪುತ್ತಿಲರಿಗೆ “ಧರ್ಮರತ್ನ” ಪ್ರಶಸ್ತಿ

    ಸುಂಕದಕಟ್ಟೆ ಸನಾತನ ಹಿಂದೂ ಪ್ರತಿಷ್ಠಾನದ ವತಿಯಿಂದ ಅರುಣ್ ಕುಮಾರ್ ಪುತ್ತಿಲರಿಗೆ “ಧರ್ಮರತ್ನ” ಪ್ರಶಸ್ತಿ

    ವಿಠಲಗೌಡ ಹೇಳಿಕೆಯಿಂದ ಎಸ್ಐಟಿ ತನಿಖೆ: ಬಂಗ್ಲೆಗುಡ್ಡೆಯಲ್ಲಿ ಮತ್ತೆ ಶೋಧ ಸಾಧ್ಯತೆ!

    ವಿಠಲಗೌಡ ಹೇಳಿಕೆಯಿಂದ ಎಸ್ಐಟಿ ತನಿಖೆ: ಬಂಗ್ಲೆಗುಡ್ಡೆಯಲ್ಲಿ ಮತ್ತೆ ಶೋಧ ಸಾಧ್ಯತೆ!

    ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಲಾಯಿಲ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

    ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಲಾಯಿಲ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಪುತ್ತೂರು ವತಿಯಿಂದ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆ ನಿಮಿತ್ತ ದಕ್ಷಿಣ ಕರ್ನಾಟಕದಾದ್ಯಂತ ರಥಯಾತ್ರೆ

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಪುತ್ತೂರು ವತಿಯಿಂದ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆ ನಿಮಿತ್ತ ದಕ್ಷಿಣ ಕರ್ನಾಟಕದಾದ್ಯಂತ ರಥಯಾತ್ರೆ

    ರಾಜಕೀಯ ಮಾಡಬೇಕಾದ್ದು ಚುನಾವಣೆ ಸಮಯದಲ್ಲಿ, ನಂಜಿ ಇರುವವರು ಬರ್ಕತ್ತಾಗುವುದಿಲ್ಲ: ಶಾಸಕ ಅಶೋಕ್ ರೈ

    ರಾಜಕೀಯ ಮಾಡಬೇಕಾದ್ದು ಚುನಾವಣೆ ಸಮಯದಲ್ಲಿ, ನಂಜಿ ಇರುವವರು ಬರ್ಕತ್ತಾಗುವುದಿಲ್ಲ: ಶಾಸಕ ಅಶೋಕ್ ರೈ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಗೆಹರಿಯದ ಕೆಂಪು ಕಲ್ಲು ಗಣಿಗಾರಿಕೆ ಸಮಸ್ಯೆ ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸೆ.16ರಂದು ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಧರಣಿ: ಸಂಸದ ಕ್ಯಾ. ಚೌಟ

    ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸಿದ ಕಾಂಗ್ರೆಸ್‌ ಸರ್ಕಾರದ ವಿರುದ್ದ ಮಂಗಳೂರಿನಲ್ಲಿ ನಾಳೆ ಬೃಹತ್‌ ಪ್ರತಿಭಟನಾ ಧರಣಿ: ಸಂಸದ ಕ್ಯಾ. ಚೌಟ

    ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಆರಂಬೋಡಿ ಗ್ರಾಮದ ಬೂತ್ ಪ್ರಗತಿ ಸಭೆ

    ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಆರಂಬೋಡಿ ಗ್ರಾಮದ ಬೂತ್ ಪ್ರಗತಿ ಸಭೆ

    ಕೂಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆ ಬಲಿ – ಸಾರ್ವಜನಿಕರ ಆಕ್ರೋಶ! ಜನಪ್ರತಿನಿದಿಗಳ ಅಸಡ್ಡೆ ,ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರು

    ಕೂಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆ ಬಲಿ – ಸಾರ್ವಜನಿಕರ ಆಕ್ರೋಶ! ಜನಪ್ರತಿನಿದಿಗಳ ಅಸಡ್ಡೆ ,ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರು

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ರಾಜಕೀಯ

ಬಿಜೆಪಿಯಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಯಾಗ್ತಾರಾ??

