ಲಾಯಿಲ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷದ ಸಂಘಟನಾ ದೃಷ್ಟಿಯಿಂದ ಸೆಪ್ಟೆಂಬರ್ 14 ರಂದು ಲಾಯಿಲ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ ಲಾಯಿಲ ಸಂಗಮ ಸಭಾಭವನದಲ್ಲಿ ನಡೆಯಿತು.ಪಕ್ಷದ ಹಿರಿಯ ಕಾರ್ಯಕರ್ತರಾದ ಪುಟ್ಟಣ್ಣ ಕುಂಬಾರ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ರವರು ಉದ್ಘಾಟನಾ ಭಾಷಣ ಜೊತೆಗೆ ಪಕ್ಷ ಸಂಘಟನೆ ಮತ್ತು ಕಾರ್ಯಾಚಟುವಟಿಕೆಯ ಕುರಿತು ವಿಸ್ಕೃತವಾಗಿ ಸಮಾಲೋಚನೆ ನಡೆಸಿದರು. ವೇದಿಕೆಯಲ್ಲಿ ಅಭ್ಯಾಸ ವರ್ಗದ ಪ್ರಭಾರಿಗಳಾದ ಜಯಂತ್ ಗೌಡ ಗುರಿಪಳ್ಳ ಉಪಸ್ಥಿತರಿದ್ದರು.
ಪಕ್ಷದ ಪ್ರಮುಖರಾದ ನಂದಕುಮಾರ್, ಮಹಾಬಲ ಗೌಡ, ಮೋಹನ್ ಅಂಡಿಂಜೆ ಅಭ್ಯಾಸ ವರ್ಗದ ಬೈಠಕ್ ತೆಗೆದುಕೊಂಡರು.
ಸಮಾರೋಪ ಭಾಷಣ ವನ್ನು ಶಾಸಕರಾದ ಹರೀಶ್ ಪೂಂಜಾರವರು ನೆರವೇರಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರಂಕಿ, ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ಎಂ. ಕೆ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ,ಶಕ್ತಿ ಕೇಂದ್ರ ಅಧ್ಯಕ್ಷರಾದ ಗಣೇಶ್ ಕಣ್ಣಾಜೆ ಉಪಸ್ಥಿತರಿದ್ದರು,
ಕಾರ್ಯಕ್ರಮದಲ್ಲಿ ತಾಲೂಕು ಎ. ಸಿ ಮೋರ್ಚಾದ ಅಧ್ಯಕ್ಷರಾದ ಈಶ್ವರ ಭೈರ, ಮಂಡಲದ ಕಾರ್ಯದರ್ಶಿಗಳಾದ ಗಿರೀಶ್ ಡೋಂಗ್ರೆ ಹಾಗೂ ಆಶಾ ಸಲ್ದಾನ, ಯುವ ಮೋರ್ಚಾದ ಉಪಾಧ್ಯಕ್ಷರಾದ ಗಣೇಶ್ ಲಾಯಿಲ ಹಾಗೂ ಪಂಚಾಯತ್ ಸದಸ್ಯರುಗಳು, ಮಿಲ್ಕ್ ಸೊಸೈಟಿ ನಿರ್ದೇಶಕರುಗಳು,ಸಿ. ಎ ಬ್ಯಾಂಕ್ ನಿರ್ದೇಶಕರುಗಳು,ಬೂತ್ ಪದಾಧಿಕಾರಿಗಳು, ಪಕ್ಷದ ಅನ್ಯನ್ಯ ಜವಾಬ್ದಾರಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಗೀತೆ ಯನ್ನು ಸುಧಾಕರ್ ಬಿ.ಎಲ್ ರವರು ಹಾಡಿದರು.ಮಂಡಲ ಬೂತ್ ಅಧ್ಯಕ್ಷರಾದ ಮಹೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
ಸುಮಾರು 345 ಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.