ಈಶ್ವರಮಂಗಳ: 2026ರ ಏ.9ರಿಂದ ಮೊದಲ್ಗೊಂಡು ಏ.12ರವರೆಗೆ ನಡೆಯಲಿರುವ ಶ್ರೀ ಕ್ಷೇತ್ರ ಹನುಮಗಿರಿಯ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸಮಾಲೋಚನಾ ಸಭೆ ಮತ್ತು ವಿವಿಧ ಸಮಿತಿ ರಚನೆಯು ಅ.26ರಂದು ಬೆಳಿಗ್ಗೆ ಹನುಮಗಿರಿಯ ವೈದೇಹಿ ಸಭಾಭವನದಲ್ಲಿ ನಡೆಯಿತು.
ಸಮಾಲೋಚನಾ ಸಭೆಯಲ್ಲಿ ಮಾರ್ಗದರ್ಶನ ನೀಡಿದ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಮಾತನಾಡಿ ಆಧ್ಯಾತ್ಮಕತೆಯ ಶಕ್ತಿಕೇಂದ್ರವಾಗಿರುವ ಶ್ರೀಕ್ಷೇತ್ರ ಹನುಮಗಿರಿಯ ಬ್ರಹ್ಮಕಲಶೋತ್ಸವದಲ್ಲಿ ನಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸುವುದೇ ಇಂದಿನ ಸಭೆಯಾಗಿದೆ. ಹಿಂದೂ ಸಮಾಜದ ಒಳಿತಿಗಾಗಿ ನಮ್ಮ ಗುರಿ ಅಚಲವಾಗಿರಬೇಕು. ಎಲ್ಲಿ ಧರ್ಮ ಕಾರ್ಯ ನಡೆಯುತ್ತದೆಯೋ ಅಲ್ಲಿ ಭಕ್ತರಾದ ನಾವು ಸಮರ್ಪಣಾ ಭಾವದಿಂದ ಸೇರಿಕೊಂಡು ಜವಾಬ್ದಾರಿ ನಿರ್ವಹಿಸುವುದೇ ನಮ್ಮ ಯಶಸ್ಸಿನ ದಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಹನುಮಗಿರಿಯ ಬ್ರಹ್ಮಕಲಶೋತ್ಸವದಲ್ಲೂ ನಾವೆಲ್ಲರೂ ಸಂಘಟಿತರಾಗಿ ಜವಾಬ್ದಾರಿಯನ್ನು ದೇವರ ಕಾರ್ಯವೆಂದು ಭಾವಿಸಿ ಕೆಲಸ ಮಾಡಬೇಕು ಆ ಮೂಲಕ ನಮ್ಮ ದೇಶಕ್ಕೆ, ಸಮಾಜಕ್ಕೆ ಇನ್ನಷ್ಟು ಶಕ್ತಿ ನೀಡುವ ಕಾರ್ಯಕ್ರಮವಾಗಿ ಮೂಡಿ ಬರಲಿ ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್‌ರವರು ಮಾತನಾಡಿ ಎಲ್ಲರ ಅಭಿಪ್ರಾಯ ಸಂಗ್ರಹವೇ ಇವತ್ತಿನ ಸಭೆಯಾಗಿದೆ. ಭಾರತ ಮಾತೆಯ ಮಂದಿರ ಇರುವ ದೇಶದ ಮೊದಲ ಕ್ಷೇತ್ರವೇ ಹನುಮಗಿರಿಯಾಗಿದ್ದು, ಆ ನಿಟ್ಟಿನಲ್ಲಿ ಹನುಮಗಿರಿಯ ಈ ಬಾರಿಯ ಬ್ರಹ್ಮಕಲಶೋತ್ಸವವನ್ನು ಕೂಡ ದೇಶ ಮಟ್ಟದಲ್ಲಿ ಪ್ರಚಾರ ಆಗುವಂತೆ, ಸಮಾಜಕ್ಕೆ ಇನ್ನಷ್ಟು ಹೊಸ ಚೈತನ್ಯ, ಶಕ್ತಿಯನ್ನು ನೀಡುವಂತಹ ಕಾರ್ಯಕ್ರಮವಾಗಿ ನಡೆಯಲಿದೆ. ಅಸ್ಪ್ರಶ್ಯತೆ ಇಲ್ಲದ ಶ್ರೀರಾಮನು ಶಬರಿಯನ್ನು ಅಪ್ಪಿದ್ದಾನೆ, ವಿಭಿಷಣನನ್ನು ಒಪ್ಪಿದ್ದಾನೆ, ಹಾಗಾಗಿ ಶ್ರೀರಾಮನ ಬ್ರಹ್ಮಕಲಶೋತ್ಸವವು ಅಸ್ಪ್ರಶ್ಯತೆಯನ್ನು ಮೆಟ್ಟಿನಿಂತು ಸಾಮರಸ್ಯ, ಸಮಾನತೆಯೊಂದಿಗೆ ಹಿಂದೂ ಸಮಾಜದಲ್ಲಿ ಐಕ್ಯತೆಯನ್ನು ಕಾಣಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಉಪಸ್ಥಿತರಿದ್ದರು. ಸಮಾಲೋಚನಾ ಸಭೆಯಲ್ಲಿ ನೆರೆದಿದ್ದವರ ಸಲಹೆ, ಅಭಿಪ್ರಾಯಗಳಿಗೆ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಮುರಳಿಕೃಷ್ಣ ಹಸಂತಡ್ಕ, ಕಾವು ಹೇಮನಾಥ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಶ್ರೀಕಾಂತ್ ಕಾಸರಗೋಡು, ಪ್ರವೀಣ್ ಸರಳಾಯ, ಆರ್.