ಪುತ್ತೂರು: ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಗ್ರಾಮಾಂತರ ಮಂಡಲದ ಮುಂದಿನ ಸಂಘಟನಾ ಅವಧಿಗೆ ಉಪಾಧ್ಯಕ್ಷರುಗಳಾಗಿ ಮಚ್ಚಿಮಲೆ ವಿರೂಪಾಕ್ಷ ಭಟ್, ನಾಗೇಶ್ ಟಿ ಎಸ್ ಕೆಮ್ಮಾಯಿ ಇವರನ್ನು ನಿಯುಕ್ತಿಗೊಳಿಸಿದ್ದು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ತಿಳಿಸಿದ್ದಾರೆ.
ನಾಗೇಶ್ T S ಕೆಮ್ಮಾಯಿ ಅವರು MLC ಕಿಶೋರ್ ಕುಮಾರ್ ಅವರ ಆಪ್ತ ಮತ್ತೆ ಭೂಮಿ ಸ್ಟುಡಿಯೋದ ಮಾಲಕರು ಆಗಿದ್ದರೆ. ಈ ಹಿಂದೆ ಉಪಾಧ್ಯಕ್ಷರಾಗಿದ್ದ ಸುನೀಲ್ ದಡ್ಡು ಅವರನ್ನು ಕೆಲ ದಿನಗಳ ಹಿಂದೆ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿತ್ತು. ಅವರ ತೆರವಾದ ಸ್ಥಾನಕ್ಕೆ ಹಾಗೂ ಇನ್ನೊಂದು ಹೊಸ ಸ್ಥಾನಕ್ಕೆ ಈಗ ಇಬ್ಬರು ನೂತನ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
























