ಪುತ್ತೂರು: ಇಲ್ಲಿನ ಚಿಕ್ಕಮುಡ್ನೂರು ಗ್ರಾಮದ ಮುಡಾಯೂರುಗುತ್ತು “ಆರಿಗೊ”ಪೆರ್ಮಂಡ ಗರೋಡಿಯಲ್ಲಿ ಜ.2ರಂದು ಶ್ರೀ ಬೈದೇರುಗಳ ನೇಮೋತ್ಸವವು ಜರಗಲಿದ್ದು, ಆ ಪ್ರಯುಕ್ತ ಡಿ.23ರಂದು ಪೂರ್ವಾಹ್ನ ಗಂಟೆ 8-30ಕ್ಕೆ ಗೊನೆ ಮುಹೂರ್ತ ನಡೆಯಲಿದೆ. ಡಿ.29ರಂದು ಸೋಮವಾರ ಗರೋಡಿಯಲ್ಲಿ ಹೋಮ, ಶುದ್ದೀಕರಣ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.
ಡಿ.31 ರಂದು ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮುಡಾಯೂರುಗುತ್ತಿನಿಂದ ಭಂಡಾರ ತೆಗೆದು ಬೈದೇರುಗಳ ತಂಬಿಲ ಸೇವೆ, ಜ.1ರಂದು ಇಷ್ಟದೇವತೆ ಮತ್ತು ಎಲ್ನಾಡು ದೈವಗಳ ನೇಮ, ಜ.2ರಂದು ಶ್ರೀ ಬೈದೇರುಗಳ ನೇಮ ನಡೆಯಲಿದ್ದು, ರಾತ್ರಿ ಗಂಟೆ 8-50ಕ್ಕೆ : ಗರಡಿ ಇಳಿಯುವುದು, ರಾತ್ರಿ ಗಂಟೆ 10-30ಕ್ಕೆ ಸನ್ಮಾನ ಕಾರ್ಯಕ್ರಮ, ರಾತ್ರಿ ಗಂಟೆ 1-30ಕ್ಕೆ : ಮಾಣಿಬಾಲೆ ನೇಮ, ರಾತ್ರಿ ಗಂಟೆ 2-30ಕ್ಕೆ : ಕಡ್ಲಲೆ ಬಲಿ ವಗೈರೆ, ರಾತ್ರಿ ಗಂಟೆ 7-30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.





