by ಪ್ರಜಾಧ್ವನಿ ನ್ಯೂಸ್
January 11, 2025
in ರಾಜಕೀಯ, ರಾಜ್ಯ
0
ಬಿಜೆಪಿಯಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಯಾಗ್ತಾರಾ??
5
SHARES
14
VIEWS
ShareShareShare

ಬಿಜೆಪಿಯಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಮೈಸೂರು ಬಿಜೆಪಿ ನಾಯಕರಿಂದ ಸಿಂಹ ವಿರುದ್ಧ ವಿಜಯೇಂದ್ರಗೆ ದೂರು ನೀಡಲಾಗಿದೆ. ಬಿಜೆಪಿ ನಗರಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಲಾಗಿದೆ. ಹಿಂದೂಪರ ಹೋರಾಟಗಾರ ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ಮೈ.ಕಾ ಪ್ರೇಮ್ ಕುಮಾರ್ ಅವರು 12 ಕಾರಣಗಳನ್ನು ನೀಡಿ ಸುದೀರ್ಘ ಪತ್ರ ಬರೆದು ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಗೆ ಮನವಿ ಮಾಡಿದ್ದಾರೆ. ಆ ಪತ್ರದಲ್ಲಿನ 12 ಕಾರಣಗಳು ಇಂತಿವೆ.

1 : ಪ್ರತಾಪ್ ಸಿಂಹ ಅವರು ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ದೇಶದ ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಯಾವುದೇ ಪೂರ್ವಾಪರ ಪರಿಶೀಲಿಸದೆ ಒಳಗೆ ಪ್ರವೇಶಿಸಲು ಪಾಸ್ ನೀಡಿರುವುದು ದೇಶದ ಭದ್ರತಾ ವ್ಯವಸ್ಥೆಯನ್ನೇ ಅಣಕಿಸಿದ್ದಷ್ಟೇ ಅಲ್ಲದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಸಮಸ್ತ ಕರ್ನಾಟಕದ ಜನತೆ ತಲೆ ಎತ್ತಿ ನಡೆಯಲು ಸಾಧ್ಯವಾಗದಷ್ಟು ಮುಜುಗರವನ್ನು ಸೃಷ್ಟಿಸಿತ್ತು. ಆ ಪ್ರಕರಣದ ತನಿಖೆ ಇಂದಿಗೂ ಕೂಡ ನಡೆಯುತ್ತಿದ್ದು ಪಾಸ್ ನೀಡಿಕೆಯ ಆರೋಪ ಹೊತ್ತಿರುವ ಪ್ರತಾಪ್ ಸಿಂಹ ಅವರ ತಲೆಯ ಮೇಲೆ ತೂಗುಗತ್ತಿ ಇಂದಿಗೂ ಬದಿಗೆ ಸರಿದಿರುವುದಿಲ್ಲ.

2 : ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮದಲ್ಲದ ವರುಣಾ ಕ್ಷೇತ್ರದಲ್ಲಿ ಮಾತ್ರ ಹೆಚ್ಚು ಪ್ರಚಾರ ನಡೆಸಿ, ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಚಾರದಿಂದ ಹಿಂದೆ ಸರಿದಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಿಜೆಪಿಯ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿರುತ್ತಾರೆ.

3 : ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕೆ ಕ್ಷಣಗಣನೆ ಪ್ರಾರಂಭವಾದ ಸಂದರ್ಭದಲ್ಲಿ ನ್ಯಾಯವಾದಿಗಳ ವಿರುದ್ಧ ಹೇಳಿಕೆ ನೀಡುವ ಮುಖಾಂತರ ಸಾವಿರಾರು ಮತಗಳು ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ಮೈ.ವಿ.ರವಿ ಶಂಕರ್ ವಿರುದ್ಧ ಮತ ಬೀಳುವಂತೆ ಮಾಡುವ ಕೃತ್ಯವನ್ನು ಮಾಡಿರುತ್ತಾರೆ. ಅಂದಿನ ಅವರ ಆ ಹೇಳಿಕೆಯು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ದುರುದ್ದೇಶಪೂರಿತವಾಗಿಯೇ ನೀಡಿರುವುದೆನ್ನುವುದು ಪ್ರತಿಯೊಬ್ಬರಿಗೂ ಖಾತ್ರಿಯಾಗಿದೆ.

