• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು ಕಂಬಳ: 32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ,ಈ ಬಾರಿ ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ

ಪುತ್ತೂರು ಕಂಬಳ: 32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ,ಈ ಬಾರಿ ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ

February 27, 2025
ಮೆಸ್ಕಾಂ ಖಾಸಗೀಕರಣ ವಿಚಾರ : ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

ಮೆಸ್ಕಾಂ ಖಾಸಗೀಕರಣ ವಿಚಾರ : ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

June 24, 2026
ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

June 24, 2026
ಬಾಲಿವುಡ್‍ನ  ಬಾದ್ ಶಾ, ಕಿಂಗ್ ಖಾನ್  ಶಾರುಖ್ ಖಾನ್  ಜೂನ್ 25ರಂದು ಮಂಗಳೂರಿಗೆ

ಬಾಲಿವುಡ್‍ನ ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿಗೆ

June 24, 2026
ಬಡವರ ಪರ ಧ್ವನಿ ಎತ್ತುತ್ತಿದ್ದ 26 ವರ್ಷದ ಭರತ್ ತಿವಾರಿ ಎನ್‌ಕೌಂಟರ್‌ ಕೇಸ್  – ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್‌

ಬಡವರ ಪರ ಧ್ವನಿ ಎತ್ತುತ್ತಿದ್ದ 26 ವರ್ಷದ ಭರತ್ ತಿವಾರಿ ಎನ್‌ಕೌಂಟರ್‌ ಕೇಸ್ – ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್‌

June 24, 2026
ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ : ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ

ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ : ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ

June 24, 2026
ಹಳ್ಳಿ ಯುವಕರನ್ನೇ ಟಾರ್ಗೆಟ್ ಮಾಡಿದ ಆಟೋ ಡ್ರೈವರ್ ಘಟನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಹಳ್ಳಿ ಯುವಕರನ್ನೇ ಟಾರ್ಗೆಟ್ ಮಾಡಿದ ಆಟೋ ಡ್ರೈವರ್ ಘಟನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

June 23, 2026
ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

June 23, 2026
ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

June 23, 2026
ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

June 23, 2026
ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

June 23, 2026
ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆ  ಸಿ ಎಂ ಡಿ ಕೆ ಶಿವಕುಮಾರ್ ಸೂಚನೆ

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆ ಸಿ ಎಂ ಡಿ ಕೆ ಶಿವಕುಮಾರ್ ಸೂಚನೆ

June 20, 2026
ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

June 20, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, June 25, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮೆಸ್ಕಾಂ ಖಾಸಗೀಕರಣ ವಿಚಾರ : ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

    ಮೆಸ್ಕಾಂ ಖಾಸಗೀಕರಣ ವಿಚಾರ : ಸಾರ್ವಜನಿಕರ ಕರೆಗಳಿಗೆ ಸ್ಪಂದಿಸಿ, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ- ಉತ್ತಮ ಸೇವೆ ನೀಡಿ ಖಾಸಗೀಕರಣದ ಪ್ರಶ್ನೆಯೇ ಬರುವುದಿಲ್ಲ -ಅಶೋಕ್ ಕುಮಾರ್ ರೈ

    ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

    ನೆಲ್ಯಾಡಿ: ಬೈಕ್‌ಗಳ ನಡುವೆ ಅಪಘಾತ ಓರ್ವ ಮೃತ್ಯು, ಇನ್ನೋರ್ವ ಗಂಭೀರ!!

    ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

    ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆನೂತನ ಪದಾಧಿಕಾರಿಗಳ ಆಯ್ಕೆ

    ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

    ಅರುಣ್ ಕುಮಾರ್ ಪುತ್ತಿಲರಿಗೆ ಕರ್ನಾಟಕ ಟಿವಿಯ “ಕರ್ನಾಟಕ ಜನ ನಾಯಕ“ ಲೀಡರ್ ಪ್ರಶಸ್ತಿ ಪ್ರದಾನ

    ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

    ಪುತ್ತೂರು:ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ.26 ಮತ್ತು 27ಕ್ಕೆ ಬೃಹತ್ ಉದ್ಯೋಗ ಮೇಳ

    ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

    ಕೆಮ್ಮಾರದಲ್ಲಿ ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಸಂಸ್ಥೆಯ ಉಜ್ಜೀವನ ಲೋಕಾರ್ಪಣೆ

    ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

    ಯುವ ಜನತೆಯಲ್ಲಿ ಜಾಗತಿಕ ಜೀವನಶೈಲಿಯ ಆಕರ್ಷಣೆ-ಉದ್ಯೋಗದ ಅವಕಾಶಗಳು

    ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮ ದ ರಾಯಭಾರಿಯನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ

    ರಿಷಬ್ ಶೆಟ್ಟಿಯನ್ನು ಕರಾವಳಿ ಪ್ರವಾಸೋದ್ಯಮ ದ ರಾಯಭಾರಿಯನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ

    ಕಬಕ–ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ 4.4 ಕೋಟಿ ವೆಚ್ಚದಲ್ಲಿ ಕಾಮಗಾರಿ : ಸಂಸದ ಬ್ರಿಜೇಶ್ ಚೌಟ

    ಕಬಕ–ಪುತ್ತೂರು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ 4.4 ಕೋಟಿ ವೆಚ್ಚದಲ್ಲಿ ಕಾಮಗಾರಿ : ಸಂಸದ ಬ್ರಿಜೇಶ್ ಚೌಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಕ್ರೀಡೆ

ಪುತ್ತೂರು ಕಂಬಳ: 32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ,ಈ ಬಾರಿ ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ

by ಪ್ರಜಾಧ್ವನಿ ನ್ಯೂಸ್
February 27, 2025
in ಕ್ರೀಡೆ, ಪುತ್ತೂರು
0
ಪುತ್ತೂರು ಕಂಬಳ: 32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ,ಈ ಬಾರಿ ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ
44
SHARES
126
VIEWS
ShareShareShare

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ ಆಶೀರ್ವಾದಗಳಿಂದ, ಪದ್ಮವಿಭೂಷಣ ರಾಜರ್ಷಿ ಡಾ। ವೀರೇಂದ್ರ ಹೆಗ್ಗಡೆಯವರು (ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ) ಇವರ ಶುಭಾಶೀರ್ವಾದಗಳೊಂದಿಗೆ, ಸನ್ಮಾನ್ಯ ವಿನಯ ಕುಮಾರ್ ಸೊರಕೆ ಮಾಜಿ ನಗರಾಭಿವೃದ್ಧಿ ಸಚಿವರು ಕರ್ನಾಟಕ ಸರಕಾರ ಇವರ ಗೌರವಾಧ್ಯಕ್ಷತೆಯಲ್ಲಿ, ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕೆ. ಎಸ್. ಇವರ ಗೌರವ ಸಂಚಾಲಕತ್ವದಲ್ಲಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ಮಾಜಿ ಶಾಸಕರು ಇವರ ಮಾರ್ಗದರ್ಶನ ದಲ್ಲಿ ಊರ ಪರವೂರ ಸರ್ವ ಕಂಬಳಾಭಿಮಾನಿಗಳ ಪ್ರೋತ್ಸಾಹದೊಂದಿಗೆ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳವು ದಿನಾಂಕ: 01.03.2025ನೇ ಶನಿವಾರ ಬೆಳಿಗ್ಗೆ 10.15ರ ಶುಭಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ದೈವಾಂಶ ಸಂಭೂತರು. ಪುಣ್ಯ ಪುರುಷರು, ಆರಾಧ್ಯ ಮೂರ್ತಿಗಳು ಆಗಿರುವಂತಹ ಕೋಟಿ ಚೆನ್ನಯರ ಹೆಸರಿನ ಜೋಡು ಕರೆಯಲ್ಲಿ ಸಂಪ್ರದಾಯಬದ್ಧವಾಗಿ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ, ಶಾಸ್ತೋಕ್ತವಾಗಿ ಉದ್ಘಾಟನೆಗೊಳ್ಳಲಿದೆ.

