ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಪಿ.ಎಂ. ಶ್ರೀ. ಪ್ರೌಢಶಾಲೆ ಬಂಟ್ವಾಳ ನೇತೃತ್ವದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಾಂಗ್ಲಾಯ್ ದರ್ಬೆ ಪುತ್ತೂರು ಇಲ್ಲಿನ ಬಾಲಕಿಯರ ತಂಡವು ಪ್ರಥಮ ಸ್ಥಾನದೊಂದಿಗೆ ಸತತ 5 ನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ಬರೆದಿದೆ.
ಜುಏನಾ ಡ್ಯಾಝಲ್ ಕುಟಿನ್ಹಾ, ಸನ್ನಿದಿ, ಜೆನಿಟ ಸಿಂಧು ಪಸನ್ನ, ಹಾರ್ದಿಕ ಪಿ, ಘನಶ್ರೀ,ಆಯಿಷಾತ್ ಶಹೀಮ, ಫಾತಿಮತ್ ಅಫ್ರಾ, ದೀಕ್ಷಿತಾ, ಸುಶ್ರಾವ್ಯ, ದಿವ್ಯಾ, ಜ್ಯೋತಿ, ಸಿಂಚನಾ ಕಬಡ್ಡಿ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ವಂದನೀಯ ಭಗಿನಿ ಅನಿತಾ ಟ್ರೆಸ್ಸಿ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.ಇದೆ ತಿಂಗಳ 27 ಮತ್ತು 28 ರಂದು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ ದಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾಟ ನಡೆಯಲಿದೆ.