4 : ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿರುದ್ಧ ಹಲವಾರು ರೀತಿಯ ಅಪಪ್ರಚಾರಗಳನ್ನು ನಡೆಸಿರುತ್ತಾರೆ. ಯಾವ ಯಾವ ವಿಷಯಗಳನ್ನು ಉಲ್ಲೇಖಿಸಿ ಯದುವೀರ್ ಅವರ ವಿರುದ್ಧ ಆರೋಪಗಳನ್ನು ಮಾಡಬೇಕು ಎನ್ನುವ ಕುರಿತು ವಿರೋಧ ಪಕ್ಷಗಳ ನಾಯಕರಿಗೆ ಪ್ರತಾಪ್ ಸಿಂಹ ಅವರೇ ಪರೋಕ್ಷವಾಗಿ ಸೂಚನೆಗಳನ್ನು ರವಾನಿಸಿರುತ್ತಾರೆ.

5: ಪ್ರತಾಪ್ ಸಿಂಹ ಅವರು ತಮ್ಮ ಅಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಪಕ್ಷದ ನಾಯಕರ ವಿರುದ್ಧ, ಪಕ್ಷದ ತೀರ್ಮಾನಗಳ ವಿರುದ್ಧ ಬಹಿರಂಗವಾಗಿ ಮತ್ತು ನಿರಂತರವಾಗಿ ಹೇಳಿಕೆಗಳನ್ನು ಕೊಡುತ್ತಾ, ಮಾಧ್ಯಮಗಳಿಗೆ ಸಂದರ್ಶನಗಳನ್ನು ಕೊಡುತ್ತಾ ಮುಜುಗರ ಸೃಷ್ಟಿಸುತ್ತಿದ್ದಾರೆ. ಪಕ್ಷದ ಅಧಿಕೃತ ಹೋರಾಟಗಳಿಗೆ ಪರ್ಯಾಯವಾಗಿ ತಮ್ಮದೇ ಆದ ಹೇಳಿಕೆಗಳನ್ನು ನೀಡುತ್ತಾ ಭಾರತೀಯ ಜನತಾ ಪಕ್ಷದಲ್ಲಿ ಒಡಕುಂಟಾಗಿದೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.ಮುಡಾ ಹಗರಣದ ವಿರುದ್ಧ ಜಿಲ್ಲಾ ಬಿಜೆಪಿ ನಡೆಸಿದ ಹೋರಾಟದ ಸ್ಥಳದಲ್ಲಿ ಅವರು ಮಾಧ್ಯಮಗಳ ಮುಂದೆ ಪ್ರತ್ಯೇಕ ಹೇಳಿಕೆಗಳನ್ನು ನೀಡುವ ಮುಖಾಂತರ ಕಾರ್ಯಕ್ರಮವನ್ನು ಹಾಳು ಮಾಡಿದ ಘಟನೆಯೂ ನಡೆದಿದೆ. ಮತ್ತು ಆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರಗೊಂಡು ಪಕ್ಷಕ್ಕೆ ಮುಜುಗರ ಉಂಟಾದ ಘಟನೆಯೂ ನಡೆದಿದೆ.

6 : ವಿರೋಧ ಪಕ್ಷದ ಮುಖಂಡರು “ಪ್ರತಾಪ್ ಸಿಂಹ ಅವರ ಹಲವಾರು ವೀಡಿಯೋಗಳು ತಮ್ಮ ಬಳಿ ಇವೆ” ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೂ, ಪ್ರತಾಪ್ ಸಿಂಹ ಅವರು ಕಾನೂನು ಮುಖಾಂತರ ಅವರ ಹೇಳಿಕೆಗಳನ್ನು ಎದುರಿಸದೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಇದು ಪಕ್ಷಕ್ಕೂ ಕೂಡ ಮುಜುಗರ ತರುವ ವಿಷಯವಾಗಿದೆ.