ಕರಾವಳಿ ಕರ್ನಾಟಕದ ರೈತಾಪಿ ವರ್ಗದ ಅವಿಭಾಜ್ಯ ಅಂಗ ಕಂಬಳ. ಸುಮಾರು 800 ವರ್ಷಗಳಿಂದಲೂ ಕಂಬಳ ಎನ್ನುವ ಕೋಣಗಳ ಓಟದ ಕ್ರೀಡೆಯು ಮೂಲತಃ ಒಂದು ಜಾನಪದ ಕಲೆ. ಹಳ್ಳಿಯ ಭೂ ಮಾಲೀಕ ಮತ್ತು ದುಡಿಯುವ ರೈತರ ನಡುವಿನ ಸಾಂಸ್ಕೃತಿಕ ಬೆಸುಗೆಯಲ್ಲಿ ಸಾಮರಸ್ಯಕ್ಕೆ ರಾಜಾಶ್ರಯ ನೀಡಿ ಪ್ರೋತ್ಸಾಹಿಸಿದ ರಾಜ ಮನೆತನ ನಮ್ಮ ಜಿಲ್ಲೆಯಲ್ಲಿದೆ. ದೇವರ ಕಂಬಳ, ರಾಜರ ಕಂಬಳ, ಗುತ್ತು, ಭಾವಗಳ ಕಂಬಳ ನವೀನ ರೂಪ ಪಡೆದು ಸಾರ್ವಜನಿಕ ಕಂಬಳವಾಗಿ ರೂಪುಗೊಳ್ಳುತ್ತಿದೆ.

ಅಂದು (1993) ಕೀರ್ತಿಶೇಷ ಜಯಂತ ರೈಯವರು ಅಂದಿನ ಶಾಸಕರಾದ ಮಾಜಿ ನಗರಾಭಿವೃದ್ಧಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಮತ್ತು ಸರ್ವ ಕಂಬಳಾಭಿಮಾನಿಗಳ ಸಹಕಾರ ಪಡೆದು ಪ್ರಾರಂಭಿಸಿದ ಈ ಕಂಬಳವು 31 ವರ್ಷಗಳನ್ನು ಪೂರೈಸಿ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಎನ್ನುವುದು ಸಂತೋಷದ ವಿಚಾರ. ಈ ಮೊದಲು ಕೂಡ ದೇವರಮಾರು ಗದ್ದೆಯಲ್ಲಿ ಕಂಬಳ ನಡೆಯುತ್ತಿತ್ತು ಎಂಬುದನ್ನು ಇತಿಹಾಸದಿಂದ ಮತ್ತು ಹಿರಿಯರಿಂದ ತಿಳಿದುಕೊಂಡಿದ್ದೇವೆ.

ಕಂಬಳದ ಸಭಾ ಕಾರ್ಯಕ್ರಮವು ಸಂಜೆ ಗಂಟೆ 6.00ರಿಂದ ಕೀರ್ತಿಶೇಷ ಜಯಂತ ರೈ ವೇದಿಕೆಯಲ್ಲಿ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ಇವರು ವಹಿಸಲಿರುವರು. ಕಾರ್ಯಕ್ರಮದಲ್ಲಿ ಗೌರವಾನ್ವಿತರಾದ ಯು. ಟಿ. ಖಾದ‌ರ್ ವಿಧಾನ ಸಭಾಧ್ಯಕ್ಷರು ಕರ್ನಾಟಕ ಸರಕಾರ ಇವರ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಡಾ| ಪರಮೇಶ್ವರ್ ಗೃಹ ಸಚಿವರು. ಶ್ರೀ ದಿನೇಶ್ ಗುಂಡೂರಾವ್ ಜಿಲ್ಲಾ ಉಸ್ತುವಾರಿ ಸಚಿವರು ದಕ್ಷಿಣಕನ್ನಡ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು. ಶ್ರೀ ಸಂತೋಷ್ ಲಾಡ್ ಕಾರ್ಮಿಕ ಸಚಿವರು, ಕರ್ನಾಟಕ ಸರಕಾರ. ಕ್ಯಾ। ಬ್ರಿಜೇಶ್ ಚೌಟ ಸಂಸದರು ಮಂಗಳೂರು, ಶ್ರೀ ಪ್ರಕಾಶ್ ಶೆಟ್ಟಿ ಚೇರ್‌ಮನ್ ಎಂ.ಆರ್.ಜಿ. ಗ್ರೂಪ್ಸ್ ಬೆಂಗಳೂರು, ಶ್ರೀ ರವಿ ಗಾಣಿಗ ಶಾಸಕರು ಮಂಡ್ಯ (ವಿಧಾನ ಪರಿಷತ್) ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಶ್ರೀ ಮಂಜುನಾಥ್ ಭಂಡಾರಿ ಸದಸ್ಯರು ವಿಧಾನ ಪರಿಷತ್, ಶ್ರೀ ರಾಜೇಶ್ ನಾಯ್ಡ್ ಉಳಿಪಾಡಿಗುತ್ತು, ಶಾಸಕರು ಬಂಟ್ವಾಳ, ಶ್ರೀ ಬಿ. ‘ರಮಾನಾಥ ರೈ ಮಾಜಿ ಸಚಿವರು, ಶ್ರೀ ಹರೀಶ್ ಪೂಂಜ ಶಾಸಕರು ಬೆಳ್ತಂಗಡಿ, ಶ್ರೀ ನಳಿನ್ ಕುಮಾರ್ ಕಟೀಲ್ ಮಾಜಿ ಸಂಸದರು ಮಂಗಳೂರು, ಕುಮಾರಿ ಭಾಗೀರಥಿ ಮುರುಳ್ಯ ಶಾಸಕರು ಸುಳ್ಯ, ಶ್ರೀ ಐವನ್ ಡಿಸೋಜ. ಸದಸ್ಯರು ವಿಧಾನ ಪರಿಷತ್, ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಸದಸ್ಯರು, ಶ್ರೀ ಅಭಯಚಂದ್ರ ಜೈನ್ ಮಾಜಿ ಸಚಿವರು ಮುಂತಾದ ಭಾಗವಹಿಸಲಿರುವರು. ಗಣ್ಯಾತಿಗಣ್ಯರು

