ಪುತ್ತೂರು, ಬಡಗನ್ನೂರು : ಕೊಲ್ಲಿ ರಾಷ್ಟ್ರದ ದುಬೈಯ ಗ್ರಾಂಡ್ ಮಿಲೇನಿಯಮ್ ಹೋಟೆಲ್ ನಲ್ಲಿ ಅ. 26ರಂದು ನಡೆದ ದುಬೈ ಬಿಲ್ಲವ ಸಂಘದ 27ನೇ ವರ್ಷದ ಕುಟುಂಬ ಸಮ್ಮಿಲನದ ಆಚರಣೆಯಲ್ಲಿ ನ. 23 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ಯಾತ್ರಿ ನಿವಾಸ ಹಾಗೂ ಅನ್ನ ಛತ್ರದ ಶಿಲನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದುಬೈ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಉದ್ಯಮಿ ಎಸ್ ಆರ್ ಜಿತೇಂದ್ರ ಸುವರ್ಣ ರವರು ಬಿಡುಗಡೆಗೊಳಿಸಿ ಮಾತನಾಡಿ ಶುಭ ಹಾರೖೆಸಿದರು.
ಕಾರ್ಯಕ್ರಮವು ಸಂಘದ ಅಧ್ಯಕ್ಷ ದೀಪಕ್ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಮಾತನಾಡಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಾತ್ರಿ ನಿವಾಸದ ಉದ್ಘಾಟನೆಯ ಸಂದರ್ಭದಲ್ಲಿ ಹೆಚ್ಚಿನ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಸತೀಶ್ ಪೂಜಾರಿ, ಗೀತಾಂಜಲಿ,ಸುವರ್ಣ ಉಡುಪಿ, ಕೃತಿನ್ ಅಮೀನ್ ಮಂಗಳೂರು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ದುಬೈ ಬಿಲ್ಲವ ಬಂಧುಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶೃತಿ ಹೆರಾಜೆ ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು. ಪ್ರಜ್ಞ ಓಡಿಲ್ ನಾಳ ರವರು ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಬಿಲ್ಲವರ ಶಕ್ತಿ ಕೇಂದ್ರವಾಗಿರುವ ತಾಯಿ ದೇಯಿ ಬೈದೆತಿ ಹಾಗೂ ತುಳುನಾಡಿನ ಕಾರಣಿಕದ ಪುರುಷರಾದ ಅಮರ್ ಬೊಳ್ಳಿಲು ಎಂದೇ ಪ್ರಖ್ಯಾತಿ ಪಡೆದಿರುವ ಕೋಟಿ ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಈ ಶಕ್ತಿಗಳ ಕೃಪಾಶಿರ್ವಾದಗಳೊಂದಿಗೆ ಅಭಿವೃದ್ಧಿಯ ಪರ್ವ ಶುರುವಾಗಲಿದೆ.
ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಜೊತೆಗೆ ದಾನಿಗಳ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಭಕ್ತರ ಸಮ್ಮುಖದಲ್ಲಿ ಇಲ್ಲಿಗೆ ಸುಸಜ್ಜಿತವಾದಂತಹ ಮೂಲಭೂತ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಅನ್ನಛತ್ರ ಹಾಗೂ ಯಾತ್ರಿ ನಿವಾಸದ ವ್ಯವಸ್ಥೆಯನ್ನು ನಿರ್ಮಿಸುವ ನಿರ್ಣಯ ಕೈಗೊಂಡಿದ್ದು,ಅದಕ್ಕೋಸ್ಕರ ಇದೇ ಬರುವ ನವೆಂಬರ್ ತಿಂಗಳು 23 ಬೆಳಿಗ್ಗೆ 10 ಗಂಟೆಗೆ ಟ್ರಸ್ಟ್ ಪ್ರಮುಖರು, ಸಮಾಜದ ಹಿರಿಯರ ನಿರ್ಣಯದಂತೆ ಗುದ್ದಲಿ ಪೂಜೆ ನಡೆಸಲು ತೀರ್ಮಾನಿಸಲಾಗಿದ್ದು, ಕ್ಷೇತ್ರದ ಈ ಎರಡೂ ಕಾರ್ಯಕ್ರಮಗಳಿಗೆ ಗೆಜ್ಜೆಗಿರಿ ಕ್ಷೇತ್ರದ ಭಕ್ತರೆಲ್ಲರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ,