7 : ಇತ್ತೀಚೆಗಷ್ಟ್ಟೆ ‘ಪ್ರತಾಪ್ ಸಿಂಹ ಅವರಿಗೆ ಭಾರತೀಯ ಜನತಾ ಪಕ್ಷದಿಂದ ಲೋಕ ಸಭಾ ಚುನಾವಣೆಯಲ್ಲಿ ಏಕೆ ಟಿಕೆಟ್ ಸಿಕ್ಕಿಲ್ಲ’ ಎನ್ನುವ ವಿಷಯದ ಕುರಿತ ‘ಕತ್ತಲೆ ಜಗತ್ತು’ ಎನ್ನುವ ಪುಸ್ತಕವನ್ನು ಲೇಖಕರೊಬ್ಬರು ಬರೆದಿದ್ದು, ಪ್ರತಾಪ್ ಸಿಂಹ ಅವರು ಆ ಪುಸ್ತಕ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಸ್ವತಃ ಲೇಖಕರಾಗಿದ್ದ ಅವರೇ ಇನ್ನೊಬ್ಬ ಲೇಖಕರ ಪುಸ್ತಕದ ವಿರುದ್ಧ ತಡೆಯಾಜ್ಞೆ ತಂದಿರುವ ಈ ನಡೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟ್ಟು ಸಂಶಯವನ್ನು ಹುಟ್ಟುಹಾಕಿದ್ದು, ಅದು ಅಭಿಪ್ರಾಯ ಸ್ವಾತಂತ್ರ್ಯದ ಪರ ಇರುವ ಭಾರತೀಯ ಜನತಾ ಪಕ್ಷದ ಸಿದ್ಧಾಂತದ ಉಲ್ಲಂಘನೆಯೂ ಆಗಿದೆ. ಇಷ್ಟೇ ಅಲ್ಲದೆ ಈ ವಿಚಾರವು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ದಿನ ನಿತ್ಯವೂ ಸುದ್ದಿಯಾಗುತ್ತಲೇ ಇದ್ದು, ಪಕ್ಷಕ್ಕೆ ಮತ್ತು ಸ್ಥಳೀಯ ಮುಖಂಡರಿಗೆ ತೀವ್ರ ಮುಜುಗರವನ್ನು ಉಚಿಟುಮಾಡುತ್ತಿದೆ.

HPR Institute Of Nursing And Paramedical Sciences & Friends Beke

ಜಾಹೀರಾತು

8 : ಈ ಹಿಂದೆ ಕೂಡ ಹಲವಾರು ಬಾರಿ ಪ್ರತಾಪ್ ಸಿಂಹ ಅವರ ಪಕ್ಷವಿರೋಧಿ ಚಟುವಟಿಕೆಗಳ ಕುರಿತು ಸ್ಥಳೀಯ ಮುಖಂಡರಿAದ ದೂರು ಸಲ್ಲಿಕೆಯಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

9 : ಮಾಜಿ ಸಂಸದ ಪ್ರತಾಪಸಿಂಹ ಹಾಲಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರವರ ವಿರುದ್ಧದ ಹೆಜ್ಜೆಗಳನ್ನು ಹಾಕುತ್ತಿದ್ದಾರೆ ಹಾಲಿ ಸಂಸದರ ಕೆಲಸಗಳಿಗೆ ಅಡ್ಡಿಪಡಿಸುವಂತ ಕೆಲಸಗಳನ್ನು ಮಾಡುತ್ತಿದ್ದಾರೆ ಉದಾಹರಣೆಗೆ ಹುಣಸೂರು ಮತ್ತು ಕುಶಾಲನಗರ ಹೈವೇ ರಸ್ತೆಯ ವಿಷಯವಾಗಿ ಹಾಗೂ ರೈಲ್ವೆ ಮತ್ತು ಬೆಂಗಳೂರು ಮೈಸೂರು ಹೈವೇ ಹೆದ್ದಾರಿಗಳ ವಿಷಯವಾಗಿ ಮಾಜಿ ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಮತ್ತು ಕೇಂದ್ರ ಮಂತ್ರಿಗಳಿಗೆ ಮನವಿ ಮಾಡುವುದು, ಹಾಲಿ ಸಂಸದರನ್ನ ಮುಜುಗರಕೀಡು ಮಾಡುವುದು ಮಾಜಿ ಸಂಸದ ಪ್ರತಾಪ ಸಿಂಹನ ಉದ್ದೇಶವಾಗಿದೆ.