ಸಭಾ ಕಾರ್ಯಕ್ರಮದಲ್ಲಿ ಅನೇಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನವಿದ್ದು ಡಾ| ಅಗರಿ ನವೀನ್ ಭಂಡಾರಿ ಮಾಜಿ ನಿರ್ದೇಶಕರು, ಆರ್.ಬಿ.ಐ. ಉತ್ತರ ವಲಯ, ಶ್ರೀ ಸುರೇಶ್ ಭಟ್ ಬಲ್ನಾಡು. ಕೃಷಿ ತಜ್ಞರು. ರೆ| ಫಾ| ವಿಜಯ ಹಾರ್ವಿನ್ (ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರ). ಶ್ರೀ ಹರಿಪ್ರಸಾದ್ ರೈ ಸಂಸ್ಥಾಪಕರು ಹೆಚ್. ಪಿ.ಆರ್. ನರ್ಸಿಂಗ್ ಕಾಲೇಜು. ಸಾಲೆತ್ತೂರು ಪಂಜರಕೋಡಿ ಮಹಮ್ಮದ್ ಕುಂಞ ‘ (ಕಂಬಳ ಕ್ಷೇತ್ರ), ಬಾಳೆಪುಣಿ ಸಂಕ ಇದು ಕುಂಜಿ ಬ್ಯಾರಿ (ಕಂಬಳ ಕ್ಷೇತ್ರ) ಶ್ರೀ ವಿನ್ಸೆಂಟ್ ಫೆರ್ನಾಂಡಿಸ್ ಸನ್ಮಾನ ನಡೆಯಲಿದೆ.

ವಿನೂತನವಾಗಿ ಆಧುನಿಕ
ತಂತ್ರಜ್ಞಾನದೊಂದಿಗೆ ‘ಲೇಸರ್ ಫಿನಿಶಿಂಗ್’ ವ್ಯವಸ್ಥೆ ಶ್ರೀಘ್ರು ತೀರ್ಪು ನೀಡುವುದಕ್ಕಾಗಿ ಮಾಡಲಾಗುತ್ತಿದೆ.

ashwinistudioputtur

ಜಾಹೀರಾತು

ಈ ಬಾರಿ ವಿಶೇಷವಾಗಿ “ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ” ನಡೆಯಲಿದೆ.

