ಬೆಳಾಲು : ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 15 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇದರ ವ್ಯವಸ್ಥಾಪನ ಸಮಿತಿಯ ಗೌರವ ಸಲಹೆಗಾರರಾದ ಶ್ರೀ ಉದಿತ್ ಕುಮಾರ್ ಜೈನ್ ಇವರು ದೀಪ ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಉದ್ಘಾಟನಾ ಸಮಾರಂಭದ
ಅಧ್ಯಕ್ಷತೆಯನ್ನು ಅನಂತೇಶ್ವರ ಫ್ರೆಂಡ್ಸ್ ಇದರ ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ ಪೂಜಾರಿ ಬಾಯ್ತರಡ್ಡ ವಹಿಸಿದ್ದರು.ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಗೌಡ,ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸುನೀತಾ ಸೋಮನಾಥ್ ನಾಯ್ಕ ಸೀನಿಯರ್ ಸೂಪರ್ವೈಸರ್ ಪ್ರಧಾನ ಅಂಚೆ ಕಛೇರಿ ಮಂಗಳೂರು,ಶ್ರೀ ಪ್ರಜೇಶ್ ಕೆ ಜೆ ಕಾರ್ಯದರ್ಶಿ ತುಳುನಾಡ ತುಳುವೆರ್(ರಿ). ಸುರತ್ಕಲ್ ಮಂಗಳೂರು, ಧಾರ್ಮಿಕ ಮುಖಂಡರಾದ ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾಶ್ರೀನಿವಾಸ್ ಗೌಡ,ದೇವಸ್ಥಾನದ ಅರ್ಚಕರಾದ ಶ್ರೀ ಸಂಪತ್ ಕುಮಾರ್, ಅನಂತೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ನಾಯ್ಕ ಕುದ್ದoಟೆ,ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಪೋಸೊಟ್ಟು,ಅನಂತೇಶ್ವರ ಫ್ರೆಂಡ್ಸ್ ಇದರ ಕಾರ್ಯದರ್ಶಿಯಾದ ಶ್ರೀ ಹರ್ಷಿತ್ ಗೌಡ ಎರ್ಧೊಟ್ಟು ಉಪಸ್ತಿತರಿದ್ದರು. ಶ್ರೀ ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿ,ಶ್ರೀ ಗಿರೀಶ್ ಗೌಡ ಮಂಜೋತ್ತು ಕಾರ್ಯಕ್ರಮ ನಿರೂಪಿಸಿದರು.ಶ್ರೀ ನವನೀತ್ ಗೌಡ ಏರ್ಧೊಟ್ಟು ವಂದಿಸಿದರು. ನಂತರ ಕ್ರೀಡಾಭಿಮಾನಿಗಳಿಗೆ ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅನಂತೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ನಾಯ್ಕ ಕುದ್ದoಟೆ ವಹಿಸಿದ್ದರು.ವೇದಿಕೆಯಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಚೇತನ್ ಸಾಲ್ಯಾನ್ ” ಚೇತನ್ ಕನ್ಸ್ಟ್ರಕ್ಷನ್ ” ಮಾಚಾರು, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೆಳಾಲು ಇದರ ಗೌರವಾಧ್ಯಕ್ಷರಾದ ಶ್ರೀ ಶಿವಕುಮಾರ ಬಾರಿತ್ತಾಯ ಪಾರಲ,ಮುಖ್ಯ ತೀರ್ಪುಗಾರರಾದ ಶ್ರೀ ಧರ್ಮೇಂದ್ರ ಕುಮಾರ್,ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ಶ್ರೀಮತಿ ನಿಶಾಯಶವಂತ್ ಬನಂದೂರು, ಅನಂತೇಶ್ವರ ಫ್ರೆಂಡ್ಸ್ ಇದರ ಉಪಾಧ್ಯಕ್ಷರಾದ ಶ್ರೀ ರೂಪೇಶ್ ಪೂಜಾರಿ ಪೋಸೊಟ್ಟು ,ಅನಂತೇಶ್ವರ ಫ್ರೆಂಡ್ಸ್ ಇದರ ಕಾರ್ಯದರ್ಶಿಯಾದ ಶ್ರೀ ಹರ್ಷಿತ್ ಗೌಡ ಎರ್ಧೊಟ್ಟು ಉಪಸ್ತಿತರಿದ್ದರು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಶ್ರೀ ಹರೀಶ್ ಗೌಡ ಆರಿಕೋಡಿ ಇವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಶ್ರೀ ಹರಿಪ್ರಸಾದ್ ಗೌಡ ಅರಣೆಮಾರು ಸ್ವಾಗತಿಸಿ,ಶ್ರೀ ಗಿರೀಶ್ ಗೌಡ ಮಂಜೋತ್ತು ಕಾರ್ಯಕ್ರಮ ನಿರೂಪಿಸಿದರು.ಶ್ರೀ ಯಶವಂತ್ ಗೌಡ ಬನಂದೂರು ವಂದಿಸಿದರು. ನಂತರ ಕೆಸರುಗದ್ದೆಯಲ್ಲಿ ನೆಡದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿಜೇತರ ಪಟ್ಟಿಯನ್ನು ಶ್ರೀ ಕಿರಣ್ ಸುವರ್ಣ ಇರಂತ್ಯಾರು ವಾಚಿಸಿದರು.























