ಪುತ್ತೂರು: ಮೂಡಾಯೂರುಗುತ್ತು “ಆರಿಗೋ ” ಪೆರ್ಮಂಡ ಗರೋಡಿಯಲ್ಲಿ ವರ್ಷಂ ಪ್ರತಿ ಜರಗತಕ್ಕ ಶ್ರೀ ಬೈದೆರುಗಳ ನೇಮಹೋತ್ಸವ ಜ. 12 ರಂದು ಜರಗಿತು.
ಜ. 10ಕ್ಕೆ ಗ್ರಾಮ ದೇವಸ್ಥಾನದ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗ ಪೂಜೆ ನಡೆದು, ನಂತರ ಮೂಡಾಯೂರು ಗುತ್ತು ಭಂಡಾರದ ಮನೆಯಿಂದ ಶ್ರೀ ಬೈದೆರುಗಳ ಭಂಡಾರ ತೆಗೆದು ಕೊಂಡು ಆರಿಗೋ ಗರಡಿಗೆ ಬಂದು ಬೈದೇರುಗಳ ತಂಬಿಲ ಸೇವೆ ನಡೆಯಿತು.
ಜ. 11ರಂದು ಗ್ರಾಮ ದೈವ ಸ್ಥಾನದಿಂದ ಭಂಡಾರ ಆರಿಗೋ ಗರಡಿಗೆ ಬಂದು, ಇಷ್ಟ ದೇವತೆ ಮತ್ತು ಎಲ್ನಾಡು ದೈವಗಳ ನೇಮೋತ್ಸವ ನಡೆಯಿತು.
ಜ. 12 ರಂದು ರಾತ್ರಿ ಗಂಟೆ 8.50ಕ್ಕೆ ಬೈದೇರುಗಳು ಗರಡಿ ಇಳಿದು ನೇಮೋತ್ಸವ ಜರಗಿತು. ನಂತರ ಕಾರ್ಯಕ್ರಮದಲ್ಲಿ ಚಿಕ್ಕಮುಡ್ನೂರು ಗ್ರಾಮದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರಗಿತು…
ಈ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ. ಯಂ. ಗೋಪಾಲಕೃಷ್ಣ ಮೂಡಾಯೂರು, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಂ. ತಿಮ್ಮಪ್ಪ ಪೂಜಾರಿ ಮೂಡಾಯೂರು, ಪುತ್ತೂರು ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸುಂದರ ಪೂಜಾರಿ ಬಡಾವು, ಸ್ಯಾಕ್ಸೋ ಫೋನ್ ವಾದಕರಾಗಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ. ವೇಣುಗೋಪಾಲ್ ಪುತ್ತೂರು, ಇವರನ್ನು ಮೂಡಾಯೂರು ಗುತ್ತು ಮನೆತನದ, ಡಾ. ಯಂ. ಅಶೋಕ್ ಪಡಿವಾಳ್, ನರೇಂದ್ರ ಪಡಿವಾಳ್ ಮತ್ತು ಬಿಳಿಯೂರು ಗುತ್ತಿನ ಬಿ. ಧನ್ಯ ಕುಮಾರ್ ರೈ ಇವರು ಶಾಲು, ಹಾರ, ಫಲ ಪುಷ್ಪ ನೀಡಿ ಸನ್ಮಾನಿಸಿದರು. ಸನ್ಮಾನ ಕಾರ್ಯಕ್ರಮದ ಬಳಿಕ ರಾಜ್ಯ ಪ್ರಶಸ್ತಿ ವಿಜೇತ ತಂಡ” ಮುರಳಿ ಬ್ರದರ್ಸ್ ಪುತ್ತೂರು”, ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ರಾತ್ರಿ 1.30ಕ್ಕೆ ಮಾಣಿಬಾಲೆ ಗರಡಿ ಇಳಿದು ನೇಮೋತ್ಸವ ನಡೆಯಿತು.
ರಾತ್ರಿ ಗಂಟೆ 7. 30 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಇದರಲ್ಲಿ ಊರು ಹಾಗೂ ಪರವೂರಿನ ಸಾವಿರಾರು ಭಗವದ್ಭಕ್ತರು ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು. ಈ ಒಂದು ನೇಮೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರುಭಾಗವಹಿಸಿ
ಶ್ರೀ ಬೈದೇರುಗಳ ಗಂಧ ಪ್ರಸಾದಗಳನ್ನು ಸ್ವೀಕರಿಸಿದರು