ಸಿ ನಾರಾಯಣ, ಗಿರಿಶಂಕರ ಸುಲಾಯ, ಶ್ರೀರಾಂ ಪಕ್ಕಳ ಸೇರಿದಂತೆ ಅನೇಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿದರು. ಸಭೆಯಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ, ರಾಧಾಕೃಷ್ಣ ಬೋರ್ಕರ್, ಅರುಣ್ ಕುಮಾರ್ ಪುತ್ತಿಲ, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈ ಬಳಜ್ಜ, ಕಾವು ಹೇಮನಾಥ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಸಹಜ್ ರೈ ಬಳಜ್ಜ, ಸಂತೋಷ್ ರೈ ಇಳಂತಾಜೆ, ಎ.ಕೆ ಜಯರಾಮ ರೈ, ಆರ್.ಸಿ ನಾರಾಯಣ, ಜೀವಂಧರ್ ಜೈನ್, ಶ್ರೀಕಾಂತ್ ಕಾಸರಗೋಡು, ಸುಧಾಮ ಕಾಸರಗೋಡು, ಪ್ರವೀಣ್ ಸರಳಾಯ, ರಂಗನಾಥ ರೈ ಗುತ್ತು, ಮುರಳಿಕೃಷ್ಣ ಹಸಂತ್ತಡ್ಕ ಹಾಗೂ ದ.ಕ ಮತ್ತು ಕಾಸರಗೋಡು ಜಿಲ್ಲೆಯ ಅನೇಕ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರುಗಳು, ವಿವಿಧ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ಗ್ರಾಮಸ್ಥರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಶ್ರೀಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ ಸ್ವಾಗತಿಸಿದರು. ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಶ್ರೀಕ್ಷೇತ್ರ ಹನುಮಗಿರಿಯ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಸಮಾಲೋಚನಾ ಸಭೆಯಲ್ಲಿ 7 ವಿವಿಧ ಸಮಿತಿಗಳನ್ನು ರಚಿಸಿ ಘೋಷಣೆ ಮಾಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲುರವರು ವಿವಿಧ ಸಮಿತಿಗಳ ಘೋಷಣೆ ಮಾಡಿದರು. ಪ್ರಮುಖವಾಗಿ ಬ್ರಹ್ಮಕಲಶೋತ್ಸವ ಸಮಿತಿ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ, ಶ್ರೀರಾಮ ಹನುಮಾ ಜ್ಯೋತಿ ರಥಯಾತ್ರೆ ಸಮಿತಿ, ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಮತ್ತು ಭಜನೆ ಸಮಿತಿ, ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಸಮಿತಿ, ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಗ್ರಾಮ ಸಮಿತಿ, ಕಾಮಗಾರಿ/ನಿರ್ಮಾಣ ಸಮಿತಿಗಳ ಘೋಷಣೆ ಮಾಡಲಾಯಿತು. ಬಳಿಕ ಸಮಿತಿಯ ಎಲ್ಲಾ ಪ್ರಮುಖರಿಗೆ ಹೂ ನೀಡಿ, ಸಮಿತಿಯ ಕಡತ ನೀಡಿ ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈ ಬಳಜ್ಜ, ಎಸ್.ಎನ್ ಮನ್ಮಥ, ವಿಶ್ವೇಶ್ವರ ಭಟ್ ಬಂಗಾರಡ್ಕ, ಜಯಂತ ನಡುಬೈಲು, ಅರುಣ್ ಕುಮಾರ್ ಪುತ್ತಿಲ, ಕಾವು ಹೇಮನಾಥ ಶೆಟ್ಟಿ, ವಾಸು ಪೂಜಾರಿ ಗುಂಡ್ಯಡ್ಕ, ಡಾ. ಸುರೇಶ್ ಪುತ್ತೂರಾಯ, ಶ್ರೀಕಾಂತ್ ಕಾಸರಗೋಡು, ಚನಿಲ ತಿಮ್ಮಪ್ಪ ಶೆಟ್ಟಿ, ರವಿಕಿರಣ ಶೆಟ್ಟಿ ಬೆದ್ರಾಡಿ, ಬೂಡಿಯಾರು ರಾಧಾಕೃಷ್ಣ ರೈ, ಕೇಶವ ಮುಳಿಯ ಸುಳ್ಯ, ಜೀವಂಧರ್ ಜೈನ್, ಹರೀಶ್ ಕಂಜಿಪಿಲಿ, ಭಾಮಿ ಅಶೋಕ್ ಶೆಣೈ, ಪ್ರಧಾನ ಕಾರ್ಯದರ್ಶಿಗಳಾಗಿ ಸುಬ್ಬಪ್ಪ ಪಟ್ಟೆ, ಗಿರಿಧರ ಶೆಟ್ಟಿ, ರಾಜೇಶ್ ಬನ್ನೂರು, ಸವಿತಾ ರೈ ನೆಲ್ಲಿತ್ತಡ್ಕ, ಪೂರ್ಣಚಂದ್ರ ನೆಲ್ಲಿತ್ತಡ್ಕ, ಆರ್.ಸಿ ನಾರಾಯಣ, ಕಾರ್ಯದರ್ಶಿಗಳಾಗಿ ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ದೀಪಕ್ ಮುಂಡ್ಯ, ಮಹಾಲಿಂಗ ಪಂಚೋಡಿ, ಚಿನ್ಮಯ್ ರೈ, ಪ್ರಕಾಶ್ ಕೈಕಾರ, ಚಂದ್ರಶೇಖರ ಆಳ್ವ, ಲಿಂಗಪ್ಪ ಗೌಡ, ಶಿವರಾಮ ಭಟ್ ಬೀರ್ಣಕಜೆ, ಸೌಮ್ಯ ಗಜಾನನ, ಪ್ರಶಾಂತಿ ರೈ ಕುತ್ಯಾಳ, ಶ್ರೀನಿವಾಸ ಭಟ್ ಚಂದುಕೂಡ್ಲುರವರ ಹೆಸರನ್ನು ಘೋಷಿಸಲಾಯಿತು.
ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ. ರವೀಶ್ ಪಡುಮಲೆ, ಉಪಾಧ್ಯಕ್ಷರಾಗಿ ಸೀತಾರಾಮ ರೈ ಗುತ್ತು, ಲೋಕಯ್ಯ ಮೂಲ್ಯ, ಸಹಜ್ ರೈ ಬಳಜ್ಜ, ಪ್ರಶಾಂತ್ ಸಿಝ್ಲರ್, ರಂಜಿತ್ ಕಾಂಚನ್, ಹರೀಶ್ ಕುತ್ತಾರ್, ಗೋಪಾಲಕೃಷ್ಣ ಭಟ್ ದ್ವಾರಕಾ, ಪ್ರಧಾನ ಕಾರ್ಯದರ್ಶಿಗಳಾಗಿ ಮುರಳಿಕೃಷ್ಣ ಹಸಂತಡ್ಕ, ಸುಮಲತಾ ಜಗದೀಶರವರ ಹೆಸರು ಘೋಷಣೆ ಮಾಡಲಾಯಿತು. ಶ್ರೀರಾಮ ಹನುಮಾ ಜ್ಯೋತಿ ರಥಯಾತ್ರೆ ಸಮಿತಿ: ಶ್ರೀರಾಮ ಹನುಮಾ ಜ್ಯೋತಿ ರಥಯಾತ್ರೆ ಸಮಿತಿಯ ಅಧ್ಯಕ್ಷರಾಗಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಕಾರ್ಯದರ್ಶಿಯಾಗಿ ಸಹಜ್ ರೈ ಬಳಜ್ಜರವರ ಹೆಸರು ಘೋಷಣೆ ಮಾಡಲಾಯಿತು.