10 : ಮಾಜಿ ಸಂಸದ ಪ್ರತಾಪ ಸಿಂಹ ಸಿದ್ದರಾಮಯ್ಯ ಆರೋಗ್ಯ ಮಾರ್ಗ ರಸ್ತೆಗೆ ಹೆಸರಿಡಲು ಬೆಂಬಲ ಕೊಡುವುದು ಪಕ್ಷದ ನಿಲುವಿನ ವಿರುದ್ಧದ ನಡೆಗಳು ಈ ವಿಷಯದಿಂದ ಗೊತ್ತಾಗುತ್ತದೆ.

11 : ವಕ್ಫ್ ಬೋರ್ಡ್ ವಿಷಯವಾಗಿ ಪಕ್ಷದ ಬ್ಯಾನರ್ನಲ್ಲಿ ಹೋರಾಟ ಮಾಡದೆ ಪ್ರತ್ಯೇಕ ಹೋರಾಟದಲ್ಲಿ ಪಾಲ್ಗೊಂಡು ರಾಜ್ಯದ್ಯಕ್ಷರಾದ ವಿಜಯೇಂದ್ರ ರವರಿಗೆ ಮುಜುಗರಕೀಡು ಮಾಡುವುದು ಪ್ರತಾಪ ಸಿಂಹನ ಉದ್ದೇಶವಾಗಿದೆ.

12 : ಈ ಮಾಜಿ ಸಂಸದ ಪ್ರತಾಪ್ ಸಿಂಹ ಕೇಂದ್ರ ಮಂತ್ರಿಗಳನ್ನು ಅದರಲ್ಲೂ ರೈಲ್ವೆ ಮಂತ್ರಿ ಸೋಮಣ್ಣರವರನ್ನು ಪದೆ ಪದೇ ಭೇಟಿ ಮಾಡುವುದು ತಮಗೆ ಸಂಬಂಧ ಪಡೆದ ಮೈಸೂರು ಮತ್ತು ಕೊಡಗು ಕ್ಷೇತ್ರ ವಿಷಯಗಳಲ್ಲಿ ಮೂಗು ತೂರಿಸಿ ಅರ್ಜಿಗಳನ್ನು ಕೊಡುವುದು ಟಿಪ್ಪಣಿ ಕಾಪಿಗಳನ್ನು ತನ್ನ ಸಾಮಾಜಿಕ ತಾಣಗಳಲ್ಲಿ ಸೇರಿದಂತೆ ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ಕೊಡುವುದು ನಾನು ಮಾಜಿ ಸಂಸದನಾದರೂ ಕೂಡ ಪ್ರಭಾವಿ ಇದ್ದೇನೆ ಈಗಲೂ ಕೂಡ ಈ ಕ್ಷೇತ್ರಕ್ಕೆ ಅನುದಾನ ಅಥವಾ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವ ತಾಕತ್ತು ನನಗೆ ಇದೆ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ನಮ್ಮದೇ ಪಕ್ಷದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು ಅವಮಾನಿಸುವುದರ ಜೊತೆಗೆ ಅವರ ಕೆಲಸಗಳಿಗೆ ಅಡ್ಡಿಪಡಿಸುವುದರ ಜೊತೆಗೆ ವಿರೋಧ ಪಕ್ಷಗಳಿಗೆ ನಮ್ಮ ಪಕ್ಷವನ್ನು ಟೀಕಿಸಲು ಅನುವು ಮಾಡಿಕೊಡುತ್ತಿದ್ದಾರೆ.

SendShare2Share
Previous Post

Bigg BOSS 11 ಕೇವಲ ಎರಡು ವಾರಗಳು ಮಾತ್ರ : ಫೈನಲ್ ಗೆ ಹಳ್ಳಿ ಹೈದ ಹನುಮಂತ ಗ್ರ್ಯಾಂಡ್ ಎಂಟ್ರಿ.!

Next Post

ಮಂಗಳೂರಿನಲ್ಲಿ ಇಂಧನ ಭದ್ರತಾ ಶೃಂಗಸಭೆ ಆಯೋಜಿಸಿ; ನನ್ನ ಪೂರ್ಣ ಬೆಂಬಲವಿದೆ. ಸಂಸದ ಕ್ಯಾ. ಚೌಟ ಅವರಿಗೆ ಸಲಹೆ ನೀಡಿದ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ.

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..