Muliya

ಜಾಹೀರಾತು

ಕಂಬಳಕ್ಕೆ ಆರು ವಿಭಾಗಗಳ ಕೋಣಗಳು ಭಾಗವಹಿಸಲಿದ್ದು, ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ. ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿದ್ದು, ಹಿರಿಯ ವಿಭಾಗದ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ (16ಗ್ರಾಂ) ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ (8 ಗ್ರಾಂ) ಬಹುಮಾನ ಹಾಗೂ ಕಿರಿಯ ವಿಭಾಗಕ್ಕೆ ಪ್ರಥಮ 1 ಪವನ್ ಹಾಗೂ ದ್ವಿತೀಯ ½ ಪವನ್ ಚಿನ್ನದ ಬಹುಮಾನ ವಿಜೇತ ಕೋಣಗಳ ಓಟಗಾರರಿಗೂ ಪ್ರೋತ್ಸಾಹಕ ಬಹುಮಾನವಿದೆ. ಅಲ್ಲದೆ ವಿಜೇತ ಕೋಣಗಳ ಮಾಲಿಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿಚೆನ್ನಯ ಟ್ರೋಫಿ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಕೋಣಗಳಿಗೆ ಸುಸಜ್ಜಿತ ಬ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ ಮಾಡಿರುತ್ತೇವೆ. ಅಲ್ಲದೇ ಹೊನಲು ಬೆಳಕಿನ ವ್ಯವಸ್ಥೆ, ಸುಸಜ್ಜಿತ ಪ್ರೇಕ್ಷಕರ ಚಪ್ಪರ, ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ, ಆಕರ್ಷಕ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ. ಉತ್ತಮ ಕರೆ ನಿರ್ಮಾಣ, ಕರೆಗೆ ಶುದ್ಧ ನೀರಿನ ವ್ಯವಸ್ಥೆ. ಸುಸಜ್ಜಿತ ಸ್ಟಾಲ್‌ಗಳು, ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ ವರ್ಷಕ್ಕೊಂದು ಹೊಸತನದ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಠ ಕಂಬಳ ಎಂಬ ಹೆಸರನ್ನು ಪಡೆದಿದ್ದು, ಜಾತಿ, ಧರ್ಮಗಳ ಬೇಧವಿಲ್ಲದೆ ಲಕ್ಷಾಂತರ ಜನರು ಭಾಗವಹಿಸುವ ಏಕೈಕ ಕ್ರೀಡೆ ಪುತ್ತೂರು ಕಂಬಳ.

ಕಂಬಳವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅವಿರತ ಶ್ರಮವಹಿಸಿ ದುಡಿಯುವ ನೂರಾರು ಕೆಂಪು ಮುಂಡಾಸಿನ ಸ್ವಯಂ ಸೇವಕರ ತಂಡವಿದ್ದು. ಕೋಟಿ-ಚೆನ್ನಯ ಜೋಡುಕರೆ ಸಮಿತಿಯ ಸದಸ್ಯರ ಅಪಾರ ಸೇವೆಯು ಕಂಬಳ ನಡೆಯಲು ಸಹಕಾರಿಯಾಗಿದೆ. ಅಲ್ಲದೇ ತೀರ್ಪುಗಾರ ಮಂಡಳಿಯವರ ಅಪಾರ ಅನುಭವ. ಅನೇಕ ಮಾರ್ಗದರ್ಶಕರ ಹಿತನುಡಿ, ಕಂಬಳದ ಅಭಿಮಾನಿಗಳ ಸರ್ವ ಪ್ರೋತ್ಸಾಹದೊಂದಿಗೆ ಕಂಬಳ ನಡೆದುಕೊಂಡು ಬರುತ್ತಿದೆ.

SendShare18Share
Previous Post

35 ರ ಮಹಿಳೆಯೋರ್ವರು 14 ರ ಬಾಲಕನೊಂದಿಗೆ ಪರಾರಿ – ಮಹಿಳೆ ವಿರುದ್ಧ ಅಪಹರಣ ಪ್ರಕರಣ ದಾಖಲು

Next Post

ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಉಪ್ಪಿನಂಗಡಿ ಶಿವರಾತ್ರಿ ಪ್ರಯುಕ್ತ :SPYSS ಸಾಮೂಹಿಕ ಯೋಗ ಶಿವನಮಸ್ಕಾರ ಹಾಗೂ ಶಿವಾಷ್ಟೋತ್ತರ ಶತನಾಮಾವಳಿ ಪಠಣ ಹಾಗೂ ಅರ್ಚನೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..